Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MS Dhoni: ಕೇಕ್ ಕತ್ತರಿಸಿ ಧೋನಿ ಹುಟ್ಟುಹಬ್ಬವನ್ನು ಸಂಭ್ರಮಿಸಿದ ರಿಷಭ್ ಪಂತ್

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ 42ನೇ ವಯಸ್ಸಿಗೆ ಕಾಲಿಟ್ಟಿದ್ದು ಎಲ್ಲೆಡೆಯಿಂದ ಶುಭಾಶಯಗಳು ಹರಿಸು ಬರುತ್ತಿವೆ. ಕ್ರಿಕೆಟ ಅಭಿಮಾನಿಗಳಿಂದ ಹಿಡಿದು ದಿಗ್ಗಜ ಕ್ರಿಕೆಟಿಗರು ಕೂಡ ಧೋನಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕೂಡ ಧೋನಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು ತಾವೇ ಕೇಕ್ ಕತ್ತರಿಸಿ ಧೋನಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ ಧೋನಿ ಐಸಿಸಿಯ ಎಲ್ಲಾ ಟ್ರೋಪಿ ಗೆದ್ದ ಜಏಕೈಕ ನಾಯಕ ಎಂಬ ಹೆಗ್ಗಳಿಕೆ. ಹೊಂದಿದ್ದಾರೆ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗಳನ್ನು ಟೀಮ್ ಇಂಡಿಯಾ ಧೋನಿ ನಾಯಕತ್ವದಲ್ಲಿ ಗೆದ್ದು ಬೀಗಿದೆ. ಹೀಗಾಗಿ ಕ್ರಿಕೆಟ್ ಇತಿಹಾಸದಲ್ಲಿ ಧೋನಿ ಅತ್ಯಂತ ವಿಶೇಷ ನಾಯಕ ಎನಿಸಿಕೊಳ್ಳುತ್ತಾರೆ.

MS Dhoni Birthday: Rishabh Pant cuts a cake for Former Indian skipper

ಹೀಗಾಗಿ ಧೋನಿ ಹುಟ್ಟುಹಬ್ಬಕ್ಕೆ ರಿಷಭ್ ಪಂತ್ ತಾವೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದು ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. "ಹ್ಯಾಪಿ ಬರ್ತ್‌ಡೇ ಮಾಹಿ ಅಣ್ಣ. ನೀವು ಸನಿಹದಲ್ಲಿಲ್ಲದ ಕಾರಣ ನಿಮ್ಮ ಪರವಾಗಿ ನಾನು ಕೇಕ್ ಕತ್ತರಿಸುತ್ತಿದ್ದೇನೆ. ಹ್ಯಾಪಿ ಬರ್ತ್‌ಡೇ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ರಿಷಭ್ ಪಂತ್ ಬರೆದುಕೊಂಡಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ಭೀಕರ ಅಪಘಾತಕ್ಕೆ ಒಳಗಾಗಿ ಸದ್ಯ ಚೇತರಿಕೆ ಹಂತದಲ್ಲಿರುವ ರಿಷಭ್ ಪಂತ್ ಸಂಪೂರ್ಣ ಗುಣಮುಖರಾಗುವ ಹಂತಕ್ಕೆ ಬಂದಿದ್ದಾರೆ. ಧೋನಿ ಹುಟ್ಟುಹಬ್ಬದ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಭಾವನಾತ್ಮಕವಾಗಿ ಪಂತ್ ಬರೆದುಕೊಂಡಿದ್ದು ಧೋನಿ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. "ದೇಶದ ಸಾಕಷ್ಟು ಜನರಿಗೆ ನೀವು ಸ್ಪೂರ್ತಿ. ಭಾರತೀಯ ಕ್ರಿಕೆಟ್‌ಗೆ ನಿಮ್ಮ ಪ್ರತಿಯೊಂದು ಕೊಡುಗೆಗೂ ಧನ್ಯವಾದಗಳು. ಹ್ಯಾಪಿ ಬರ್ತ್‌ಡೇ ಮಾಹಿ ಅಣ್ಣ" ಎಂದು ಪಂತ್ ಬರೆದುಕೊಂಡಿದ್ದಾರೆ.

ಇನ್ನು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ಧೋನಿ ಹುಟ್ಟುಹಬ್ಬಕ್ಕೆ ಮಾಜಿ ಸಹ ಆಟಗಾರ ಹಾಗೂ ಗೆಳೆಯ ಸುರೇಶ್ ರೈನಾ ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸಿದ್ದಾರೆ. "ಹಿರಿಯ ಸೋದರ ಎಂಎಸ್ ಧೋನಿಗೆ ಹುಟ್ಟುಹಬ್ಬದ ಶುಭಾಶಯಗಳು. ಪಿಚ್ ಹಂಚಿಕೊಳ್ಳುವುದರಿಂದ ಹಿಡಿದು ಕನಸುಗಳನ್ನು ಹಂಚಿಕೊಳ್ಳುವವರೆಗೆ ನಮ್ಮ ನಡುವಿನ ಬಂಧವನ್ನು ಬೇರ್ಪಡಿಸುವುದು ಅಸಾಧ್ಯ. ನಾಯಕನಾಗಿ ಮತ್ತು ಗೆಳೆಯನಾಗಿ ನಿಮ್ಮ ಬಲ ನನಗೆ ದಾರಿದೀಪ. ಮುಂಬರುವ ವರ್ಷ ನಿಮಗೆ ಸಂತೋಷ, ಯಶಸ್ಸು ಹಾಗೂ ಆರೋಗ್ಯವನ್ನು ನೀಡಲಿ. ಹೀಗೆಯೇ ಮಿಂಚಿತ್ತಿರಿ, ಮುನ್ನಡೆಸುತ್ತಿರಿ ನಿಮ್ಮ ಮಾಯಾಜಾಲವನ್ನು ಹಂಚುತ್ತಿರಿ" ಎಂದು ಸುರೇಶ್ ರೈನಾ ಬರೆದುಕೊಂಡಿದ್ದಾರೆ.

ಇನ್ನು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವೀಟ್‌ನಲ್ಲಿ ವಿಶೇಷವಾಗಿ ಧೋನಿಗೆ ಶುಭಹಾರೈಸಿರುವುದು ಅಭಿಮಾನಿಗಳ ಗಮನಸೆಳೆದಿದೆ. 7ನೇ ಸಂಖ್ಯೆಯ ಮಹತ್ವವನ್ನು ವಿವರಿಸಿರುವ ವಿರೇಂದ್ರ ಸೆಹ್ವಾಗ್ 7ನೇ ತಾರಕಿನಂದು ಹುಟ್ಟಿರುವ ಈ ಉನ್ನತ ವ್ಯಕ್ತಿಗೆ ಶುಭಾಶಯ ಎಂದು ಟ್ವೀಟ್ ಮಾಡಿ ಹಾರೈಸಿದ್ದಾರೆ.

Story first published: Friday, July 7, 2023, 15:18 [IST]
Other articles published on Jul 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+