
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿ ಆರು ತಿಂಗಳೇ ಕಳೆದಿದೆ. ಮಹೇಂದ್ರ ಸಿಂಗ್ ಧೋನಿ ಕ್ರಿಕೆಟೇತರ ಚಟುವಟಿಕೆಯಲ್ಲಿ ಇತ್ತೀಚೆಗೆ ಸಾಕಷ್ಟು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಮ್ಮೆ ಧೋನಿ ಹೆಡ್‌ಲೈನ್ ಸುದ್ಧಿಯಾಗಿದ್ದಾರೆ.
ಹೌದು, ಧೋನಿ ತಮ್ಮ ಗೆಳೆಯರ ಜೊತೆಗೆ ಬಾತ್‌ರೂಮ್‌ನಲ್ಲಿ ಹಾಡುಹಾಡುತ್ತಾ ಸಮಯವನ್ನು ಕಳೆದಿದ್ದಾರೆ. ಧೋನಿ ಗೆಳಯರಲ್ಲೊಬ್ಬರು ಈ ಸಂದರ್ಭದಲ್ಲಿ ಹಿಂದಿ ಸಿನಿಮಾ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡುತ್ತಾ ಧೋನಿ ಮತ್ತು ಗೆಳೆಯರನ್ನು ರಂಜಿಸಿದ್ದಾರೆ.
ಫೈವ್ ಸ್ಟಾರ್ ಹೋಟೆಲ್‌ವೊಂದರ ಬಾತ್‌ರೂಮ್‌ನ ನೆಲದಲ್ಲಿ ಕುಳಿತು ಧೋನಿ ಗೆಳೆಯ ಬಾಲಿವುಡ್ ಗಾಯಕರಾದ ಇಶಾನ್ ಖಾನ್ ಹಾಡುತ್ತಿದ್ದರೆ ಧೋನಿ ಅಲ್ಲೆ ಮೇಲೆ ಕುಳಿತು ಆನಂದಿಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
1964ರಲ್ಲಿ ಬಿಡುಗಡೆಯಾದ 'ಮಿಸ್ಟರ್ x ಇನ್ ಬಾಂಬೆ' ಕಿಶೋರ್ ಕುಮಾರ್ ಹಾಡಿದ ಚಿತ್ರದ ಪ್ರಖ್ಯಾತ ಹಾಡು 'ಮೇರೆ ಮೆಹೆಬೂಬ್ ಖಯಾಮತ್ ಹೋಗಿ' ಹಾಡನ್ನು ಇಶಾನ್ ಖಾನ್ ಹಾಡುತ್ತಿದ್ದರೆ ಧೋನಿ ಮತ್ತು ಸ್ನೇಹಿತರು ಆನಂದಿಸುತ್ತಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಜೊತೆ ಈ ವಿಡಿಯೋದಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರರಾದ ಪಿಯೂಷ್ ಚಾವ್ಲಾ ಮತ್ತು ಪಾರ್ಥೀವ್ ಪಟೇಲ್ ಇರುವುದನ್ನು ಕೂಡ ನಾವು ಕಾಣಬಹುದು.