Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆಸ್ಟ್ ಕ್ರಿಕೆಟ್: 5 ವಿಕೆಟ್ ಗಳಿಕೆ, ಬಾಥಮ್ ದಾಖಲೆ ಮುರಿದ ಅಶ್ವಿನ್

Most Test 5-wicket hauls: Ashwin overtakes Botham, now 8th on list

ಚೆನ್ನೈ, ಫೆಬ್ರವರಿ 8: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಇಲ್ಲಿನ ಎಂ ಚಿದಂಬರಂ ಮೈದಾನದಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಹೊಸ ದಾಖಲೆ ಬರೆದಿದ್ದಾರೆ.

ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಸೋಮವಾರ(ಫೆ.8) ದಂದು ಇಂಗ್ಲೆಂಡ್ 2ನೇ ಇನ್ನಿಂಗ್ಸ್ ನ ಮೊದಲ ಓವರ್ ಮೊದಲ ಎಸೆತದಲ್ಲೇ ಅಶ್ವಿನ್ ಅವರು ವಿಕೆಟ್ ಉದುರಿಸಿದ ಸಾಧನೆ ಮಾಡಿದ್ದರು.

ಇದಾದ ಬಳಿಕ ಉತ್ತಮ ಬೌಲಿಂಗ್ ಮಾಡಿ 5 ವಿಕೆಟ್ ಗಳಿಸಿದರು. ಒಟ್ಟಾರೆ 17.3 ಓವರ್ ಗಳಲ್ಲಿ 2 ಮೇಡನ್ ಜೊತೆಗೆ 61ರನ್ನಿತ್ತು 6 ವಿಕೆಟ್ ಗಳಿಸಿದರು. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ 178 ರನ್ನಿಗೆ ಅಲೌಟ್ ಆಗಿದ್ದು, ಭಾರತಕ್ಕೆ ಗೆಲ್ಲಲು 420ರನ್ ಗುರಿ ನೀಡಲಾಗಿದೆ. ನಾಲ್ಕನೇ ದಿನದ ಅಂತ್ಯಕ್ಕೆ ಭಾರತ ರೋಹಿತ್ ಶರ್ಮ ವಿಕೆಟ್ ಕಳೆದುಕೊಂಡು 39 ರನ್ ಗಳಿಸಿತ್ತು.

ತಮ್ಮ ವೃತ್ತಿ ಬದುಕಿನಲ್ಲಿ 28ನೇ ಬಾರಿಗೆ 5 ವಿಕೆಟ್ ಗಳಿಸುವ ಮೂಲಕ ಇಂಗ್ಲೆಂಡಿನ ಮಾಜಿ ಆಲ್ ರೌಂಡರ್ ಇಯಾನ್ ಬಾಥಮ್ ಅವರ ದಾಖಲೆಯನ್ನು ಸಮಗಟ್ಟಿದ್ದಾರೆ. ಇದಲ್ಲದೆ, ಅತಿ ಹೆಚ್ಚು ವಿಕೆಟ್ ಪಟ್ಟಿಯಲ್ಲಿ ಬಾಥಮ್ ಅವರ 383 ವಿಕೆಟ್ ದಾಟಿ ಅಶ್ವಿನ್ ಮುಂದಕ್ಕೆ ಸಾಗಿದ್ದಾರೆ.

ಅಶ್ವಿನ್ ಅಂಕಿ ಅಂಶ:
34ವರ್ಷ ವಯಸ್ಸಿನ ಅಶ್ವಿನ್ ಅವರು ಒಟ್ಟಾರೆ 74 ಟೆಸ್ಟ್ ಪಂದ್ಯಗಳಿಂದ 386 ವಿಕೆಟ್ ಗಳಿಸಿದ್ದು, 28 ಬಾರಿ 5 ವಿಕೆಟ್ ಗಳಿಸಿದ್ದಾರೆ, 7 ಬಾರಿ 10 ವಿಕೆಟ್ ಪಡೆದಿದ್ದಾರೆ, 7/59 ಶ್ರೇಷ್ಠ ಪ್ರದರ್ಶನ. ಬ್ಯಾಟಿಂಗ ನಲ್ಲೂ ಮಿಂಚಿ 4 ಟೆಸ್ಟ್ ಶತಕ, 11 ಅರ್ಧಶತಕ ಗಳಿಸಿದ್ದಾರೆ.

ಅತಿ ಹೆಚ್ಚು 5 ವಿಕೆಟ್ ಗಳಿಕೆ ಟಾಪ್ 10 ಬೌಲರ್ಸ್:
ಮುರಳಿಧರನ್ (ಶ್ರೀಲಂಕಾ): 67 ಬಾರಿ
ಶೇನ್ ವಾರ್ನ್(ಆಸ್ಟ್ರೇಲಿಯಾ): 37
ಸರ್ ರಿಚರ್ಡ್ ಹ್ಯಾಡ್ಲಿ(ನ್ಯೂಜಿಲೆಂಡ್): 36
ಅನಿಲ್ ಕುಂಬ್ಳೆ (ಭಾರತ): 35
ರಂಗನಾ ಹೆರಾತ್ (ಶ್ರೀಲಂಕಾ): 34
ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್): 30
ಗ್ಲೆನ್ ಮೆಗ್ರಾ (ಆಸ್ಟ್ರೇಲಿಯಾ): 29
ಆರ್ ಅಶ್ವಿನ್ (ಭಾರತ): 28
ಇಯಾನ್ ಬಾಥಮ್ (ಇಂಗ್ಲೆಂಡ್): 27
ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ): 26
ವಾಸಿಂ ಅಕ್ರಂ (ಪಾಕಿಸ್ತಾನ): 25
ಹರ್ಭಜನ್ ಸಿಂಗ್ (ಭಾರತ) : 25

Story first published: Tuesday, February 9, 2021, 9:52 [IST]
Other articles published on Feb 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+