ಫೋರ್ಬ್ಸ್ : ಮೆಸ್ಸಿ, ರೊನಾಲ್ಡೊ ಹಿಂದಿಕ್ಕಿದ ಧೋನಿ
ಬೆಂಗಳೂರು, ಜು.24: ಫೋರ್ಬ್ಸ್ ಮ್ತ್ಯಾಗಜೀನ್ ಪ್ರಕಟಣೆಯಂತೆ ವಿಶ್ವ ಕ್ರೀಡಾ ಲೋಕದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದರ್ ಸಿಂಗ್ ಧೋನಿ ಮತ್ತೊಮ್ಮೆ ವಿಕ್ರಮ ಸಾಧಿಸಿದ್ದಾರೆ. ವಿಶ್ವಖ್ಯಾತ ಫುಟ್ಬಾಲ್ ಆಟಗಾರರಾದ ಲಿಯೊನೆಲ್ ಮೆಸ್ಸಿ, ಕ್ರಿಶ್ಚಿಯಾನೋ ರೊನಾಲ್ಡೋ ಅವರನ್ನು ಹಿಂದಿಕ್ಕಿ ಟಾಪ್ ಟೆನ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ ಬಾರಿ 16ನೇ ಸ್ಥಾನಕ್ಕೇರಿದ್ದ ಧೋನಿ ಅವರು 2013ನೇ ಸಾಲಿನ ಅತಿ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸುಮಾರು 21 ಮಿಲಿಯನ್ ಡಾಲರ್ ಆದಾಯದೊಂದಿಗೆ ಐದನೇ ಸ್ಥಾನಕ್ಕೇರಿದ್ದಾರೆ. ಫೋರ್ಬ್ಸ್ ಮ್ಯಾಗಜೀನ್ ಪಟ್ಟಿಯಲ್ಲಿ ಗಾಲ್ಫ್ ಪಟು ಟೈಗರ್ ವುಡ್ಸ್ ಹಾಗೂ ಟೆನಿಸ್ ತಾರೆ ತಲಾ 46 ಮಿಲಿಯನ್ ಡಾಲರ್ ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.[2013ರ ಅತಿ ಶ್ರೀಮಂತ ಕ್ರೀಡಾಪಟುಗಳ ಪಟ್ಟಿ]
ಇದಕ್ಕೂ ಹಿಂದಿನ ವರ್ಷ 31ನೇ ಸ್ಥಾನದಲ್ಲಿದ್ದ ಧೋನಿ ಕಳೆದ ಸಾಲಿನಲ್ಲಿ ತಮ್ಮ ಆದಾಯ ಗಳಿಕೆಯನ್ನು ವಾರ್ಷಿಕ 180 ಕೋಟಿ ರೂ.ಗಳಷ್ಟು ವೃದ್ಧಿಸಿಕೊಳ್ಳುವ ಮೂಲಕ 16ನೇ ಸ್ಥಾನ ತಲುಪಿದ್ದರು. ಈಗ ಟಾಪ್ ಟೆನ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಟಾಪ್ 10 ಶ್ರೀಮಂತ ಕ್ರೀಡಾಪಟುಗಳು ಹಾಗೂ ಕೆಲವು ಪ್ರಮುಖ ಆಟಗಾರರ ಪಟ್ಟಿ ಚಿತ್ರ ಸರಣಿಯಲ್ಲಿ ನೋಡಿ...

ಟಾಪ್ ಶ್ರೀಮಂತ ಕ್ರೀಡಾಪಟುಗಳು #1
ಟೈಗರ್ ವುಡ್ಸ್ (ಯುಎಸ್ಎ) ಗಾಲ್ಫ್ ಗಳಿಕೆ : 46 ಮಿಲಿಯನ್ ಡಾಲರ್

ಟಾಪ್ #1 ಶ್ರೀಮಂತ ಕ್ರೀಡಾಪಟು
ರೋಜರ್ ಫೆಡರರ್(ಸ್ವಿಟರ್ಜ್ಲೆಂಡ್) ಟೆನಿಸ್, ಗಳಿಕೆ 46 ಮಿಲಿಯನ್ ಡಾಲರ್

ಟಾಪ್ #2 ಶ್ರೀಮಂತ ಕ್ರೀಡಾಪಟು
ಲೆ ಬ್ರೋನ್ ಜೇಮ್ಸ್ (ಯುಎಸ್ಎ) ಬಾಸ್ಕೆಟ್ ಬಾಲ್ 27 ಮಿಲಿಯನ್ ಡಾಲರ್

ಟಾಪ್ #3 ಶ್ರೀಮಂತ ಕ್ರೀಡಾಪಟು
ಫಿಲ್ ಮಿಕ್ಲೆಸನ್ (ಯುಎಸ್ ಎ) ಗಾಲ್ಫ್ ಗಳಿಕೆ : 25 ಮಿಲಿಯನ್ ಡಾಲರ್

ಟಾಪ್ #4 ಶ್ರೀಮಂತ ಕ್ರೀಡಾಪಟು
ಮರಿಯಾ ಶರಪೋವಾ(ರಷ್ಯಾ), ಟೆನಿಸ್ ಗಳಿಕೆ : 23 ಮಿಲಿಯನ್ ಡಾಲರ್

ಟಾಪ್ #5 ಶ್ರೀಮಂತ ಕ್ರೀಡಾಪಟು
ಮಹೇಂದ್ರ ಸಿಂಗ್ ಧೋನಿ (ಭಾರತ), ಕ್ರಿಕೆಟ್, ಗಳಿಕೆ: 21 ಮಿಲಿಯನ್ ಡಾಲರ್

ಟಾಪ್ #6 ಶ್ರೀಮಂತ ಕ್ರೀಡಾಪಟು
ಉಸೇನ್ ಬೋಲ್ಡ್ (ಜಮೈಕಾ) ಟ್ರ್ಯಾಕ್ ಅಂಡ್ ಫೀಲ್ಡ್ ಅಥ್ಲೀಟ್ , ಗಳಿಕೆ : 20 ಮಿಲಿಯನ್ ಡಾಲರ್

ಟಾಪ್ #7 ಶ್ರೀಮಂತ ಕ್ರೀಡಾಪಟು
ಕೊಬೆ ಬ್ರಯಾಂಟ್ (ಯುಎಸ್ ಎ) ಬಾಸ್ಕೆಟ್ ಬಾಲ್, ಗಳಿಕೆ : 19 ಮಿಲಿಯನ್ ಡಾಲರ್

ಟಾಪ್ #8 ಶ್ರೀಮಂತ ಕ್ರೀಡಾಪಟು
ಲಿ ನಾ(ಚೀನಾ) ಟೆನಿಸ್, ಗಳಿಕೆ : 15 ಮಿಲಿಯನ್ ಡಾಲರ್

ಟಾಪ್ #9 ಶ್ರೀಮಂತ ಕ್ರೀಡಾಪಟು
ಕ್ರಿಶ್ಚಿಯಾನೋ ರೊನಾಲ್ಡೋ (ಪೋರ್ಚುಗಲ್), ಫುಟ್ಬಾಲ್, ಗಳಿಕೆ : 13 ಮಿಲಿಯನ್ ಡಾಲರ್

ಟಾಪ್ #10 ಶ್ರೀಮಂತ ಕ್ರೀಡಾಪಟು
ಲಿಯೊನೆಲ್ ಮೆಸ್ಸಿ (ಅರ್ಜೆಂಟಿನಾ), ಫುಟ್ಬಾಲ್, ಗಳಿಕೆ: 13 ಮಿಲಿಯನ್ ಡಾಲರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications