Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MS Dhoni: ಆರ್‌ಸಿಬಿ ವಿರುದ್ಧದ ಸೋಲಿನ ಬಳಿಕ ಎಂಎಸ್‌ ಧೋನಿ ಏಕಾಂಗಿ ಬೈಕ್‌ ರೈಡ್‌

ಮೇ 20 ಸೋಮವಾರ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೋಲುವ ಮೂಲಕ ಐಪಿಎಲ್ 2024ರ ಪ್ಲೇಆಫ್ ನಿಂದ ಹೊರಬಿದ್ದಿದೆ.

ಈ ಪಂದ್ಯದಲ್ಲಿ ಸಿಎಸ್‌ಕೆ ಪ್ಲೇಆಫ್ ತಲುಪಲು 6 ಎಸೆತಗಳಲ್ಲಿ 17 ರನ್ ಗಳಿಸಬೇಕಿತ್ತು. ಈ ವೇಳೆ ವಿಶ್ವ ಬೆಸ್ಟ್‌ ಫಿನಿಶರ್‌ಯಾಗಿದ್ದ ಸಿಎಸ್‌ಕೆ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟರ್‌ ಮಹೇಂದ್ರ ಸಿಂಗ್ ಧೋನಿ, ಯಶ್ ದಯಾಲ್ ಬೌಲಿಂಗ್‌ನಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್‌ ಬಾರಿಸಿದ್ದರು.

MS Dhoni bike ride alone on Ranchi road

ತದನಂತರ ಯಶ್‌ ದಯಾಳ್‌ ಅವರು ಎಂಎಸ್‌ ಧೋನಿ ಅವರನ್ನು ಔಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ ಈ ಪಂದ್ಯದಲ್ಲಿ ಆರ್‌ಸಿಬಿ ಎದುರು ಸಿಎಸ್‌ಕೆ ಸೋಲನುಭವಿಸಿತ್ತು. ಈ ಸೋಲಿನ ನಂತರ ಧೋನಿ ಸಾಕಷ್ಟು ಹತಾಶರಾಗಿದ್ದರು. ಅವನ ಕಣ್ಣುಗಳು ತೇವವಾಗಿರುವುದು ಸಹಾ ಕಾಣಿಸಿತ್ತು.

ಬಳಿಕ ಮರುದಿನ ಮೇ 19 ರ ಭಾನುವಾರದಂದು ಧೋನಿ ಮತ್ತು ಅವರ ಕುಟುಂಬ ಬೆಂಗಳೂರಿನಿಂದ ರಾಂಚಿಗೆ ಮರಳಿದ್ದರು. ಇದೀಗ ಧೋನಿ ಅವರು ಬೈಕ್‌ನಲ್ಲಿ ಸುತ್ತಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಧೋನಿ ರಾಂಚಿಯ ಬೀದಿಗಳಲ್ಲಿ ತಮ್ಮ ವಿಂಟೇಜ್ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ತಲೆಗೆ ಹೆಲ್ಮೆಟ್ ಹಾಕಿಕೊಂಡಿರುವ ಧೋನಿ ಹಸಿರು ಬಣ್ಣದ ಟೀ ಶರ್ಟ್‌ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.

ಎಂಎಸ್ ಧೋನಿ ಯಮಹಾ ಆರ್‌ಡಿ 350 ಬೈಕ್‌ನಲ್ಲಿ ಸವಾರಿ ಮಾಡುತ್ತಿರುವುದನ್ನು ಅಭಿಮಾನಿಯೊಬ್ಬರು ಸೆರೆಹಿಡಿದ ವೀಡಿಯೊದಲ್ಲಿ ಗುರುತಿಸಲಾಗಿದೆ. ರೈಡ್‌ನ ನಂತರ ಧೋನಿ ರಾಂಚಿಯಲ್ಲಿರುವ ತಮ್ಮ ನಿವಾಸಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ.

ಧೋನಿಗೆ ಬೈಕ್‌ಗಳ ಕ್ರೇಜ್‌

ಧೋನಿ ಅವರಿಗೆ ಬೈಕ್‌ಗಳೆಂದರೆ ಪಂಚ ಪ್ರಾಣ ಎಂಬುದು ಈಗಾಗಲೇ ಗೊತ್ತಿರುವ ವಿಷಯವಾಗಿದೆ. ಧೋನಿ ಹೆಚ್ಚಾಗಿ ರಾಂಚಿಯ ಹೆದ್ದಾರಿಗಳಲ್ಲಿ ಸವಾರಿ ಮಾಡುತ್ತಿರುತ್ತಾರೆ. ಧೋನಿ ರಾಂಚಿಯಲ್ಲಿರುವ ತಮ್ಮ ನಿವಾಸದಲ್ಲಿ ಆನೇಕ ವಿವಿಧ ಬೈಕ್ ಮತ್ತು ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ.

ಕೆಲ ವರ್ಷಗಳ ಹಿಂದೆ ವೀಡಿಯೊವೊಂದರಲ್ಲಿ, ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರು ಧೋನಿ ನಿವಾಸದಲ್ಲಿ ಎರಡು ಅಂತಸ್ತಿನ ಗ್ಯಾರೇಜ್ ಅನ್ನು ವೀಕ್ಷಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿತ್ತು.

ಐಪಿಎಲ್‌ನಲ್ಲಿ ಚೆನ್ನೈ ಜೊತೆಗೆ ಪಯಣ

2008ರ ಮೊದಲ ಆವೃತ್ತಿಯಿಂದ ಐಪಿಎಲ್‌ ಭಾಗವಾಗಿರುವ 42 ವರ್ಷದ ಎಂಎಸ್ ಧೋನಿ ಚೆನ್ನೈ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 259 ಪಂದ್ಯಗಳನ್ನು ಆಡಿರುವ ಧೋನಿ ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ಅಗ್ರಜನಾಗಿದ್ದಾರೆ.

ಐಪಿಎಲ್‌ನಲ್ಲಿ ಚೆನ್ನೈ 5 ಪ್ರಶಸ್ತಿ ಗೆಲ್ಲುವಲ್ಲಿ ಎಂಎಸ್ ಧೋನಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಪ್ರಸ್ತುತ ಅಂತಿಮ ಘಟ್ಟ ತಲುಪಿರುವ ಆವೃತ್ತಿಗೂ ಮುಂಚಿತವಾಗಿ ಎಂಎಸ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದರು.

Story first published: Monday, May 20, 2024, 22:19 [IST]
Other articles published on May 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+