ಟೀಮ್ ಇಂಡಿಯಾಗೆ ಧೋನಿಯ ಅವಶ್ಯಕತೆಯಿದೆ: ಸುರೇಶ್ ರೈನಾ

ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ನ್ಯಾಕ ಮಹೇಂದ್ರ ಸಿಂಗ್ ಧೋನಿ ಫಿಟ್ ಆಗಿದ್ದು ಅವರ ಅಗತ್ಯ ಟೀಮ್ ಇಂಡಿಯಾಗೆ ಇದೆ ಎಂಬ ಮಾತನ್ನು ಸುರೇಶ್ ರೈನಾ ಹೇಳಿದ್ದಾರೆ.
ಧೋನಿ ನಿವೃತ್ತಿಯನ್ನು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದರೆ ಯಾವುದೇ ದೊಡ್ಡ ಸಂಚಲನವನ್ನುಂಟು ಮಾಡಲು ಬಯಸುವುದಿಲ್ಲ. ಆದರೆ ನಾನು ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿ ಆಡುವುದನ್ನು ಬಯಸುತ್ತೇನೆ ಎಂದಿದ್ದಾರೆ ಸುರೇಶ್ ರೈನಾ.
33 ವರ್ಷದ ಸುರೇಶ್ ರೈನಾ ಚೆನ್ನೈನಲ್ಲಿ ಕೋಚ್ ಗ್ರೆಗ್ ಕಿಂಗ್ ಅವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಐಪಿಎಲ್ 2020ಯಲ್ಲಿ ಪಾಲ್ಗೊಳ್ಳಲಿರುವ ಸುರೇಶ್ ರೈನಾ ಮುಂದಿನ ಐಪಿಎಲ್ ವಿಸ್ವಕಪ್‌ನಲ್ಲಿ ಪಾಲ್ಗೊಳ್ಳುವ ಭರವಸೆ ವ್ಯಕ್ತ ಪಡಿಸಿದ್ದಾರೆ.
ಸೀಮಿತ ಓವರ್‌ಗಳಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದ ಸುರೇಶ್ ರೈನಾ ಕಳೆದ ಐಪಿಎಲ್ ಆವೃತ್ತಿಯ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಮತ್ತೊಂದು ಐಪಿಎಲ್ ಸರಣಿಗಾಗಿ ಸುರೇಶ್ ರೈನಾ ಅಭ್ಯಾಸ ಆರಂಭಿಸಿದ್ದು ಉತ್ತಮ ಪ್ರದರ್ಶನ ನೀಡಿ ಮತ್ತೆ ತಂಡಕ್ಕೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications