For Quick Alerts
ALLOW NOTIFICATIONS  
For Daily Alerts
 

IPL 2025: ಧೋನಿ ಐಪಿಎಲ್‌ನಲ್ಲಿ ಆಡುತ್ತಾರಾ? ಮೌನ ಮುರಿದ ಮಾಹಿ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದಾರೆ. ಈಗ ಅವರು ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಈ ವರ್ಷವೂ ಅಂಗಳಕ್ಕೆ ಇಳಿಯುತ್ತಾರಾ? ಎಂಬ ಪ್ರಶ್ನೆಗಳು ಎದ್ದಿವೆ. ಈ ಎಲ್ಲ ಪ್ರಶ್ನೆಗಳಿಗೆ ಮಹೇಂದ್ರ ಸಿಂಗ್ ಧೋನಿ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಐದು ಬಾರಿ ಐಪಿಎಲ್‌ ಟ್ರೋಫಿ ಗೆದ್ದು ಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ. ಇವರು ಮೈದಾನಕ್ಕೆ ಇಳಿದರೆ ವಯಸ್ಸು ಬರೀ ಅಂಕಿಯಂತೆ ಕಾಣುತ್ತದೆ. ಈಗಲೂ ಇವರ ಫಿಟ್ನೆಸ್‌ಗೆ ಯುವಕರನ್ನು ನಾಚಿಸುವಂತಿದೆ. ಬ್ಯಾಟಿಂಗ್ ಹಾಗೂ ವಿಕೆಟ್‌ ಕೀಪಿಂಗ್‌ನಲ್ಲಿ ಈಗಲೂ ಸ್ಥಿರ ಪ್ರದರ್ಶನ ನೀಡುತ್ತಿರುವ ಮಹೇಂದ್ರ ಸಿಂಗ್‌ 18ನೇ ಆವೃತ್ತಿಯ ಐಪಿಎಲ್‌ ಆಡುತ್ತಾರಾ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿರುವ ವೇಳೆ ಮಾಹಿ ಈ ಬಗ್ಗೆ ಮೌನ ಮುರಿದಿದ್ದಾರೆ.

MS Dhoni Hints at Continuing in IPL with Chennai Super Kings for 2025 and Beyond

ಮೌನ ಮುರಿದ ಧೋನಿ

ಐಪಿಎಲ್‌ 2025ರಲ್ಲಿ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್ ಪರ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಇವರನ್ನು ಸಿಎಸ್‌ಕೆ ರಿಟೇನ್‌ ಮಾಡಿಕೊಳ್ಳುವ ಸಂಭವವಿದೆ. ಕಳೆದ ಋತುವಿನ ಆರಂಭಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದರು. ಅಲ್ಲದೆ ಯುವ ಆಟಗಾರ ರುತುರಾಜ್ ಗಾಯಕ್ವಾಡ್‌ ಅವರಿಗೆ ಪಟ್ಟ ಕಟ್ಟಲಾಗಿತ್ತು. ಹೀಗಾಗಿ ಇವರನ್ನು ಸಿಎಸ್‌ಕೆ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

2025 ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಧೋನಿ ಸುಳಿವು ನೀಡಿದ್ದಾರೆ. ಮುಂದಿನ ಕೆಲವು ವರ್ಷಗಳ ಕಾಲ ಕ್ರಿಕೆಟ್ ಆಡಲು ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಧೋನಿ ಐಪಿಎಲ್ 2025 ಕ್ಕೆ ಮಾತ್ರವಲ್ಲದೆ ಮೆಗಾ ಹರಾಜಿನ ನಂತರ ಸಂಪೂರ್ಣ ಮೂರು ವರ್ಷಗಳ ಚೆನ್ನೈ ತಂಡಕ್ಕೆ ಲಭ್ಯರಾಗುವ ಸಾಧ್ಯತೆ ಇದೆ.

MS Dhoni Hints at Continuing in IPL with Chennai Super Kings for 2025 and Beyond

ಧೋನಿ ಹೇಳಿದ್ದೇನು?

ಇತ್ತೀಚಿಗೆ ಗೋವಾದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಧೋನಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಐಪಿಎಲ್‌ನಲ್ಲಿ ಆಡುವ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಆಗ ಮಾಹಿ, ನಾನು ಇನ್ನು ಕ್ರಿಕೆಟ್ ಆನಂದಿಸುತ್ತಿದ್ದೇನೆ. ಕ್ರಿಕೆಟ್ ಅನ್ನು ವೃತ್ತಿಪರವಾಗಿ ಆಡುವಾಗ, ಅದನ್ನು ಆಟವಾಗಿ ಆನಂದಿಸಲು ಕಷ್ಟವಾಗುತ್ತದೆ. ಇದನ್ನೇ ನಾನು ಮಾಡಲು ಬಯಸುತ್ತೇನೆ. ಆಡುವಾಗ ಭಾವನೆಗಳು ಬರುತ್ತಲೇ ಇರುತ್ತವೆ. ಮುಂದಿನ ಕೆಲವು ವರ್ಷಗಳವರೆಗೆ ನಾನು ಆಟವನ್ನು ಆನಂದಿಸಲು ಬಯಸುತ್ತೇನೆ ಎಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ನಾಯಕ, "ನಾನು ಒಂಬತ್ತು ತಿಂಗಳ ಕಾಲ ನನ್ನನ್ನು ಫಿಟ್ ಆಗಿಟ್ಟುಕೊಳ್ಳಲು ಶ್ರಮಿಸಬೇಕಿದೆ. ಇದರಿಂದ ನಾನು ಎರಡೂವರೆ ತಿಂಗಳು ಐಪಿಎಲ್ ಆಡಬಹುದು. ನೀವು ಇದಕ್ಕಾಗಿ ಯೋಜನೆ ರೂಪಿಸಿಕೊಳ್ಳಬೇಕು. ಅಲ್ಲದೆ ಇದೇ ವೇಳೆ ವಿಶ್ರಾಂತಿಯನ್ನು ಸಹ ಪಡೆಯಬೇಕು ಎಂದು ತಿಳಿಸಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಉಳಿಸಿಕೊಳ್ಳಬಹುದು. ಸಿಎಸ್‌ಕೆಗೆ ಬಿಸಿಸಿಐ ಒಂದು ನಿಯಮ ವರದಾನವಾಗಲಿದೆ. ವರ್ಷಗಳ ಕಾಲ ಭಾರತಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಿರುವ ಆ ಆಟಗಾರನನ್ನು ಅನ್‌ಕ್ಯಾಪ್ಡ್ ಎಂದು ಪರಿಗಣಿಸಲಾಗುವುದು. ಈ ನಿಯಮದ ಲಾಭವನ್ನು ಪಡೆದು ಸಿಎಸ್‌ಕೆ ಧೋನಿ ಅವರನ್ನು ಉಳಿಸಿಕೊಳ್ಳಬಹುದು. 2019 ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಬಾರಿಗೆ ಆಡಿದ್ದ ಧೋನಿ ಅವರನ್ನು ಕೇವಲ 4 ಕೋಟಿ ರೂಪಾಯಿಗೆ ಸಿಎಸ್‌ಕೆ ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಬಹುದು.

Story first published: Saturday, October 26, 2024, 12:43 [IST]
Other articles published on Oct 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+