Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಹೆಚ್ಚು ಎಸೆತಗಳು ಉಳಿಸಿ ಯಶಸ್ವಿ ಚೇಸಿಂಗ್ ದಾಖಲೆಗಳು

Most balls remaining after a successful run-chase in IPL 2021

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಅಕ್ಟೋಬರ್‌ 5) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 51ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 8 ವಿಕೆಟ್ ಸುಲಭ ಜಯ ಗಳಿಸಿದೆ. ಅದೂ ಕೂಡ 70 ಎಸೆತಗಳು ಬಾಕಿ ಇರುವಾಗಲೇ ಮುಂಬೈ ಪಂದ್ಯ ಗೆದ್ದು ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.

ಯುವ ಬ್ಯಾಟ್ಸ್‌ಮನ್‌ ಇಶಾನ್ ಕಿಶನ್ ಸ್ಫೋಟಕ ಅರ್ಧ ಶತಕ, ನೇಥನ್ ಕೌಲ್ಟರ್ ನೈಲ್ ಮಾರಕ ಬೌಲಿಂಗ್‌ನೊಂದಿಗೆ ಮುಂಬೈ ಇಂಡಿಯನ್ಸ್ ಈ ಸೀಸನ್‌ನಲ್ಲಿ ಪ್ಲೇ ಆಫ್ಸ್‌ ಆಸೆ ಇನ್ನೂ ಜೀವಂತವಾಗಿರಿಸಿಕೊಂಡಿದೆ. ಜೊತೆಗೆ ಈ ಸೀಸನ್‌ನಲ್ಲಿ ಹೆಚ್ಚು ಎಸೆತಗಳು ಬಾಕಿ ಉಳಿಸಿ ಪಂದ್ಯ ಗೆದ್ದ ದಾಖಲೆಗೆ ಎಂಐ ಕಾರಣವಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್, ಎವಿನ್ ಲೂಯಿಸ್ 24, ಯಶಸ್ವಿ ಜೈಸ್ವಾಲ್ 12, ಸಂಜು ಸ್ಯಾಮ್ಸನ್ 3, ಶಿವಂ ದೂಬೆ 3, ಗ್ಲೆನ್ ಫಿಲಿಪ್ಸ್ 4, ಡೇವಿಡ್ ಮಿಲ್ಲರ್ 15, ರಾಹುಲ್ ತೆವಾಟಿಯಾ 12, ಕುಲದೀಪ್ ಯಾದವ್ 0, ಚೇತನ್ ಸಕಾರಿಯಾ 6, ಮುಸ್ತಫಿಜುರ್ ರೆಹಮಾನ್ 8 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್‌ ಕಳೆದು 90 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ 22 (13), ಇಶಾನ್ ಕಿಶನ್ ಅಜೇಯ 50 (25), ಸೂರ್ಯಕುಮಾರ್ ಯಾದವ್ 13, ಹಾರ್ದಿಕ್ ಪಾಂಡ್ಯ ಅಜೇಯ 5 ರನ್‌ನೊಂದಿಗೆ 8.2 ಓವರ್‌ಗೆ 2 ವಿಕೆಟ್ ಕಳೆದು 94 ರನ್ ಗಳಿಸಿ ಗೆಲುವಿನ ನಗು ಬೀರಿತು.

ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಜಸ್‌ಪ್ರೀತ್‌ ಬೂಮ್ರಾ 2, ನೇಥನ್ ಕೌಲ್ಟರ್ ನೈಲ್ 4, ಜೇಮ್ಸ್ ನೀಶನ್ 3 ವಿಕೆಟ್‌ ಪಡೆದುಕೊಂಡರೆ, ಮುಂಬೈ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ಚೇತನ್ ಸಕಾರಿಯಾ 2 ವಿಕೆಟ್‌ನೊಂದಗೆ ಗಮನ ಸೆಳೆದರು. ಈ ಪಂದ್ಯದಲ್ಲಿ ಮುಂಬೈ ಸೋತಿದ್ದರೆ ಪಂಜಾಬ್ ಮತ್ತು ಮುಂಬೈ ಎರಡೂ ಪ್ಲೇ ಆಫ್ಸ್‌ ಅವಕಾಶ ಕಳೆದುಕೊಳ್ಳುತ್ತಿತ್ತು.

Pant CSK ವಿರುದ್ಧ ಗೆಲ್ಲುವ ಸಾಧಿಸಿದ ನಂತರ ಹೇಳಿದ್ದೇನು | Oneindia Kannada

ಐಪಿಎಲ್ 2021ರಲ್ಲಿ ತಂಡವೊಂದು ಅತೀ ಹೆಚ್ಚು ಎಸೆತಗಳು ಬಾಕಿ ಉಳಿಸಿ ಯಶಸ್ವಿ ಚೇಸಿಂಗ್ ಮಾಡಿದ ದಾಖಲೆಗಳ ಪಟ್ಟಿ
* 70 ಎಸೆತಗಳು ಬಾಕಿ, ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಶಾರ್ಜಾ
* 60 ಎಸೆತಗಳು ಬಾಕಿ, ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಬುಧಾಬಿ
* 29 ಎಸೆತಗಳು ಬಾಕಿ, ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್, ಅಬುಧಾಬಿ
* 26 ಎಸೆತಗಳು ಬಾಕಿ, ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್, ಮುಂಬೈ

Story first published: Wednesday, October 6, 2021, 10:06 [IST]
Other articles published on Oct 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+