Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿ ಓರ್ವ ತ್ವರಿತ ಸಲಹೆಗಾರ, ಆದರೆ ವಿರಾಟ್ ಕೊಹ್ಲಿ..: ಕುಲ್‌ದೀಪ್ ಯಾದವ್

Ms Dhoni Is An Instant Advisor, Virat Kohli A Great Motivator-kuldeep Yadav

ಟೀಮ್ ಇಂಡಿಯಾದ ಯುವ ಸ್ಪಿನ್ನರ್ ಕುಲ್‌ದೀಪ್ ಯಾದವ್ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಇಬ್ಬರು ನಾಯಕರ ವೈಶಿಷ್ಯಗಳೇನು ಎಂಬುದನ್ನು ಟೀಮ್ ಇಂಡಿಯಾದ ಚೈನಾಮನ್ ಬೌಲರ್ ಎಂದೇ ಖ್ಯಾತರಾದ ಕುಲ್‌ದೀಪ್ ಯಾದವ್ ವಿವರಿಸಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕುಲ್‌ದೀಪ್ ಯಾದವ್ ತಂಡದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ವಿಕೆಟ್ ಹಿಂದಿನಿಂದ ಧೋನಿ ನೀಡುತ್ತಿದ್ದ ಸಲಹೆ ಯುವ ಬೌಲರ್‌ ಆಗಿ ನನಗೆ ಸಾಕಷ್ಟು ಉಪಯುಕ್ತವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಧೋನಿ ಮತ್ತೆ ಆಡಬೇಕು

ಧೋನಿ ಮತ್ತೆ ಆಡಬೇಕು

ನಾವೆಲ್ಲರೂ ಮಾಹಿ ಭಾಯ್‌ಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಾನು ಧೋನಿಯ ದೊಡ್ಡ ಅಭಿಮಾನಿ. ನಾನು ನಿಜಕ್ಕೂ ಧೋನಿ ತಂಡಕ್ಕೆ ಅದಷ್ಟು ಬೇಗನೆ ತಂಡಕ್ಕೆ ವಾಪಾಸಾಗಿ ಆಡಬೇಕೆಂದು ಬಯಸುತ್ತಿದ್ದೇನೆ. ವೈಯಕ್ತಿಕವಾಗಿ ನನಗೆ ಧೋನಿ ಟೀಮ್ ಇಂಡಿಯಾ ಪರವಾಗಿ ಮತ್ತೆ ಆಡಬೇಕೆಂದು ಬಯಸುತ್ತಿದ್ದೇನೆ ಎಂದು 25 ವರ್ಷದ ಆಟಗಾರ ಕುಲ್ದೀಪ್ ಯಾದವ್ ಹೇಳಿದ್ದಾರೆ.

ಧೋನಿಯ ಸಲಹೆ ಪರಿಣಾಮಕಾರಿ

ಧೋನಿಯ ಸಲಹೆ ಪರಿಣಾಮಕಾರಿ

ನಾವು ಯಾವಾಗ ಮೈದಾನಕ್ಕೆ ಇಳಿದಾಗಲೂ ಧೋನಿ ಕೆಲ ಸಾಂದರ್ಭಿಕ ಸಲಹೆಗಳನ್ನು ನೀಡುತ್ತಿರುತ್ತಾರೆ. ಆ ರೀತಿಯ ತಕ್ಷಣದ ಸಲಹೆಗಳು ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಅವರೋರ್ವ ಶ್ರೇಷ್ಠ ತ್ವರಿತ ಸಲಹೆಗಾರ. ಪಂದ್ಯದ ಅಂತ್ಯದಲ್ಲಿ ಅಥವಾ ಮುಕ್ತಾಯದ ಬಳಿಕ ಸಲಹೆ ನೀಡುವುದರ ಬಗ್ಗೆ ಅವರಿಗೆ ನಂಬಿಕೆಯಿಲ್ಲ. ಸಂದರ್ಭಕ್ಕೆ ಪೂರಕವಾಗಿ ಅವರು ಸಲಹೆಯನ್ನು ನೀಡುತ್ತಾರೆ ಎಂದು ಕುಲ್‌ದೀಪ್ ಹೇಳಿದ್ದಾರೆ.

ಕೊಹ್ಲಿ ಸ್ಪೂರ್ತಿಯ ನಾಯಕ

ಕೊಹ್ಲಿ ಸ್ಪೂರ್ತಿಯ ನಾಯಕ

ಇನ್ನು ಇದೇ ಸಂದರ್ಭದಲ್ಲಿ ನಾಯಕ ಕೊಹ್ಲಿಯ ಬಗ್ಗೆಯೂ ಮಾತನಾಡಿದ ಕುಲ್‌ದೀಪ್ ಆತನೋರ್ವ ಸ್ಪೂರ್ತಿ ನೀಡುವ ವ್ಯಕ್ತಿ ಎಂದಿದ್ದಾರೆ. ಯುವ ಆಟಗಾರರಿಗೆ ಕೊಹ್ಲಿ ನೀಡುವ ಪ್ರೇರಣೆ ದೊಡ್ಡ ಶಕ್ತಿ ನೀಡುತ್ತದೆ. ನನಗೆ ಅಂಗಳದೊಳಗೆ ಮತ್ತು ಹೊರಗೆ ಕೊಹ್ಲಿ ಸಾಕಷ್ಟು ಸಲಹೆಯನ್ನು ನೀಡುತ್ತಿರುತ್ತಾರೆ. ನಾಯಕನಾಗಿ ಕಠಿಣ ಸಂದರ್ಭದಲ್ಲಿ ಅವರು ಯಾವಾಗಲು ಬೆಂಬಲವಾಗಿರುತ್ತಾರೆ ಎಂದು ಕುಲ್‌ದೀಪ್ ಯಾದವ್ ಹೇಳಿದ್ದಾರೆ.

ಕೊಹ್ಲಿಯನ್ನು ಮೀರಿಸುವುದು ಅಸಾಧ್ಯ

ಕೊಹ್ಲಿಯನ್ನು ಮೀರಿಸುವುದು ಅಸಾಧ್ಯ

ಬೌಲರ್‌ಗಳ ಮನಸ್ಥಿತಿ ಏನು ಎಂಬುದನ್ನು ವಿರಾಟ್ ಚೆನ್ನಾಗಿ ಅರಿತುಕೊಳ್ಳುತ್ತಾರೆ. ಸಂದರ್ಭಕ್ಕೆ ಅನುಗುಣವಾಗಿ ಎಲ್ಲಗೆ ಚೆಂಡನ್ನು ಎಸೆಯಬೇಕು ಎಂಬುದನ್ನೂ ವಿರಾಟ್ ಸಲಹೆ ನೀಡುತ್ತಾರೆ. ಆತನೋರ್ವ ವಿಶ್ವದರ್ಜೆಯ ಆಟಗಾರ. ಆತನ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮೀರಿಸುವುದು ಅಸಾಧ್ಯ ಎಂದು ಕುಲ್‌ದೀಪ್ ಯಾದವ್ ಹೇಳಿದ್ದಾರೆ.

Story first published: Monday, June 29, 2020, 15:26 [IST]
Other articles published on Jun 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+