ಕೊಹ್ಲಿ ಭಯಂಕರ ನಾಯಕ, ಆದರೆ ಧೋನಿ ಅದಕ್ಕೂ ಮೇಲೆ: ಶೇನ್ ವಾರ್ನ್

ನವದೆಹಲಿ, ಮಾರ್ಚ್ 12: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಬ್ಬ ಭಯಂಕರ ನಾಯಕ. ಆದರೆ ಮಾಜಿ ನಾಯಕ ಎಂಎಸ್ ಧೋನಿ ಅದಕ್ಕೂ ಮೇಲೆ ನಿಲ್ಲುತ್ತಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ, ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಹೇಳಿದ್ದಾರೆ. ಕೊಹ್ಲಿ ನಾಯಕತ್ವ ಅತ್ಯುತ್ತಮವಾಗಿದೆ, ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಧೋನಿ ಈಗಲೂ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂಬರ್ಥದಲ್ಲಿ ವಾರ್ನ್ ಮಾತನಾಡಿದ್ದಾರೆ.
ಮಂಗಳವಾರ (ಮಾರ್ಚ್ 12) ಎಎನ್ಐ ಜೊತೆ ಮಾತನಾಡುತ್ತ ವಾರ್ನ್, 'ವಿರಾಟ್ ಕೊಹ್ಲಿ ಅದ್ಭುತ ನಾಯಕ. ಆದರೆ ಒತ್ತಡದ ಸಂದರ್ಭಗಳಲ್ಲಿ ಕೊಹ್ಲಿಗೆ 'ಕೂಲ್ ಕ್ಯಾಪ್ಟನ್' ಧೋನಿ ನೆರವಾಗಿದ್ದನ್ನು ನಾವು ನೋಡಿದ್ದೇವೆ. ಒಳ್ಳೆಯ ಸಂದರ್ಭಗಳಿದ್ದಾಗ ಕೊಹ್ಲಿಗೆ ತಂಡ ಮುನ್ನಡೆಸೋದು ಸುಲಭ. ಆದರೆ ಇಕ್ಕಟ್ಟಿನ ವೇಳೆ ಧೋನಿಯ ಅನುಭವ ತಂಡದ ನೆರವಿಗೆ ಬರುತ್ತದೆ' ಎಂದಿದ್ದಾರೆ.
'ಎಂಎಸ್ ಒಬ್ಬ ಶ್ರೇಷ್ಠ ನಾಯಕ. ಇಂಥ ಜಾಗದಲ್ಲಿ ಬೇಕು ಅನ್ನಿಸುವ ಎಲ್ಲಿಯೂ ಧೋನಿ ಬ್ಯಾಟ್ ಮಾಡಬಲ್ಲರು. ಆತ ಎಲ್ಲದಕ್ಕೂ ಒಗ್ಗಿಕೊಳ್ಳಬಲ್ಲರು. ಧೋನಿಯನ್ನು ಟೀಕಿಸುವವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಅನ್ನೋದೇ ಗೊತ್ತಿಲ್ಲ' ಎಂದು ಶೇನ್ ಹೇಳಿಕೊಂಡಿದ್ದಾರೆ.
ಮಾತು ಮುಂದುವರೆಸಿದ ವಾರ್ನ್ 'ಈ ಬಾರಿಯ ವಿಶ್ವಕಪ್‌ನಲ್ಲಿ ಎಂಎಸ್ ಧೋನಿ ತಂಡದಲ್ಲಿರಬೇಕು. ಟೀಮ್ ಇಂಡಿಯಾಕ್ಕೆ ಧೋನಿಯ ನಾಯಕತ್ವ ಮತ್ತು ಕೌಶಲಗಳ ಅಗತ್ಯವಿದೆ. ಜೊತೆಗೆ ಮೈದಾನದಲ್ಲಿ ಕೊಹ್ಲಿಗೆ ನೆರವು ನೀಡುವ ನಿಟ್ಟಿನಲ್ಲೂ ಧೋನಿ ವಿಶ್ವಕಪ್ ವೇಳೆ ಮೈದಾನದಲ್ಲಿರಬೇಕು' ಎಂದು ವಿವರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications