ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಮಾಡಿದ ಟಾಪ್ 5 ಬೌಲರ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾದಾಗಿನಿಂದಲೂ ಬ್ಯಾಟರ್‌ಗಳು ತಮ್ಮ ಆರ್ಭಟವನ್ನು ನಡೆಸಿದ್ದಾರೆ. ಚುಟುಕು ಫಾರ್ಮೆಟ್‌ನಲ್ಲಿ ಬ್ಯಾಟರ್‌ಗಳಿಗೆ ರಾತ್ರೋ ರಾತ್ರಿ ಸ್ಟಾರ್‌ಗಿರಿ ಲಭ್ಯವಾಗುತ್ತದೆ. ಆದರೆ ಟಿ20 ಫಾರ್ಮೆಟ್‌ನಲ್ಲೂ ಬೌಲರ್‌ಗಳು ಸಹ ಬಿಗುವಿನ ದಾಳಿ ನಡೆಸಿ, ಬ್ಯಾಟರ್‌ಗಳ ರನ್ ದಾಹಕ್ಕೆ ಬ್ರೇಕ್ ಹಾಕಿದ್ದಾರೆ. ಅಲ್ಲದೆ ಬ್ಯಾಟರ್‌ಗಳ ತಂತ್ರವನ್ನು ಮೆಟ್ಟಿನಿಂತು ಅಬ್ಬರಿಸಿದ್ದಾರೆ. ಐಪಿಎಲ್ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡಿದಾಗ ಅದೆಷ್ಟೋ ಬೌಲರ್‌ಗಳು ತಮ್ಮ ಭರ್ಜರಿ ಬೌಲಿಂಗ್‌ನಿಂದ ಎದುರಾಳಿ ಬ್ಯಾಟರ್‌ಗಳಿಗೆ ಕಾಟ ನೀಡಿದ್ದಾರೆ.
ಬೌಲರ್‌ಗಳು ರನ್‌ಗಳಿಗೆ ಬ್ರೇಕ್ ಹಾಕಿ ಮಿಂಚಿದ್ದಾರೆ. ಟಿ20 ಫಾರ್ಮೆಟ್‌ನಲ್ಲಿ ಪ್ರತಿಯೊಂದು ಎಸೆತಕ್ಕೂ ಬೆಲೆ ಇದೆ. ಬೌಲರ್‌ಗಳು ಒಂದು ಡಾಟ್ ಬೌಲ್ ಮಾಡಿದರೂ, ತಂಡಕ್ಕೆ ಆಧಾರವಾಗಬಲ್ಲರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬೌಲ್‌ಗಳನ್ನು ಮಾಡಿದ ಬೌಲರ್ ಯಾರು? ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಇದಕ್ಕೆ ಉತ್ತರ ಇಲ್ಲಿದೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಕೀರ್ತಿ ಭುವನೇಶ್ವರ್ ಕುಮಾರ್ ಅವರಿಗೆ ಸಲ್ಲುತ್ತದೆ. ಇವರು ಈ ವರೆಗೆ ಲೀಗ್‌ನಲ್ಲಿ 1905 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ. ಇವರು ಈ ವರೆಗೆ 202 ಪಂದ್ಯಗಳನ್ನು ಆಡಿದ್ದು 749 ಓವರ್ ಬೌಲಿಂಗ್ ನಡೆಸಿದ್ದಾರೆ. ಈ ವೇಳೆ 5767 ರನ್ ನೀಡಿ 220 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ 3 ಬಾರಿ 4 ವಿಕೆಟ್‌ಗೆ, 2 ಬಾರಿ 5 ವಿಕೆಟ್ ಪಡೆದಿದ್ದಾರೆ. ಸದ್ಯ ಭುವಿ ಆರ್‌ಸಿಬಿ ತಂಡದ ಪರ ಆಡುತ್ತಿದ್ದಾರೆ.
ಸುನಿಲ್‌ಗೆ ಎರಡನೇ ಸ್ಥಾನ
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕೆಕೆಆರ್ ತಂಡದ ಸುನಿಲ್ ನರೈನ್ ಇದ್ದಾರೆ. ಇವರು ಆಡಿದ 199 ಪಂದ್ಯಗಳಲ್ಲಿ 1796 ಡಾಟ್ ಬಾಲ್ ಎಸೆದಿದ್ದಾರೆ. ಅಲ್ಲದೆ ಇವರು 197 ವಿಕೆಟ್ ಸಹ ಪಡೆದಿದ್ದಾರೆ. ಇನ್ನು ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಮಾಡಿದ ಬೌಲರ್‌ಗಳ ಪಟ್ಟಿಯಲ್ಲಿ ಆರ್.ಅಶ್ವಿನ್ ಅವರಿಗೆ ಮೂರನೇ ಸ್ಥಾನ. ಇವರು ಆಡಿದ 221 ಪಂದ್ಯಗಳಲ್ಲಿ 1623 ಡಾಟ್ ಬಾಲ್ ಎಸೆದಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ನಾಲ್ಕನೇ ಬೌಲರ್ ಎಂಬ ಕೀರ್ತಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಸಲ್ಲುತ್ತದೆ. ಇವರು ಆಡಿದ 156 ಪಂದ್ಯಗಳಲ್ಲಿ 1488 ಡಾಟ್ ಬಾಲ್ ಎಸೆದಿದ್ದಾರೆ. ಇವರು ಈ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಅಖಾಡಕ್ಕೆ ಇಳಿಯುತ್ತಿದ್ದಾರೆ. ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ರವೀಂದ್ರ ಜಡೇಜಾ ಅವರು ಇದ್ದು, ಇವರು ಆಡಿದ 265 ಪಂದ್ಯಗಳಲ್ಲಿ 1357 ಡಾಟ್ ಬಾಲ್ ಎಸೆದಿದ್ದಾರೆ.
ಅತಿ ಹೆಚ್ಚು ಡಾಟ್ ಬಾಲ್ ಮಾಡಿದ ಬೌಲರ್ಸ್
ಭುವನೇಶ್ವರ್ ಕುಮಾರ್, 1905 ಡಾಟ್ ಬಾಲ್
ಸುನಿಲ್ ನರೈನ್, 1796 ಡಾಟ್ ಬಾಲ್
ಆರ್‌ಅಶ್ವಿನ್, 1623 ಡಾಟ್ ಬಾಲ್
ಜಸ್ಪ್ರೀತ್ ಬುಮ್ರಾ, 1488 ಡಾಟ್ ಬಾಲ್
ರವೀಂದ್ರ ಜಡೇಜಾ, 1357 ಡಾಟ್ ಬಾಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications