ಮಾಜಿ ನಾಯಕನಿಗೆ ಶುಭಾಶಯಗಳ ಮಹಾಪೂರ: ಕೊಹ್ಲಿ, ರೋಹಿತ್, ಪಾಂಡ್ಯ ವಿಶೇಷ ಸಂದೇಶ

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಇಂದು 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಧೋನಿಯ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾದ ಸಹ ಆಟಗಾರರು ಕೂಡ ಧೋನಿಗೆ ಶುಭಾಶಯ ತಿಳಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಕೋಚ್ ರವಿ ಶಾಸ್ತ್ರಿ, ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ದಿಗ್ಗಜ ಆಟಗಾರರೂ ಟೀಮ್ ಇಂಡಿಯಾದ ಮಾಜಿ ನಾಯಕನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಇನ್ನು ಸಿಎಸ್‌ಕೆ ತಂಡದ ಸಹ ಆಟಗಾರ ಡ್ವೇಯ್ನ್ ಬ್ರಾವೋ ಧೋನಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಹಾಡೊಂದನ್ನು ಬಿಡುಗಡೆಗೊಳಿಸಿದ್ದಾರೆ. ಈ ಹಾಡಿನ ಆಲ್ಬಮ್‌ನಲ್ಲಿ ಧೋನಿ ಸಾಧನೆಯ ಹೆಜ್ಜೆಗಳನ್ನು ಸ್ಮರಿಸಿದ್ದಾರೆ ಡ್ವೇಯ್ನ್ ಬ್ರಾವೋ.
ಧೋನಿ ಹುಟ್ಟುಹಬ್ಬದ ಅಂಗವಾಗಿ ಕೆಲ ಶುಭಾಶಯಗಳ ಸಂದೇಶಗಳನ್ನು ನೋಡೋಣ:
ಬಿಸಿಸಿಐನ ಟ್ವಿಟ್ಟರ್ ಖಾತೆಯಲ್ಲಿ ಧೋನಿಗೆ ಶುಭಾಶಯಕೋರಲಾಗಿದೆ. "ಒಬ್ಬ ವ್ಯಕ್ತಿ, ಲೆಕ್ಕವಿಲ್ಲದಷ್ಟು ಸಂಭ್ರಮದ ಕ್ಷಣಗಳು, ವಿಸ್ಮಯಕಾರಿ ಸಿಕ್ಸರ್‌ಗಳನ್ನು ಮತ್ತೊಮ್ಮೆ ನೋಡುತ್ತಾ ಹುಟ್ಟುಹಬ್ಬ ಆಚರಿಸೋಣ" ಎಂದು ಬಿಸಿಸಿಐನ ಅಧಿಕೃತ ಖಾತೆಯಲ್ಲಿ ಶುಭಕೋರಲಾಗಿದೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ "ಹುಟ್ಟುಹಬ್ಬದ ಶುಭಾಶಯಗಳು ಮಾಹಿ ಬಾಯ್, ಆರೋಗ್ಯ ಮತ್ತು ಸಂತಸ ಯಾವಾಗಲು ನಿಮ್ಮ ಜೊತೆಯಲ್ಲಿರಲಿ, ದೇವರು ಒಳ್ಳೆಯದು ಮಾಡಲಿ" ಎಂದು ಶುಭಕೋರಿದ್ದಾರೆ.
ಧೋನಿ ಜೊತೆ ಅಭ್ಯಾಸದ ಸಂದರ್ಭದಲ್ಲಿ ತಂಪು ಪಾನೀಯ ಸೇವಿಸುತ್ತಿರುವ ಫೋಟೋದೊಂದಿಗೆ ರೋಹಿತ್ ಶರ್ಮಾ ಶುಭ ಕೋರಿದ್ದಾರೆ. ಕೂಲಿಂಗ್ ಆಫ್ ವಿದ್ ಮಿಸ್ಟರ್ ಕೂಲ್ ಎಂದು ಶುಭ ಹಾರೈಸಿದ್ದಾರೆ.
ಇನ್ನು ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. "ನನ್ನ ಬಿಟ್ಟುವಿಗೆ ನಿನ್ನ ಚಿಟ್ಟುವಿನ ಕಡೆಯಿಂದ ಶುಭಾಶಯಗಳು, ಉತ್ತಮ ಮನುಷ್ಯನಾಗಲು ಕಲಿಸಿದ ಮತ್ತು ಕಠಿಣ ಸಂದರ್ಭದಲ್ಲಿ ನನ್ನ ಜೊತೆ ನಿಂತ ನನ್ನ ಗೆಳೆಯ" ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ವಿಶೇಷ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಅನುಭವಿ ಆಟಗಾರ ಕೇದಾರ್ ಜಾಧವ್ ವಿಶೇಷ ಪತ್ರದೊಂದಿಗೆ ಶುಭಾಶಯವನ್ನು ಹೇಳುದ್ದಾರೆ. ಭಾವನಾತ್ಮಕವಾಗಿ ಧೋನಿ ಬಗ್ಗೆ ಪತ್ರದಲ್ಲಿ ಬರೆದಿದ್ದಾರೆ. ಅಂತ್ಯದಲ್ಲಿ ಮರಾಠಿಯಲ್ಲೂ ಜಾಧವ್ ಶುಭ ಹಾರೈಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications