ಪವರ್ ಪ್ಲೇನಲ್ಲಿ ಹೆಚ್ಚು ವಿಕೆಟ್: ಜಾನ್ಸನ್ ದಾಖಲೆ ಸರಿಗಟ್ಟಿದ ಟ್ರೆಂಟ್ ಬೋಲ್ಟ್

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಟ್ರೆಂಟ್ ಬೋಲ್ಟ್ ವಿಶೇಷವಾದ ದಾಖಲೆ ಬರೆದಿದ್ದಾರೆ. ಆವೃತ್ತಿಯೊಂದರ ಪವರ್ ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮಿಚೆಲ್ ಜಾನ್ಸನ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಐಪಿಎಲ್ 2020ನೇ ಆವೃತ್ತಿಯಲ್ಲಿ ಟ್ರೆಂಟ್ ಬೋಲ್ಟ್ 15 ಪಂದ್ಯಗಳಿಂದ 25 ವಿಕೆಟ್ ಪಡೆದುಕೊಂಡಿದ್ದಾರೆ. ಅದರಲ್ಲಿ 16 ವಿಕೆಟ್ ಪವರ್ ಪ್ಲೇನಲ್ಲಿ ಪಡೆದುಕೊಂಡಿದ್ದಾರೆ.
ಈ ಮೂಲಕ ಬೌಲರ್ ಒಬ್ಬರು ಐಪಿಎಲ್ ಆವೃತ್ತಿಯೊಂದರ ಪವರ್ ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುಂಚೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಜಾನ್ಸನ್ ಈ ದಾಖಲೆ ಮಾಡಿದ್ದರು.
2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಿದ್ದ ಮಿಚೆಲ್ ಜಾನ್ಸನ್ ಪವರ್ ಪ್ಲೇನಲ್ಲಿ 16 ವಿಕೆಟ್ ಪಡೆದಿದ್ದರು. ಈ ದಾಖಲೆಯನ್ನು ಟ್ರೆಂಟ್ ಬೋಲ್ಟ್ ಸರಿಗಟ್ಟಿದ್ದಾರೆ.
2013ನೇ ಆವೃತ್ತಿಯಲ್ಲಿ ಮಿಚೆಲ್ ಜಾನ್ಸನ್ ಒಟ್ಟು 17 ಪಂದ್ಯಗಳನ್ನು ಆಡಿದ್ದರು. 24 ವಿಕೆಟ್ ಪಡೆದುಕೊಂಡಿದ್ದರು. ಇನ್ನು 2020ರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಟ್ರೆಂಟ್ ಬೋಲ್ಟ್ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಕಗಿಸೋ ರಬಾಡ, ಎರಡನೇ ಸ್ಥಾನದಲ್ಲಿ ಜಸ್ಪಿತ್ ಬುಮ್ರಾ ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications