ಧೋನಿ ನನ್ನ ಜೇಬಿನಲ್ಲಿದ್ದಾನೆ ಎಂದ ಪೀಟರ್ಸನ್; ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ಜಹೀರ್ ಖಾನ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಕ್ರಿಕೆಟ್ ಪರಿಣಿತರ ತಂಡದ ಭಾಗವಾಗಿರುವ ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ವಿಶಾಖಪಟ್ಟಣದಲ್ಲಿ ಭಾರತದ ಮಾಜಿ ವೇಗಿ ಜಹೀರ್ ಖಾನ್ ಅವರೊಂದಿಗೆ ಉಲ್ಲಾಸದ ಸಂಭಾಷಣೆ ನಡೆಸಿದರು.
ಜಹೀರ್ ಖಾನ್ ಮತ್ತು ಕೆವಿನ್ ಪೀಟರ್ಸನ್ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಜಿಯೋ ಸಿನಿಮಾಗೆ ಪರಿಣಿತರಾಗಿ ಕೆಲಸ ಮಾಡಿದರು.
ಈ ವೇಳೆ ಕೆವಿನ್ ಪೀಟರ್ಸನ್ ಅವರು ಪಾಕಿಸ್ತಾನದ ಕಮ್ರಾನ್ ಅಕ್ಮಲ್ ಜೊತೆಗೆ ತಮ್ಮ ಪಾಕೆಟ್ (ಜೇಬು)ನಲ್ಲಿ ಶ್ರೇಷ್ಠ ಕ್ರಿಕೆಟಿಗ ಎಂಎಸ್ ಧೋನಿಯನ್ನು ಹೇಗೆ ಹೊಂದಿದ್ದರು ಎಂಬುದರ ಕುರಿತು ಮಾತನಾಡುತ್ತಾ ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

ಆದರೆ, ಭಾರತೀಯ ಮಾಜಿ ವೇಗಿ ಜಹೀರ್ ಖಾನ್‌ನಿಂದ ತೀಕ್ಷ್ಣವಾದ ಉತ್ತರದ ಬಗ್ಗೆ ಕೆವಿನ್ ಪೀಟರ್ಸನ್‌ಗೆ ತಿಳಿದಿರಲಿಲ್ಲ ಅನ್ನಿಸುತ್ತದೆ. ಕೆವಿನ್ ಪೀಟರ್ಸನ್ ತಮ್ಮ ಸಕ್ರಿಯ ಕ್ರಿಕೆಟ್ ದಿನಗಳಲ್ಲಿ ಇಂಗ್ಲೆಂಡ್ ವಿರುದ್ಧ ಅದ್ಭುತ ಯಶಸ್ಸನ್ನು ಗಳಿಸಿದ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಜಹೀರ್ ಖಾನ್ ನೆನಪಿಸಿದರು.
ಕೆವಿನ್ ಪೀಟರ್ಸನ್ ಕ್ರಿಕೆಟ್ ಮೈದಾನದಲ್ಲಿ ಎಂಎಸ್ ಧೋನಿಯನ್ನು ಉತ್ತಮಪಡಿಸುವ ಬಗ್ಗೆ ಬಡಾಯಿ ಕೊಚ್ಚಿಕೊಂಡಾಗ ಈ ಸಂಭಾಷಣೆಯು ಆರಂಭಗೊಂಡಿತು.
ಆದರೆ, ಅರೆಕಾಲಿಕ ಸ್ಪಿನ್ನರ್ ಆಗಿರುವ ಯುವರಾಜ್ ಸಿಂಗ್ ಅವರು 22-ಯಾರ್ಡ್ ಸ್ಟ್ರಿಪ್‌ನಲ್ಲಿ ಕೆವಿನ್ ಪೀಟರ್ಸನ್ ಔಟ್ ಮಾಡಲು ಎಷ್ಟು ಬಾರಿ ಯಶಸ್ವಿಯಾದರು ಎಂಬುದನ್ನು ಜಹೀರ್ ಖಾನ್ ತ್ವರಿತವಾಗಿ ನೆನಪಿಸಿದರು.

ಪೀಟರ್ಸನ್ ಮತ್ತು ಜಹೀರ್ ಸಂಭಾಷಣೆ ಇಲ್ಲಿದೆ
ಕೆವಿನ್ ಪೀಟರ್ಸನ್: ನನ್ನ ಜೇಬಿನಲ್ಲಿ ಯಾರನ್ನು ಇಟ್ಟುಕೊಂಡಿದ್ದೇನೆ ಎಂದು ನಿಮಗೆ ತಿಳಿದಿದೆಯೇ? ಶ್ರೇಷ್ಠ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ. ಅವರ ಪಕ್ಕದಲ್ಲಿಯೇ ಕಮ್ರಾನ್ ಅಕ್ಮಲ್ ಕೂಡ ಇದ್ದಾನೆ ಎಂದರು.
ಜಹೀರ್ ಖಾನ್: ನಾನು ಇತ್ತೀಚೆಗೆ ಯುವರಾಜ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಅವರು ಕೆವಿನ್ ಪೀಟರ್ಸನ್ ಅಲ್ಲಿರುವ (ಜೇಬು) ಬಗ್ಗೆ ಮಾತನಾಡುತ್ತಿದ್ದರು ಎಂದು ಟಕ್ಕರ್ ಕೊಟ್ಟರು.
ಕೆವಿನ್ ಪೀಟರ್ಸನ್: ಹೌದು, ನನಗೆ ಗೊತ್ತಿತ್ತು. ನೀನು ಹೀಗೆ ಹೇಳುತ್ತೀಯ ಎಂದು ನನಗೆ ಗೊತ್ತಿತ್ತು.
ಕೆವಿನ್ ಪೀಟರ್ಸನ್: ಯುವರಾಜ್ ಸಿಂಗ್ ನನಗೆ ಕೆಲವು ಬಾರಿ ಸಿಕ್ಕಿದ್ದರು.
ಈ ಹಿಂದೆ ಕೆವಿನ್ ಪೀಟರ್ಸನ್ ಅವರು ಯುವರಾಜ್ ಸಿಂಗ್‌ಗೆ ಅಡ್ಡಹೆಸರು (ಪೈ ಚಕ್ಕರ್) ನೀಡಿದ್ದರು ಮತ್ತು ಭಾರತದ ಆಲ್‌ರೌಂಡರ್ ಅದನ್ನು ಅವರ ಇಮೇಲ್ ಐಡಿಗಳಲ್ಲಿ ಒಂದಾಗಿ ಬಳಸಿದ್ದಾರೆ ಎಂದು ಜಹೀರ್ ಖಾನ್ ನೆನಪಿಸಿದರು.
ಜಹೀರ್ ಖಾನ್: ಕೆವಿನ್ ಪೀಟರ್ಸನ್ ಅವರು ಯುವರಾಜ್ ಸಿಂಗ್ ಅವರಿಗೆ ವಿಶೇಷ ಅಡ್ಡಹೆಸರನ್ನು ನೀಡಿದ್ದು ನನಗೆ ನೆನಪಿದೆ.
ಕೆವಿನ್ ಪೀಟರ್ಸನ್: ಹೌದು. ಅವನು ಅದನ್ನು ಸ್ವಲ್ಪ ಸಮಯದವರೆಗೆ ತನ್ನ ಇ-ಮೇಲ್ ಐಡಿಯಾಗಿಯೂ ಬಳಸಿದನು. ನಾವು ಕೆಲವು ದೊಡ್ಡ ವಾರ್‌ಗಳನ್ನು ಹೊಂದಿದ್ದೇವೆ, ಮೈದಾನದಲ್ಲಿ ಕೆಲವು ಸುಂದರವಾದ ಪೈಪೋಟಿ ನಡೆಸಿದ್ದೇವೆ ಮತ್ತು ನೀವು ದೀರ್ಘಕಾಲ ಆಡಿದಾಗ ಅದು ಸಂಭವಿಸುತ್ತದೆ.
ಒಳ್ಳೆಯ ವಿಷಯವೆಂದರೆ, ನೀವು ಹಳೆಯ ಘಟನೆಗಳ ಬಗ್ಗೆ ಮಾತನಾಡಬಹುದು ಮತ್ತು ಅದರೊಂದಿಗೆ ಆನಂದಿಸಬಹುದು. ರವಿಚಂದ್ರನ್ ಅಶ್ವಿನ್ ಅವರಂತಹ ವ್ಯಕ್ತಿ ತಮ್ಮ ವೃತ್ತಿಜೀವನವನ್ನು ಪೂರ್ಣಗೊಳಿಸಿದಾಗ ಬೆನ್ ಸ್ಟೋಕ್ಸ್ ಅವರೊಂದಿಗೆ ಮಾಡುವ ಮೊದಲ ಕೆಲಸ. ಅವರು ಈ ರೀತಿಯ ಹಾಸ್ಯ ಮಾಡುತ್ತಾ ನಗುತ್ತಾ ಇರುತ್ತಾರೆ ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications