Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹುಟ್ಟು ಹಬ್ಬದ ಸಂಭ್ರಮ: ಝಿವಾ ಜೊತೆ ಕುಣಿದ ಎಂಎಸ್ ಧೋನಿ-ವಿಡಿಯೋ

ICC World Cup 2019 : ಧೋನಿ ಹುಟ್ಟುಹಬ್ಬಕ್ಕೆ ಮಗಳ ಸರ್ಪೈಸ್..? | MS Dhoni | Oneindia Kannada
MS Dhoni dances with Ziva, celebrates birthday with Sakshi

ಲಂಡನ್, ಜುಲೈ 7: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜುಲೈ 7ಕ್ಕೆ 38ನೇ ವರ್ಷಕ್ಕೆ ಕಾಲಿರಿಸುತ್ತಿದ್ದು, ಜನ್ಮ ದಿನದ ಸಂಭ್ರಮವನ್ನು ಪತ್ನಿ ಸಾಕ್ಷಿ ಮತ್ತು ಪುತ್ರಿ ಝಿವಾ ಜೊತೆ ಆಚರಿಸಿಕೊಂಡಿದ್ದಾರೆ. ಭಾರತ ತಂಡದ ಆಲ್ ರೌಂಡರ್‌ಗಳಾದ ಕೇದಾರ್ ಜಾಧವ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಶನಿವಾರ (ಜುಲೈ 6) ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್ ಗೆಲುವನ್ನಾಚರಿಸಿದ ಬಳಿಕ ಕ್ರಿಕೆಟ್ ಆಟಗಾರರ ಸಮ್ಮುಖದಲ್ಲಿ ಧೋನಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಪುತ್ರಿ ಝಿವಾ ಜೊತೆ ಧೋನಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜನ್ಮದಿನದ ಸಂಭ್ರಮದಲ್ಲಿರುವ ಕೂಲ್ ಕ್ಯಾಪ್ಟನ್‌ಗೆ ಕ್ರಿಕೆಟ್ ಪ್ರಿಯರಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಸಾಕ್ಷಿ ಧೋನಿ ಕೂಡ ಧೋನಿ ಹುಟ್ಟು ಹಬ್ಬದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಧೋನಿ ಕೇಕ್ ಕಟ್‌ ಮಾಡುತ್ತಿರುವ ಸಾಕ್ಷಿ ಇನ್‌ಸ್ಟಾಗ್ರಾಮ್‌ನಲ್ಲಿದೆ.

ಶನಿವಾರ ನಡೆದ ಪಂದ್ಯದಲ್ಲಿ ಧೋನಿಗೆ ಬ್ಯಾಟಿಂಗ್ ಅವಕಾಶ ಲಭಿಸಿರಲಿಲ್ಲ. ಆರಂಭಿಕ ಬ್ಯಾಟ್ಸ್ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಶತಕದ ನೆರವಿನಿಂದ ಭಾರತ ಸುಲಭ ಗೆಲುವನ್ನಾಚರಿಸಿತು. ಸದ್ಯ ವಿಶ್ವಕಪ್‌ ಅಂಕಪಟ್ಟಿಯಲ್ಲಿ 15 ಪಂದ್ಯಗಳಿಂದ ಮೊದಲ ಸ್ಥಾನದಲ್ಲಿರುವ ಭಾರತ ಜುಲೈ 9ರಂದು ಸೆಮಿಫೈನಲ್‌ಲ್ಲಿ ನ್ಯೂಜಿಲೆಂಡ್ ಸವಾಲು ಸ್ವೀಕರಿಸಲಿದೆ.

Story first published: Sunday, July 7, 2019, 15:29 [IST]
Other articles published on Jul 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+