ಸಾವಿರದಿನ್ನೂರು ಅಡಿ ಎತ್ತರದಿಂದ ಹಾರಿದ ಎಂಎಸ್ ಧೋನಿ
ಆಗ್ರಾ, ಆಗಸ್ಟ್. 19: ಚೆಂಡನ್ನು ಬೌಂಡರಿಯಿಂದ ಹೊರಕ್ಕೆ ಅಟ್ಟುವ ಭಾರತದ ಏಕದಿನ ತಂಡದ ನಾಯಕ ಬುಧವಾರ 1,250 ಅಡಿ ಎತ್ತರದಿಂದ ಜಿಗಿದಿದ್ದಾರೆ! ಭಾರತೀಯ ಸೇನೆಯ ಸೇನೆಯ ವಿಧೇಯ ವಿದ್ಯಾರ್ಥಿಯಾಗಿ ಮಹೇಂದ್ರ ಸಿಂಗ್ ಧೋನಿ ನಡೆದುಕೊಳ್ಳುತ್ತಿದ್ದಾರೆ.
ಭಾರತೀಯ ಭೂ ಸೇನೆಯ ತರಬೇತಿಯಲ್ಲಿ ಪಾಲ್ಗೊಂಡಿರುವ ಎಂ ಎಸ್ ಧೋನಿ ಪ್ಯಾರಾಚೂಟ್ ನಿಂದ ಜಿಗಿದು ಪಕ್ಕಾ ಸೈನಿಕರಂತೆ ತರಬೇತಿ ಪಡೆದುಕೊಂಡಿದ್ದಾರೆ. ಧೋನಿ ಆಗ್ರಾ ಬಳಿ ಇರುವ ಮಲ್‍ಪುರ್ ಡೂಪಿಂಗ್ ಝೋನ್ ವಿಭಾಗದಲ್ಲಿ ಎಎನ್ 32 ಏರ್ ಕ್ರಾಫ್ಟ್ ವಿಮಾನದಿಂದ ಕೆಳಕ್ಕೆ ಜಿಗಿದರು.

ಧೋನಿ ಪ್ಯಾರಚೂಟ್ ಜಿಗಿತಕ್ಕಾಗಿ ಸೇನೆಯ ವೈಮಾನಿಕ ತರಬೇತಿ ಶಾಲೆಯಲ್ಲಿ 2 ವಾರಗಳ ಕಾಲ ತರಬೇತಿ ಪಡೆದುಕೊಂಡಿದ್ದರು. ಲೆಫ್ಟಿನೆಂಟ್ ಕರ್ನಲ್ ಗೌರವ ಪಡೆದುಕೊಂಡಿರುವ ಧೋನಿ, ಅದಕ್ಕೆ ತಕ್ಕಂತೆ ಆರ್ಮಿ ತರಬೇತಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.
ರಕ್ಷಣಾ ಇಲಾಖೆ ತನ್ನ ಸಾಮಾಜಿಕ ಜಾಲತಾಣದ ಪೇಜ್ ನಲ್ಲಿ ಧೋನಿ ಜಂಪ್ ಮಾಡುತ್ತಿರುವ ಫೋಟೋ ವನ್ನು ಹಾಕಿದೆ. ನಾಗರಿಕರು ಸಹ ಟ್ವಿಟ್ಟರ್ ನಲ್ಲಿ ಧೋನಿ ಸಾಹಸದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications