ಲಂಡನ್, ಮೇ 31: ಮಂಗಳವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಪಂದ್ಯದ ಮಧ್ಯದಲ್ಲಿ ಆಟಗಾರರಿಗೆ ಪಾನೀಯ ತಂದುಕೊಟ್ಟು ಎಲ್ಲರ ಹುಬ್ಬೇರುವಂತೆ ಮಾಡಿದರು.
ಓವಲ್ ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶವನ್ನು ಭರ್ಜರಿ 240 ರನ್ ಗಳ ಅಂತರದಲ್ಲಿ ಸದೆಬಡಿಯಿತು.[ಚಾಂಪಿಯನ್ಸ್ ಟ್ರೋಫಿ: 240 ರನ್ ಗಳಿಂದ ಬಾಂಗ್ಲಾವನ್ನು ಮಣಿಸಿದ ಭಾರತ]
ಅಂದಹಾಗೆ, ಪಂದ್ಯದಲ್ಲಿ ಧೋನಿ ಕಣಕ್ಕಿಳಿಯಲಿಲ್ಲ. ಬ್ಯಾಟಿಂಗ್ ಗೂ ಬಾರದ ಧೋನಿ, ತಂಡದ ಫೀಲ್ಡಿಂಗ್ ವೇಳೆ ಯಥಾವತ್ತಾಗಿ ತಮ್ಮ ವಿಕೆಟ್ ಕೀಪರ್ ಕೆಲಸವನ್ನೂ ಮಾಡಲಿಲ್ಲ. ಅವರ ಬದಲಿಗೆ ದಿನೇಶ್ ಕಾರ್ತಿಕ್ ಅವರು ಕೀಪರ್ ಕೆಲಸ ಮಾಡಿದರು.
ಪಂದ್ಯದ ಎರಡನೇ ಇನಿಂಗ್ಸ್ ವೇಳೆ ಬಾಂಗ್ಲಾದೇಶ ಬ್ಯಾಟಿಂಗ್ ನಲ್ಲಿ ನಿರತವಾಗಿದ್ದಾಗ, ಫೀಲ್ಡಿಂಗ್ ನಿರತರಾಗಿದ್ದ ತಮ್ಮ ಸಹ ಆಟಗಾರರಿಗೆ ಧೋನಿ, ನೀರು ತಂದುಕೊಟ್ಟರು.