For Quick Alerts
ALLOW NOTIFICATIONS  
For Daily Alerts
 

ಮೊದಲ ಪಂದ್ಯದಲ್ಲಿ ಈ ಕುತೂಹಲಕಾರಿ ಕಾದಾಟಕ್ಕೆ ಕಾದಿರುವೆ: ಆಕಾಶ್ ಚೋಪ್ರಾ

most exciting clash in the IPL 2021 opening match will be between Bumrah and Kohli-Aakash chopra

ಭಾರತ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನ ಮೊದಲ ಪಂದ್ಯದಲ್ಲಿನ ಕುತೂಹಲಕಾರಿ ಕಾದಾಟವೊಂದನ್ನು ನೋಡಲು ಕಾದು ಕುಳಿದಿದ್ದಾರಂತೆ. ಹೀಗಂತ ಸ್ವತಃ ಆಕಾಶ್ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಟೀಮ್ ಇಂಡಿಯಾದ ಭಾಗವಾಗಿರುವ ಈ ಜೋಡಿ ಮೈದಾನದಲ್ಲಿ ಮುಖಾಮುಖಿಯಾವುದು ನೋಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ಆಕಾಶ್ ಚೋಪ್ರ ಹೀಗೆ ಹೇಳಿದ ಆ ಆಟಗಾರರು ವಿರಾಟ್ ಕೊಹ್ಲಿ ಹಾಗೂ ಜಸ್‌ಪ್ರೀತ್ ಬೂಮ್ರಾ. ಈ ಇಬ್ಬರ ನಡುವಿನ ಸೆಣೆಸಾಟ ಐಪಿಎಲ್ 2021ಯ ಮೊದಲ ಪಂದ್ಯದ ಅತ್ಯಂತ ಕುತೂಹಲಕಾರಿ ಕದನವಾಗಿದೆ ಎಂದು ಆಕಾಶ್ ಚೋಪ್ರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜಸ್‌ಪ್ರೀತ್ ಬೂಮ್ರಾ ಹಾಗೂ ವಿರಾಟ್ ಕೊಹ್ಲಿ ನಡುವಿನ ಸ್ಪರ್ಧೆಯನ್ನು ಬೆಸ್ಟ್ vs ಬೆಸ್ಟ್ ಮುಖಾಮುಖಿ ಎಂದು ಚೋಪ್ರ ಕರೆದಿದ್ದಾರೆ. ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನೊಂದಿಗೆ ಐಪಿಎಲ್‌ಗೆ ಬಂದಿಳಿದಿದ್ದರೆ ಜಸ್‌ಪ್ರೀತ್ ಬೂಮ್ರಾ ವಿವಾಹವಾಗಿ ವಿರಾಮ ಪಡೆದು ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.

"ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ, ಮತ್ತೊಂದೆಡೆ ಬೂಮ್ರಾ ಹೊಸ ಚೆಂಡಿನ ಮೂಲಕ ದಾಳಿಗಿಳಿಯಲಿದ್ದಾರೆ. ಇದು ಕುತೂಹಲಕಾರಿ ಕಾದಾಟ ಯಾಕೆಂದರೆ ಜಸ್‌ಪ್ರೀತ್ ಬೂಮ್ರಾ ವಿರಾಟ್ ಕೊಹ್ಲಿಯನ್ನು ಹಲವು ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ" ಎಂದು ಚೋಪ್ರ ಹೇಳಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ವೇಗಿ ಜಸ್‌ಪ್ರೀತ್ ಬೂಮ್ರಾ ಉತ್ತಮ ದಾಖಲೆ ಹೊಂದಿದ್ದಾರೆ. 2013ರ ಐಪಿಎಲ್‌ನಲ್ಲಿ ಪದಾರ್ಪಣಾ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಮೊದಲ ಬಲಿಯಾಗಿ ಪಡೆದಿದ್ದರು ಬೂಮ್ರಾ. ಬಳಿಕ ಕಳೆದ 2020ರಲ್ಲಿ ಐಪಿಎಲ್‌ನ 100ನೇ ವಿಕೆಟ್ ಆಗಿ ಕೊಹ್ಲಿ ಬೂಮ್ರಾಗೆ ವಿಕೆಟ್ ಒಪ್ಪಿಸಿದ್ದಾರೆ.

Story first published: Friday, April 9, 2021, 17:00 [IST]
Other articles published on Apr 9, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+