ಧೋನಿ ವಿಶೇಷವಾದದ್ದನ್ನು ಸಾಧಿಸಬೇಕಿದೆ: ಸ್ಟಿಫನ್ ಫ್ಲೆಮಿಂಗ್
ದುಬೈ, ಫೆ. 3: ಭಾರತದ ನಾಯಕ ಎಂಎಸ್ ಧೋನಿ ವಿಶ್ವಕಪ್ ನಲ್ಲಿ ವಿಶೇಷವಾದ ಏನನ್ನಾದರೂ ಸಾಧಿಸಬೇಕಾಗಿದೆ ಎಂದು ನ್ಯೂಜಿಲೆಂಡ್ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ 2011 ರ ವಿಶ್ವಕಪ್ ನಲ್ಲಿ ಭಾರತವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟ ಗಳಿಸಿಕೊಟ್ಟಿದ್ದ ಎಂಎಸ್ ಧೋನಿ ಈ ಬಾರಿಯೂ ಅಂಥದ್ದೇ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದ್ದಾರೆ.[ವಿಶ್ವಕಪ್ ಸೆಮಿಫೈನಲ್ ತಲುಪಲು ಕಪಿಲ್ ಸೂತ್ರ]

ವಿಶ್ವದ ಗಮನ ಸೆಳೆಯಲಿರುವ ಪಂದ್ಯಾಳಿಗೆ ಇನ್ನು ಕೇವಲ ಎರಡು ವಾರ ಬಾಕಿ ಇದೆ. ಎಂಸ್ ಧೋನಿ ನಾಯಕತ್ವ ಮತ್ತು ತಂಡ ನಿರ್ವಹಣೆ ರೀತಿಯ ಬಗ್ಗೆ ಉಳಿದ ಎಲ್ಲ ತಂಡಗಳು ಮಾತನಾಡಿಕೊಳ್ಳುತ್ತಿವೆ ಎಂದು ಫ್ಲೆಮಿಂಗ್ ಹೇಳಿದ್ದಾರೆ. ಐಪಿಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ಫ್ಲೆಮಿಂಗ್ ಭಾರತ ತಂಡದ ನಾಯಕನ ಶಕ್ತಿ ಮತ್ತು ಸಾಮರ್ಥ್ಯದ ಅರಿವು ಹೊಂದಿದ್ದಾರೆ. [ವಿರಾಟ್ ಕೊಹ್ಲಿ ಸ್ಥಾನ ಕಿತ್ತುಕೊಂಡ ಹಶೀಮ್ ಆಮ್ಲಾ]
ಈ ಬಾರಿ ವಿಶ್ವಕಪ್ ನಲ್ಲಿ ಧೋನಿ ವಿಶೇಷವಾದ ಏನನ್ನಾದರೂ ಸಾಧಿಸಲೇಬೇಕಿದೆ. ತವರಿನಲ್ಲಿ ಕಳೆದ ವಿಶ್ವಕಪ್ ದಕ್ಕಿಸಿಕೊಂಡ ತಂಡಕ್ಕೆ ಈ ಬಾರಿ ಸವಾಲು ಎದುರಾಗಿದ್ದು ನಾಯಕನ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದ್ದಾರೆ.
ತಂಡದ ನಾಯಕನಾಗಿ ಎಂಎಸ್ ಎಲ್ಲ ತಂತ್ರಗಳನ್ನು ಅರಿತಿದ್ದಾರೆ. ಸ್ವತಃ ಪಂದ್ಯದ ದಿಕ್ಕು ಬದಲಿಸುವ ಶಕ್ತಿ ಅವರಿಗಿದೆ. ಅಲ್ಲದೇ ಚೇಸಿಂಗ್ ನ್ನು ಧೋನಿ ಪ್ರೀತಿಸುತ್ತಾರೆ. ಕಳೆದ ವಿಶ್ವಕಪ್ ಫೈನಲ್ ಪಂದ್ಯವೇ ಇದಕ್ಕೆ ಸಾಕ್ಷಿ ಎಂದು ಫ್ಲೆಮಿಂಗ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications