Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾನು ನೋಡಿದವರಲ್ಲಿ ಎಂಎಸ್ ಧೋನಿ ಅತ್ಯುತ್ತಮ ಫಿನಿಶರ್: ಮೈಕ್ ಹಸ್ಸಿ

MS Dhoni greatest finisher I have seen: Mike Hussey

ನವದೆಹಲಿ, ಏಪ್ರಿಲ್ 29: ತಾನು ಕಂಡ ಶ್ರೇಷ್ಠ ಫಿನಿಶರ್‌ಗಳಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮೊದಲಿಗ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕಲ್ ಹಸ್ಸಿ ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಹಸ್ಸಿ, ಧೋನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕೂಲ್ ಕ್ಯಾಪ್ಟನ್ ಧೋನಿ, ಲಂಡನ್‌ನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ ಬಳಿಕ ಯಾವುದೇ ಪಂದ್ಯವನ್ನಾಡಿಲ್ಲ. ಐಪಿಎಲ್‌ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಟೀಮ್ ಇಂಡಿಯಾಕ್ಕೆ ಕಮ್‌ ಬ್ಯಾಕ್‌ ಮಾಡುತ್ತಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿದ್ದವು. ಆದರೆ ಕೊರೊನಾ ವೈರಸ್‌ ಕಾರಣ ಐಪಿಎಲ್ ಟೂರ್ನಿಯೇ ಸದ್ಯಕ್ಕೆ ರದ್ದಾಗಿದೆ.

ಐಪಿಎಲ್‌ನಲ್ಲಿ ಧೋನಿ ಮುನ್ನಡೆಸುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ಮೈಕ್ ಹಸ್ಸಿ, ಧೋನಿ ಸಾಮರ್ಥ್ಯದ ಕುರಿತು ಮಾತನಾಡಿದ್ದಾರೆ. 'ಎಂಎಸ್ ಧೋನಿಯಲ್ಲಿ ನಾನು ಕಂಡ ದೊಡ್ಡ ಶಕ್ತಿಯೆಂದರೆ, ಅವರಲ್ಲಿರುವ ಫಿನಿಶಿಂಗ್ ಸಾಮರ್ಥ್ಯ. ಅವರು ಲೆಕ್ಕಾಚಾರದ ಮನಸ್ಸನ್ನು ಹೊಂದಿದ್ದಾರೆ ಮತ್ತು ಸ್ಮಾರ್ಟ್ ಕ್ರಿಕೆಟ್ ಆಡೋದು ಇದಕ್ಕೆ ಕಾರಣ,' ಎಂದು ಹಸ್ಸಿ ಹೇಳಿದ್ದಾರೆ.

'ಎಷ್ಟೇ ಒತ್ತಡದ ಸಂದರ್ಭದಲ್ಲೂ ಧೋನಿ ಶಾಂತರಾಗಿ ಉಳಿಯಬಲ್ಲರು. ಅವರಲ್ಲಿ ನಂಬಲಾರದ ಶಕ್ತಿಯಿದೆ. ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್) ಕೂಡ ಸಾಕಷ್ಟು ಅತ್ಯುತ್ತಮ ಕೌಶಲಗಳನ್ನು ಹೊಂದಿದ್ದಾರೆ. ಆದರೆ ಫಿನಿಶಿಂಗ್ ಕೌಶಲದ ವಿಚಾರದಲ್ಲಿ ಮಾತ್ರ ಧೋನಿ ಇನ್ನೂ ಎತ್ತರಕ್ಕೆ ನಿಲ್ಲುತ್ತಾರೆ,' ಎಂದು ಹಸ್ಸಿ ವಿವರಿಸಿದ್ದಾರೆ.

Story first published: Wednesday, April 29, 2020, 19:53 [IST]
Other articles published on Apr 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+