ಎಂಎಸ್ ಧೋನಿ ಇನ್ನೂ ಹತ್ತು ವರ್ಷ ಕ್ರಿಕೆಟ್ ಆಡಲಿ ಎಂದ ಮೈಕಲ್ ಹಸ್ಸಿ

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟನೆ ದೊರಕಿಲ್ಲ. ತನ್ನ ಕ್ರಿಕೆಟ್ ಭವಿಷ್ಯದ ಬಗ್ಗೆ ಧೋನಿ ಈವರೆಗೂ ಯಾವುದೇ ಸುಳಿವನ್ನು ನೀಡಿಲ್ಲ. ಆದರೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕಲ್ ಹಸ್ಸಿ ಧೋನಿ ಸುದೀರ್ಘಕಾಲ ಕ್ರಿಕೆಟ್ ಆಡುವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.
ಮೈಕಲ್ ಹಸ್ಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರನೂ ಆಗಿರುವ ಮೈಕಲ್ ಹಸ್ಸಿ, ಧೋನಿ ತನ್ನಿಂದ ಸಾಧ್ಯವಿರುವ ಗರಿಷ್ಠ ಕಾಲ ಕ್ರಿಕೆಟ್ ಆಡುವುದನ್ನು ಮುಂದುವರಿಸಲಿ ಎಂದಿದ್ದಾರೆ. ಇನ್ನೂ ಹತ್ತು ವರ್ಷಗಳ ಕಾಲ ಕ್ರಿಕೆಟ್ ವೃತ್ತಿ ಜೀವನ ಮುಂದುವರಿಯಲಿ ಎಂದು ಆಶಿಸುತ್ತೇನೆ ಎಂದು ಮೈಕಲ್ ಹಸ್ಸಿ ಹೇಳಿದ್ದಾರೆ.
ತಾನು ಧೋನಿಯನ್ನು ನಾಯಕನಾಗಿ ಇಷ್ಟಪಡುತ್ತೇನೆ ಎಂದಿರುವ ಮೈಕಲ್ ಹಸ್ಸಿ ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ತನ್ನನ್ನು ತಾನು ನಿಭಾಯಿಸುವ ವಿಧಾನದಿಂದ ಆಶ್ಚರ್ಯಚಕಿತನಾಗಿದ್ದಾನೆ ಎಂದಿದ್ದಾರೆ. ಸ್ವತಃ ಅತ್ಯುತ್ತಮ ಫಿನಿಷರ್ ಎನಿಸಿಕೊಂಡಿರುವ ಮೈಕಲ್ ಹಸ್ಸಿ, ಧೋನಿಯ ಶಾಂತ ಮತ್ತು ಲೆಕ್ಕಾಚಾರದ ಆಟವನ್ನು ಹೊಗಳಿದ್ದಾರೆ.
ನಾಯಕನಾಗಿ ಧೋನಿ ಅಂದರೆ ನನಗೆ ತುಂಬಾ ಇಷ್ಟ, ಆತನ ಶಾಂತಚಿತ್ತವನ್ನು ನಾನು ಇಷ್ಟಪಡುತ್ತೇನೆ, ಆಟಗಾರರಿಗೆ ಆತ ನೀಡುವ ಬೆಂಬಲ ಮತ್ತು ಅವರ ಮೇಲಿಡುವ ನಂಬಿಕೆ ತುಂಬಾ ಪ್ರಮುಖವಾದದ್ದು. ಆಟದ ತಂತ್ರದ ದೃಷ್ಟಿಕೋನದಿಂದ ಧೋನಿ ಸಾಕಷ್ಟು ಚುರುಕುತನದ ವ್ಯಕ್ತಿ ಎಂದಿದ್ದಾರೆ ಮೈಕಲ್ ಹಸ್ಸಿ.
ಇದೇ ಸಂದರ್ಭದಲ್ಲಿ ಮೈಕಲ್ ಹಸ್ಸಿ ಐಪಿಎಲ್‌ನಲ್ಲಿ ಆಡಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಆರಂಭದ ಆವೃತ್ತಿಯಲ್ಲಿ ಚೆನ್ನೈ ತಂಡದ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದ ಕ್ಷಣದಲ್ಲೇ ನಾನು ಐಪಿಎಲ್‌ಅನ್ನು ಪ್ರತೀತಿಸಲು ಆರಂಭಿಸಿದ್ದೆ. ಅದೊಂದು ಅದ್ಭುತವಾದ ವಾತಾವರಣವಾಗಿತ್ತು ಎಂದು ಮೈಕಲ್ ಹಸ್ಸಿ ಹೇಳಿಕೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications