ಕ್ರಿಕೆಟ್ ಅಥವಾ ಯಾವುದೇ ಕ್ರೀಡೆಯಲ್ಲಿ ಯಾರೂ ನೋಡಲು ಬಯಸದಿರುವುದು ಸೋಲು. ಆದರೆ, ಟಿ20 ಕ್ರಿಕೆಟ್ ತನ್ನ ಚಂಚಲ ಸ್ವಭಾವಕ್ಕೆ ಹೆಸರುವಾಸಿಯಾಗಿರುವುದರಿಂದ, ಫಲಿತಾಂಶಗಳು ಕಣ್ಣು ಮಿಟುಕಿಸುವಲ್ಲಿ ಬದಲಾಗುತ್ತವೆ. ಯಾವುದೇ ತಂಡವು ಯಾವ ತಂಡವನ್ನು ಬೇಕಾದರೂ ಸೋಲಿಸಬಹುದು ಮತ್ತು ಇದರ ಸಾಧ್ಯತೆಯು ಸುಮಾರು ಶೇ.100ರಷ್ಟು ಇರುತ್ತದೆ.
ದುರ್ಬಲ ತಂಡಗಳು ಕ್ರಿಕೆಟ್‌ನ ಬಲಿಷ್ಠ ತಂಡಗಳಿಗೆ ಆಘಾತಕಾರಿ ಸೋಲು ನೀಡಿರುವ ಅನೇಕ ಪಂದ್ಯಗಳನ್ನು ನಾವು ನೋಡಿದ್ದೇವೆ. ಅದೂ ಐಸಿಸಿ ಪಂದ್ಯಾವಳಿಗಳಲ್ಲಿ ಅನಿರೀಕ್ಷಿತ ಫಲಿತಾಂಶ ಎದುರಾದರೆ, ಶೇಕಡಾವಾರು ಗೆಲ್ಲುವ ಅಗ್ರ ತಂಡಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಮತ್ತು ಪ್ರಶಸ್ತಿ ಕನಸನ್ನು ನುಚ್ಚುನೂರು ಮಾಡುತ್ತದೆ.

ಟಿ20 ವಿಶ್ವಕಪ್‌ಗೆ ಬಂದರೆ, ಇಲ್ಲಿ ಯಾವುದೇ ತಂಡವು ಸತತವಾಗಿ ಗೆಲ್ಲುವುದಿಲ್ಲ. ನಾವು ಬಹಳಷ್ಟು ಬಾರಿ ಉತ್ತಮವೆನಿಸಿಕೊಂಡಿದ್ದ ತಂಡಗಳು ಸೋತಿರುವುದನ್ನು ಕಂಡಿದ್ದೇವೆ. ವಿಶೇಷವಾಗಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿರುವುದರಿಂದ ಇದೀಗ ಈ ವಿಷಯವು ಹೆಚ್ಚು ಬಿಸಿಯಾಗುತ್ತದೆ.
ಈ ಸುದ್ದಿಯಲ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸೋಲುಗಳನ್ನು ಕಂಡಿರುವ ಮತ್ತು ಅನಗತ್ಯ ಪಟ್ಟಿಯಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಂಡ ತಂಡಗಳ ಪಟ್ಟಿ ಇಲ್ಲಿದೆ.

ಬಾಂಗ್ಲಾದೇಶ - 29
ಶ್ರೀಲಂಕಾ - 21
ಇಂಗ್ಲೆಂಡ್ - 20
ಪಾಕಿಸ್ತಾನ - 19
ನ್ಯೂಜಿಲೆಂಡ್ - 18
ವೆಸ್ಟ್ ಇಂಡೀಸ್ - 18
ಅಫ್ಘಾನಿಸ್ತಾನ - 15
ಆಸ್ಟ್ರೇಲಿಯಾ - 15
ಭಾರತ - 15
ದಕ್ಷಿಣ ಆಫ್ರಿಕಾ - 15
ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸೋಲು ಕಂಡ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬಾಂಗ್ಲಾದೇಶ ಕ್ರಿಕೆಟ್ ತಂಡವು ಪ್ರಸ್ತುತ 2024ರ ಟಿ20 ವಿಶ್ವಕಪ್‌ನಲ್ಲಿ ಕಠಿಣ ಸಮಯವನ್ನು ಎದುರಿಸುತ್ತಿದೆ. ತಂಡವು ಪಂದ್ಯಾವಳಿಯಿಂದ ಹೊರಬೀಳಲು ಬಹಳ ಹತ್ತಿರದಲ್ಲಿದೆ.

ಇತ್ತೀಚೆಗೆ, ಬಾಂಗ್ಲಾದೇಶ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಚಕ ಸೋಲು ಅನುಭವಿಸಿತು. ಈ ಮೂಲಕ ಟಿ20 ವಿಶ್ವಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ತಮ್ಮ ಸೋಲುಗಳನ್ನು ಸಂಖ್ಯೆಯನ್ನು 29ಕ್ಕೆ ಏರಿಸಿಕೊಂಡಿತು.
ದ್ವೀಪರಾಷ್ಟ್ರ ಶ್ರೀಲಂಕಾ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಟ್ಟಾರೆ 21 ಸೋಲುಗಳನ್ನು ಅನುಭವಿಸುವ ಮೂಲಕ 2ನೇ ಸ್ಥಾನದಲ್ಲಿದೆ. ಇನ್ನು ತಮ್ಮ ಕ್ಯಾಬಿನೆಟ್‌ನಲ್ಲಿ ಎರಡು ಟಿ20 ಟ್ರೋಫಿಗಳನ್ನು ಹೊಂದಿರುವ ತಂಡ ವೆಸ್ಟ್ ಇಂಡೀಸ್.
2012ರಲ್ಲಿ ಮತ್ತು 2016ರಲ್ಲಿ ಕೆರಿಬಿಯನ್ ಪಡೆ ಟಿ20 ಚಾಂಪಿಯನ್ ಪಟ್ಟಕ್ಕೇರಿತ್ತು. ಆದರೆ, ತಮ್ಮ ಟಿ20 ವಿಶ್ವಕಪ್ ಅಭಿಯಾನದಲ್ಲಿ 18 ಸೋಲುಗಳನ್ನು ಅನುಭವಿಸಿದ್ದಾರೆ.
ಹಿಂದೆ ಕ್ರಿಸ್ ಗೇಲ್, ಡ್ವೇನ್ ಬ್ರಾವೋ ಮತ್ತು ಮರ್ಲಾನ್ ಸ್ಯಾಮುಯೆಲ್ಸ್ ಅವರಂತಹ ಸ್ಟಾರ್‌ಗಳಿಂದ ತುಂಬಿದ್ದರೂ ಸಹ ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಆಧಾರಸ್ತಂಭವಾಗಿರುವ ರೋವ್ಮನ್ ಪೊವೆಲ್, ಆಂಡ್ರೆ ರಸೆಲ್ ಮತ್ತು ರೋಸ್ಟನ್ ಚೇಸ್ ಅವರಂತಹ ಪ್ರಸ್ತುತ ಆಟಗಾರರಿದ್ದರೂ ಹಿನ್ನಡೆ ಅನುಭವಿಸಿದೆ.
ಮತ್ತೊಂದೆಡೆ, ಟಿ20 ವಿಶ್ವಕಪ್‌ನ 2010 ಮತ್ತು 2022ರಲ್ಲಿ ಗೆದ್ದು ಎರಡು ಟ್ರೋಫಿಗಳನ್ನು ಹೊಂದಿರುವ ಇಂಗ್ಲೆಂಡ್ ತಂಡ ಇಲ್ಲಿಯವರೆಗೆ 20 ಸೋಲುಗಳನ್ನು ಕಂಡಿದೆ.
2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಚಾಂಪಿಯನ್ ಟ್ರೋಫಿಯನ್ನು ಮುಡಿಗೇರಿಸಿಕೊಂಡ ಭಾರತ ಮತ್ತು 2021ರಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಿದ್ದ ಆಸ್ಟ್ರೇಲಿಯಾ ತಂಡಗಳು ಟಿ20 ವಿಶ್ವಕಪ್ ಇತಿಹಾಸದಲ್ಲಿ 15 ಬಾರಿ ಸೋಲು ಎದುರಿಸಿವೆ. ಉಭಯ ತಂಡಗಳನ್ನು ಯಾವಾಗಲೂ ಮೆಚ್ಚಿನ ತಂಡಗಳೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅಂಕಿಅಂಶಗಳು ಉಳಿದ ತಂಡಗಳಿಗೆ ಹೋಲಿಸಿದರೆ ಆಘಾತಕಾರಿಯಲ್ಲ.