ಭಾರತದ ಆಟಗಾರನ ರೀತಿಯ ಪ್ಲೇಯರ್‌ಗಾಗಿ ಹುಡುಕಾಡುತ್ತಿದೆ ಆಸ್ಟ್ರೇಲಿಯಾ: ಆಸಿಸ್ ಕೋಚ್

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಅತ್ಯುತ್ತಮ ಫಿನಿಷರ್‌ಗಾಗಿ ಹುಡುಕಾಟವನ್ನು ನಡೆಸುತ್ತಿದೆ ಎಂದು ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ. ಅದರಲ್ಲೂ ಲ್ಯಾಂಗರ್ ಟೀಮ್ ಇಂಡಿಯಾದ ಆಟಗಾರನಂತಾ ಫಿನಿಷರ್ ಆಸ್ಟ್ರೇಲಿಯಾ ತಂಡಕ್ಕೆ ಬೇಕು ಎಂದಿದ್ದಾರೆ.
ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 0-3 ಅಂತರದಿಂದ ಹೀನಾಯವಾಗಿ ಕಳೆದುಕೊಂಡಿತು. ಇದಾದ ಬಳಿಕ ಆಸ್ಟ್ರೇಲಿಯಾದ ಕೋಚ್ ಆಗಿರುವ ಜಸ್ಟಿನ್ ಲ್ಯಾಂಗರ್ ಈ ಹೇಳಿಕೆಯನ್ನು ನೀಡಿದ್ದಾರೆ.
ಆಸ್ಟ್ರೇಲಿಯಾ ತಂಡ ಸದ್ಯ ಉತ್ತಮ ಫಿನಿಷರ್‌ನ ಕೊರತೆಯನ್ನು ಅನುಭವಿಸುತ್ತಿರುವುದನ್ನು ಜಸ್ಟಿನ್ ಲ್ಯಾಂಗರ್ ಹೇಳಿಕೊಂಡಿದ್ದಾರೆ. ಹೀಗಾಗಿ ಭಾರತದ ಒರ್ವ ಆಟಗಾರನ ರೀತಿಯ ಪ್ಲೇಯರ್ ಆಸ್ಟ್ರೇಲಿಯಾ ತಂಡಕ್ಕೆ ಬೇಕು ಎಂದಿದ್ದಾರೆ ಲ್ಯಾಂಗರ್.

ಟೀಮ್ ಇಂಡಿಯಾದ ಫಿನಿಷರ್ ರೀತಿಯಿರಬೇಕು
ಆಸ್ಟ್ರೇಲಿಯಾ ಹುಡುಕಾಟವನ್ನು ನಡೆಸುತ್ತುತ್ತಿರೋದು ಬೇರೆ ಯಾರಿಗೂ ಅಲ್ಲ. ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯಂತಾ ಆಟಗಾರನಿಗಾಗಿ. ಈ ವಿಚಾರವನ್ನು ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿಕೊಂಡಿದ್ದಾರೆ.

ಮಾಸ್ಟರ್ ಆಫ್ ಗೇಮ್ ಫಿನಿಷರ್
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾಸ್ಟರ್ ಆಫ್ ಗೇಮ್ ಫಿನಿಷರ್ ಎಂದು ಹೇಳಕೊಂಡಿದ್ದಾರೆ ಜಸ್ಟಿನ್ ಲ್ಯಾಂಗರ್. ಆತನಂತಾ ಗೇಮ್ ಫಿನಿಷರ್ ಆಸ್ಟ್ರೇಲಿಯಾ ತಂಡಕ್ಕೆ ಸದ್ಯ ಅವಶ್ಯಕವಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಇದ್ದರು ಅದ್ಭುತ ಫಿನಿಷರ್‌ಗಳು
ಆಸ್ಟ್ರೇಲಿಯಾ ತಂಡ ಈ ಹಿಂದೆ ಅದ್ಭುತ ಫಿನಿಷರ್‌ಗಳನ್ನು ಹೊಂದಿತ್ತು. ಮೈಕ್ ಹಸ್ಸಿ, ಮೈಕಲ್ ಬೆವೆನ್‌ರಂತಾ ಫಿನಿಷರ್‌ಗಳು ಆಸ್ಟ್ರೇಲಿಯಾ ತಂಡದಲ್ಲಿದ್ದರು. ಇಂಗ್ಲೆಂಡ್ ತಂಡದಲ್ಲಿ ಜೋಸ್ ಬಟ್ಲರ್ ಕೂಡ ಓರ್ವ ಚಾಣಾಕ್ಷ ಗೇಮ್ ಫಿನಿಷರ್ ಎನಿಸಿಕೊಂಡಿದ್ದಾರೆ ಎಂದು ಲ್ಯಾಂಗರ್ ಹೇಳಿದ್ದಾರೆ.

ಧೋನಿ ಭವಿಷ್ಯದ ಸ್ಪಷ್ಟತೆಯಿಲ್ಲ
ಮಹೇಂದ್ರ ಸಿಂಗ್ ಧೋನಿ ಕಳೆದ ಏಕದಿನ ವಿಶ್ವಕಪ್‌ನ ಬಳಿಕ ಯಾವುದೇ ಪಂದ್ಯದಲ್ಲಿ ಪಾಲ್ಗೊಂಡಿಲ್ಲ. ಮುಂದಿನ ಐಪಿಎಲ್ ಟೂರ್ನಮೆಂಟ್ ಧೋನಿ ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ಸ್ಪಷ್ಟತೆಯನ್ನು ನೀಡುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications