ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ನ ಎದೆಬಡಿತ: ಫ್ಲೆಮಿಂಗ್

ಮುಂಬೈ: ಎಂಎಸ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್‌ನ ಹೃದಯ ಬಡಿತವಿದ್ದಂತೆ ಎಂದು ಸಿಎಸ್‌ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. 200 ಪಂದ್ಯಗಳ ಬಳಿಕವೂ ಧೋನಿ ಚೆನ್ನೈ ಪರ ಆಡುತ್ತಿದ್ದಾರೆ ಎಂದರೆ ಅದು ಧೋನಿಗೆ ಆಟದ ಮೇಲಿರುವ ಪ್ರೀತಿ, ಫ್ರಾಂಚೈಸಿ ಮೇಲಿರುವ ಗೌರವ ತಿಳಿಸಿಕೊಡುತ್ತದೆ ಎಂದು ಫ್ಲೆಮಿಂಗ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾದ 2008ರಿಂದಲೂ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಸಿಎಸ್‌ಕೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಧೋನಿ ನಾಯಕತ್ವದಡಿಯಲ್ಲಿ ಸಿಎಸ್‌ಕೆ ಫ್ರಾಂಚೈಸಿ ಒಟ್ಟು ಮೂರು ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿದೆ.
'ಸಿಎಸ್‌ಕೆ ಪರ ಧೋನಿಯ ಸುದೀರ್ಘ ಸೇವೆಯನ್ನು ನಾವು ಉಲ್ಲೇಖಿಸಬೇಕು, ಅಭಿನಂದಿಸಬೇಕು. 200 ಪಂದ್ಯಗಳನ್ನು ಆಡಿ ಇನ್ನೂ ಆಡಲು ಬಯಸುತ್ತಿದ್ದಾರೆ ಎಂದರೆ ಅದು ಧೋನಿಗೆ ಫ್ರಾಂಚೈಸಿ ಮತ್ತು ಆಟದ ಬಗೆಗಿನ ಬದ್ಧತೆಯ ಮನಸ್ಥಿತಿಯ ಬಗ್ಗೆ ಹೇಳುತ್ತದೆ,' ಎಂದು ಫ್ಲೆಮಿಂಗ್ ಹೇಳಿದ್ದಾರೆ.
14ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಎರಡು ಪಂದ್ಯಗಳನ್ನು ಆಡಿದೆ. ಇದರಲ್ಲಿ ಒಂದು ಪಂದ್ಯ ಸೋತು ಒಂದು ಪಂದ್ಯ ಗೆದ್ದಿದೆ. ಆದರೆ ಪಂಜಾಬ್ ವಿರುದ್ಧ ಸುಲಭ ಗೆಲುವು ದಾಖಲಿಸಿದ್ದರಿಂದ ಸಿಎಸ್‌ಕೆ ನೆಟ್ ರನ್‌ರೇಟ್ ತುಂಬಾ ಚೆನ್ನಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications