Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇವರೇ ನೋಡಿ ಐಪಿಎಲ್‌ ತಂಡಗಳ ಯಶಸ್ವಿ ಕೋಚ್‌; ಪಟ್ಟಿಯಲ್ಲಿ ಫ್ಲೆಮಿಂಗ್‌ಗೆ ಅಗ್ರ ಸ್ಥಾನ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ಸ್ಟಾರ್ ಆಟಗಾರರು ಅಬ್ಬರಿಸಿ ಸುದ್ದಿ ಮಾಡುತ್ತಾರೆ. ಆದರೆ ಈ ಲೀಗ್‌ನ ಪೂರ್ಣ ವಿನ್ಯಾಸವನ್ನು ಡಗೌಟ್‌ನಲ್ಲಿ ಕುಳಿತು ಹಲವು ಸಿಬ್ಬಂದಿ ತಯಾರಿಸುತ್ತಾರೆ. ಈ ವೇಳೆ ತಂಡದ ಕೋಚ್‌ಗಳ ಪಾತ್ರ ಸಹ ಮುಖ್ಯವಾಗುತ್ತದೆ. ಐಪಿಎಲ್‌ ಇತಿಹಾಸದಲ್ಲಿ ಉತ್ತಮ ತಂಡವನ್ನು ಕಟ್ಟಿ ಹಲವು ಟ್ರೋಫಿ ಗೆಲ್ಲುವಲ್ಲಿ ಕಾರಣರಾದ ಕೋಚ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಯಶಸ್ವಿ ಕೋಚ್‌ಗಳ ಪಟ್ಟಿಯಲ್ಲಿ ಐದು ಬಾರಿ ಐಪಿಎಲ್‌ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್‌ ಸ್ಟೀಫನ್ ಫ್ಲೆಮಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಚೆನ್ನೈ ತಂಡ ಯಶಸ್ವಿ ತಂಡಗಳಲ್ಲಿ ಒಂದಾಗುವಂತೆ ಮಾಡುವಲ್ಲಿ ಫ್ಲೆಮಿಂಗ್ ಕೊಡುಗೆ ಅಪಾರ. ಇವರು 2009ರಲ್ಲಿ ಸಿಎಸ್‌ಕೆ ತಂಡದ ಮುಖ್ಯ ಕೋಚ್ ಆದರು. ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಫ್ಲೆಮಿಂಗ್ ದಶಕಗಳ ಶ್ರಮದ ಫಲವಾಗಿ ಸಿಎಸ್‌ಕೆ ಮೈದಾನದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.

Most IPL Titles as Coach

ಸ್ಟೀಫನ್ ಫ್ಲೆಮಿಂಗ್

ಫ್ಲೆಮಿಂಗ್ ಅವರ ಮುಂದಾಳತ್ವದಲ್ಲಿ ಸಿಎಸ್‌ಕೆ 2010, 2011, 2018, 2021 ಹಾಗೂ 2023ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇವರು ಆಟಗಾರರಿಗೆ ಅವರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮನವರಿಕೆ ಮಾಡಿ ತಂಡದ ಯಶಸ್ಸಿನಲ್ಲಿ ಶ್ರಮಿಸಿದ್ದಾರೆ. ಇವರು ಹಾಗೂ ಧೋನಿ ಅವರ ಮುಂದಾಳತ್ವದಲ್ಲಿ ತಂಡ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ಲೇ ಆಫ್‌ ಪ್ರವೇಶಿಸಿದ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ.

ಮಹೇಲ ಜಯವರ್ಧನೆ

ಐಪಿಎಲ್‌ನ ಯಶಸ್ವಿ ಕೋಚ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ ಅವರಿಗೂ ಸ್ಥಾನ ಇದೆ. ಇವರ ಮುಂದಾಳತ್ವದಲ್ಲಿ ಮುಂಬೈ ತಂಡ ಸಹ ಮೂರು ಬಾರಿ ಐಪಿಎಲ್‌ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ ಮಹೇಲ ಮಾಡರ್ನ್ ಡೇ ಬಲಿಷ್ಠ ಟಿ20 ತಂಡವನ್ನು ಕಟ್ಟಿದ ಹೆಗ್ಗಳಿಕೆ ಹೊಂದಿದ್ದಾರೆ. ರೋಹಿತ್ ಶರ್ಮಾ ಹಾಗೂ ಇವರ ಕಾಂಬಿನೇಷನ್‌ನಲ್ಲಿ ಮುಂಬೈ ಭಾರೀ ಯಶಸ್ಸು ಸಾಧಿಸಿತ್ತು.

Most IPL Titles as Coach

ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್‌ ಆಗಿದ್ದ ಟ್ರೆವರ್ ಬೇಲಿಸ್ ಅವರಿಗೂ ಸಲ್ಲುತ್ತದೆ. ಇವರ ಮುಂದಾಳತ್ವದಲ್ಲಿ ಕೆಕೆಆರ್‌ 2012, 2014ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇವರು ಹಾಗೂ ಗೌತಮ್‌ ಗಂಭೀರ್ ಉತ್ತಮ ತಂಡವನ್ನು ಕಟ್ಟಿದ್ದರು.

ಇವರು ಸಹ ಯಶಸ್ವಿ ಕೋಚ್‌

ಕೆಕೆಆರ್‌ ತಂಡ ಮೂರನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದಾಗ ಚಂದ್ರಕಾಂತ್ ಪಂಡಿತ್ ಕೋಚ್ ಆಗಿದ್ದರು. ಇನ್ನು 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್‌ ಚಾಂಪಿಯನ್ ಆದಾಗ ಆಶಿಶ್ ನೆಹ್ರಾ ತಂಡದ ಚುಕ್ಕಾಣಿ ಹಿಡಿದಿದ್ದರು. ಟಾಮ್‌ ಮೂಡಿ 2016ರಲ್ಲಿ ಎಸ್‌ಆರ್‌ಎಚ್‌ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಶ್ರಮಿಸಿದ್ದರು. ಜಾನ್‌ ರೈಟ್‌ ಹಾಗೂ ರಿಕ್ಕಿ ಪಾಂಟಿಂಗ್ ಮುಂಬೈ ಇಂಡಿಯನ್ಸ್ ತಂಡಕ್ಕೆ ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ತೊಡಿಸಿದ್ದಾರೆ. 2008ರಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಆದಾಗ ಶೇನ್ ವಾರ್ನ್ ತಂಡದ ನಾಯಕ ಹಾಗೂ ಕೋಚ್ ಆಗಿದ್ದರು. ಆರ್‌ಸಿಬಿ ತಂಡದ ಕೋಚ್ ಆಂಡಿ ಫ್ಲವರ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Story first published: Saturday, May 16, 2026, 19:20 [IST]
Other articles published on May 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+