ಭಾರತ vs ನ್ಯೂಜಿಲ್ಯಾಂಡ್ ಟಿ20: ಎಂಎಸ್ ಧೋನಿ ಅಪರೂಪದ ದಾಖಲೆ


ಹ್ಯಾಮಿಲ್ಟನ್, ಫೆಬ್ರವರಿ 10: ಭಾರತದ ಅನುಭವಿ ಆಟಗಾರ ಎಂಎಸ್ ಧೋನಿ ಅಪರೂಪದ ಸಾದನೆಗಾಗಿ ಗುರುತಿಸಿಕೊಂಡಿದ್ದಾರೆ. ಭಾರತ-ನ್ಯೂಜಿಲ್ಯಾಂಡ್ ಮೂರನೇ ಪಂದ್ಯದಲ್ಲಿ ಧೋನಿ 300 ಟಿ20 ಪಂದ್ಯಗಳನ್ನು ಆಡಿದ ಭಾರತದ ಮೊದಲ ಆಟಗಾರನಾಗಿ ಗಮನ ಸೆಳೆದರು.
ಭಾನುವಾರ (ಫೆಬ್ರವರಿ 10) ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ನಡೆದ ಭಾರತ vs ನ್ಯೂಜಿಲ್ಯಾಂಡ್ ನಡುವಣ 3ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಧೋನಿ 300 ಟಿ20 ಪಂದ್ಯಗಳ ಮೈಲಿಗಲ್ಲು ಸ್ಥಾಪಿಸಿದರು. ಇದರಲ್ಲಿ 96 ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಉಳಿದವು ಇಂಡಿಯನ್ ಸೂಪರ್ ಲೀಗ್ (ಐಪಿಎಲ್) ಪಂದ್ಯಗಳಾಗಿವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಗಣಿಸಿದರೆ ಈ ಸಾಧನೆಗಾಗಿ ಮಾಹಿ, ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್, ಪಾಕಿಸ್ತಾನದ ಶೋಯೆಬ್ ಮಲ್ಲಿಕ್ ಮತ್ತು ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ ಸಾಲಿನಲ್ಲಿ ಸೇರಿಕೊಂಡಿದ್ದಾರೆ. ಈ ಮೂವರೂ 300ಕ್ಕೂ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ. ಈ ಯಾದಿಯಲ್ಲಿ ಅಗ್ರ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೀರನ್ ಪೊಲಾರ್ಡ್ ಒಟ್ಟು 446 ಪಂದ್ಯಗಳನ್ನಾಡಿದ್ದಾರೆ.
ಈ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿದ್ದ ಎಂಎಸ್ ಧೋನಿ ಒಂದು ಸ್ಟಂಪ್ಡ್ ಮತ್ತು ಕ್ಯಾಚ್ ಪಡೆದು ನ್ಯೂಜಿಲ್ಯಾಂಡ್ ವಿಕೆಟ್ ಮುರಿಯುವಲ್ಲಿ ನೆರವಾಗಿದ್ದರು. ಆದರೆ ಕೇವಲ 2 ರನ್‌ಗೆ ಡ್ಯಾರಿಲ್ ಮಿಚೆಲ್‌ಗೆ ವಿಕೆಟ್ ಒಪ್ಪಿಸಿದರು. ಭಾರತ ಈ ಪಂದ್ಯವನ್ನು ಕೇವಲ 4 ರನ್‌ನಿಂದ ಸೋತಿತ್ತಲ್ಲದೆ ಟಿ20 ಸರಣಿಯನ್ನು 2-1ರಿಂದ ಕಳೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications