ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ!

ನವದೆಹಲಿ, ನವೆಂಬರ್ 26: ಮುಂದಿನ ವರ್ಷ ಅಂದರೆ 2020ರ ಮಾರ್ಚ್ ವೇಳೆ ಎಂಎಸ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. 13ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಯಾರಿ ಸಲುವಾಗಿಯೂ ಧೋನಿಗೆ ಇದು ಸಹಾಯಕವಾಗಲಿದೆ ಎಂದು ಹೇಳಲಾಗುತ್ತಿದೆ.
ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ), ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಜೊತೆ 7 ಟಾಪ್ ಆಟಗಾರರನ್ನು ಏಷ್ಯಾ XI ತಂಡದಲ್ಲಿ ಆಡಲು ಅನುವು ಮಾಡಿಕೊಡುವಂತೆ ಕೋರಿಕೊಂಡಿದೆ. ಏಷ್ಯಾ XI ಮತ್ತು ರೆಸ್ಟ್ ಆಫ್ ದ ವರ್ಲ್ಡ್ ಮಧ್ಯೆ 2 ಟಿ20 ಪಂದ್ಯಗಳು ನಡೆಯುವುದರಲ್ಲಿದೆ.
ಈ ಯೋಜಿತ 2 ಪಂದ್ಯಗಳನ್ನು 2020ರ ಮಾರ್ಚ್ 18ರಿಂದ 21ರ ವರೆಗೆ ನಡೆಸಲು ಉದ್ದೇಶಿಸಲಾಗಿದೆ. ಈ ಟೂರ್ನಿಗಾಗಿ ಬಿಸಿಬಿಯು ಧೋನಿ ಸೇರಿದಂತೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ರವೀಂದ್ರ ಜಡೇಜಾ ಅವರಿಗೆ ಆಡಲು ಅನುವು ಮಾಡುವಂತೆ ಬಿಸಿಸಿಐನಲ್ಲಿ ಕೋರಿಕೊಂಡಿದೆ.
'ಬಾಂಗ್ಲಾದೇಶವು ಏಷ್ಯಾ XI ಮತ್ತು ರೆಸ್ಟ್ ಆಫ್ ದ ವರ್ಲ್ಡ್ ಮಧ್ಯೆ 2 ಟಿ20 ಪಂದ್ಯಗಳನ್ನು ನಡೆಸಲು ದಿನ ನಿಗದಿಪಡಿಸಿದೆ. ಆಟಗಾರರಿಗೆ ಅವಕಾಶ ಮಾಡಿಕೊಡುವಂತೆ ನಾವು ಬಿಸಿಸಿಐ ಮತ್ತು ಏಷ್ಯಾದ ಇನ್ನಿತರ ಕ್ರಿಕೆಟ್ ಬೋರ್ಡ್‌ಗಳ ಜೊತೆ ಸಂಪರ್ಕವನ್ನಿಟ್ಟುಕೊಂಡಿದ್ದೇವೆ,' ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಾಹಕ ನಿಝಾಮುದ್ದೀನ್ ಚೌಧರಿ ಮಾಹಿತಿ ನೀಡಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದಿದ್ದ 2019ರ ಐಸಿಸಿ ವಿಶ್ವಕಪ್ ಟೂರ್ನಿಯ, ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಭಾರತ ಹೊರಬಿದ್ದ ಬಳಿಕ ಧೋನಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. ಮಾರ್ಚ್‌ನಲ್ಲಿ ನಡೆಯುವ ಈ ಉದ್ದೇಶಿತ 2 ಪಂದ್ಯಗಳ ಮೂಲಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್ ಬ್ಯಾಕ್ ಆಗಲಿದ್ದಾರೆ ಎನ್ನಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications