ಎಂಎಸ್ ಧೋನಿ ಗ್ಲೌಸಿನಲ್ಲಿದ್ದ ಸೇನೆಯ ಮುದ್ರೆ ತೆಗೆಯುವಂತೆ ಹೇಳಿದ ಐಸಿಸಿ

ನವದೆಹಲಿ, ಜೂನ್ 7: ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಭಾರತೀಯ ವಿಶೇಷ ಸೆನಾಪಡೆಯ ಮುದ್ರೆಯಿದ್ದ ಗ್ಲೌಸನ್ನು ಬಳಸಿದ್ದರು. ಗ್ಲೌಸ್‌ನಿಂದ ಈ ಮುದ್ರೆಯನ್ನು ತೆಗೆಯುವಂತೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ಗೆ ಹೇಳಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
'ಇಬ್ಬರು ತಯಾರಕರ ಲೋಗೋಗಳನ್ನಷ್ಟೇ ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಬಳಸಿಕೊಳ್ಳಲು ಅನುಮತಿಯಿದೆ. ಆ ಇಬ್ಬರು ತಯಾರಕರ ಚಿಹ್ನೆಗಳಲ್ಲದೆ ಬೇರೆ ಯಾವುದೇ ಲೋಗೋಗಳು ಗ್ಲೌಸಿನಲ್ಲಿ ಕಾಣಲು ಅವಕಾಶವಿಲ್ಲ' ಎಂದು ಐಸಿಸಿ ಕಾರ್ಯತಂತ್ರ ಸಂವಹನದ ಪ್ರಧಾನ ವ್ಯವಸ್ಥಾಪಕಿ ಕ್ಲೇರ್ ಫರ್ಲಾಂಗ್ ತಿಳಿಸಿದ್ದಾರೆ.
ಈ ನಿರ್ಧಾರವನ್ನು ಬಿಸಿಸಿಐಗೂ ತಿಳಿಸಿರುವ ಐಸಿಸಿ, ಗ್ಲೌಸ್ ಧರಿಸಿದ್ದಕ್ಕಾಗಿ ಧೋನಿಗೆ ಯಾವುದೇ ದಂಡವಿಲ್ಲ ಎಂದೂ ಹೇಳಿದೆ. 'ಐಸಿಸಿ ನಿಯಮಾವಳಿಗೆ ಧಕ್ಕೆಯಾಗುವುದರಿಂದ ಗ್ಲೌಸಿನಿಂದ ಮುದ್ರೆ ತೆಗೆಯುವಂತೆ ತಿಳಿಸಿದ್ದೇವೆ. ಧೋನಿಗೆ ಯಾವುದೇ ದಂಡವಿಲ್ಲ' ಎಂದು ಫರ್ಲಾಂಗ್ ಹೇಳಿದ್ದಾರೆ.
ಬುಧವಾರ ಸೌತಾಂಪ್ಟನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಈ ವಿಶೇಷ ಗ್ಲೌಸ್ ಧರಿಸಿದ್ದು ಕಂಡುಬಂದಿತ್ತು. ಭಾರತೀಯರಿಂದ ಇದಕ್ಕೆ ಶ್ಲಾಘನೆಯೂ ವ್ಯಕ್ತವಾಗಿತ್ತು. ಆದರೆ ಧೋನಿ ಈ ಗ್ಲೌಸ್ ಧರಿಸಿರುವುದರ ಬಗ್ಗೆ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ತಕರಾರು ತೆಗೆದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications