ಕೊಹ್ಲಿಗೆ ಸ್ಫೂರ್ತಿ ಅನ್ನೋದು ಸಮಸ್ಯೆಯಲ್ಲ: ಮಾರ್ಕಸ್ ಸ್ಟೋಯ್ನಿಸ್

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಿದ್ದಾಗ ಮೈದಾನಕ್ಕಿಳಿವಾಗೆಲ್ಲಾ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫುಲ್ ಚಾರ್ಜ್ ಆಗಿರುತ್ತಾರೆ. ಕೊಹ್ಲಿಗೆ ತಿರುಗೇಟು ನೀಡಲು ಆಸ್ಟ್ರೇಲಿಯಾ ಕೂಡ ಸಜ್ಜಾಗುತ್ತಿದೆ ಎಂದು ಆಸ್ಟ್ರೇಲಿಯಾ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳು, ಮೂರು ಟಿ20ಐ ಪಂದ್ಯಗಳು ಮತ್ತು ಮೊದಲ ಟೆಸ್ಟ್‌ನಲ್ಲಿ ಭಾಗವಹಿಸಿದ ಬಳಿಕ ಕೊಹ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಜನವರಿಯಲ್ಲಿ ಕೊಹ್ಲಿ ತಂದೆಯಾಗುವ ನಿರೀಕ್ಷೆಯಿರುವುದರಿಂದ ಟೆಸ್ಟ್ ಎಲ್ಲಾ ಪಂದ್ಯಗಳಲ್ಲಿ ಕೊಹ್ಲಿ ಆಡುತ್ತಿಲ್ಲ.
ಕೊಹ್ಲಿ ಮತ್ತು ಅವರ ಸ್ಫೂರ್ತಿಯ ಬಗ್ಗೆ ಇಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಮಾರ್ಕಸ್ ಸ್ಟೋಯ್ನಿಸ್ ಮಾತನಾಡಿದ್ದಾರೆ. 'ವಿರಾಟ್ ಬಗ್ಗೆ ಚಿಂತೆ ಮಾಡಬೇಡಿ. ತಾನು ಆಡುವ ಪ್ರತೀ ಪಂದ್ಯಕ್ಕೂ ಕೊಹ್ಲಿ ತಯಾರಾಗಿರುತ್ತಾರೆ. ಬಹುಶಃ ಇಲ್ಲಿ ಕೊಹ್ಲಿ ಇಲ್ಲಿ ಇನ್ನೂ ಹೆಚ್ಚಿಗೆ ಸ್ಫೂರ್ತಿಯಲ್ಲಿರುತ್ತಾರೆ. ಆದರೆ 110 ಶೇ.ಗಿಂತ ಹೆಚ್ಚಿನ ಸ್ಫೂರ್ತಿ ಇರಲಿಕ್ಕಿಲ್ಲ ಎಂದು ನನಗನ್ನಿಸುತ್ತದೆ,' ಎಂದು ಸ್ಟೋಯ್ನಿಸ್ ಹೇಳಿದ್ದಾರೆ.
'ನೋಡೋಣ ಏನಾಗುತ್ತೆ. ಸರಣಿ ಕೊಹ್ಲಿಗೆ ಪೂರ್ತಿ ಸಿದ್ಧವಾಗಿದ್ದಾರೆ ಎಂದು ನನಗೆ ಭರವಸೆಯಿದೆ. ಚೊಚ್ಚಲ ಮಗುವಿಗೋಸ್ಕರ ಕೊಹ್ಲಿ ತವರಿಗೆ ವಾಪಸ್ಸಾಗಲಿದ್ದಾರೆ. ನನ್ನ ಪ್ರಕಾರ ಇದು ಸರಿಯಾದ ನಿರ್ಧಾರ. ಹೀಗಾಗಿ ಕೊಹ್ಲಿ ಈ ಸಾರಿ ಹೆಚ್ಚಿನ ಸ್ಫೂರ್ತಿ ಹೊಂದಿರುತ್ತಾರೆ ಎಂದು ನನಗೆ ಖಾತ್ರಿಯಿದೆ,' ಎಂದು ಸ್ಟೋಯ್ನಿಸ್ ಅಭಿಪ್ರಾಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications