ಗಂಗೂಲಿ ಏಕೆ ಧೋನಿಯನ್ನು ಟಾರ್ಗೆಟ್ ಮಾಡ್ತಿದ್ದಾರೆ?
ಕೋಲ್ಕತ್ತಾ, ಮೇ 11: ಟೀಂ ಇಂಡಿಯಾದ ಮುಂದಿನ ಕೋಚ್ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸಲಿರುವ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇದ್ದಕ್ಕಿದ್ದಂತೆ ತಂಡ ನಾಯಕನ ಬಗ್ಗೆ ಮಾತನಾಡಿದ್ದಾರೆ. ಮುಂದಿನ ವಿಶ್ವಕಪ್ ಗೆ ಧೋನಿಯನ್ನು ನಾಯಕನನ್ನಾಗಿ ನೋಡಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
2019ರ ಏಕದಿನ ವಿಶ್ವಕಪ್ವರೆಗೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಧೋನಿ ಬಳಿಯಿದೆಯೇ? ಎಂಬ ಪ್ರಶ್ನೆ ಕೇಳಿಕೊಳ್ಳಬೇಕಿದೆ. ಭಾರತ ಕ್ರಿಕೆಟ್ನ ಭವಿಷ್ಯದ ದೃಷ್ಟಿಯಿಂದ ಚಿಂತಿಸಿ ಆಯ್ಕೆ ಮಾಡಬೇಕಿದೆ. [ಕೊಹ್ಲಿ ನಾಯಕನಾಗಲು ಇದು ಸಕಾಲವಲ್ಲ: ಗವಾಸ್ಕರ್]
ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕಿದೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.[ನೆಹ್ರಾ-ಟೀಂ ಇಂಡಿಯಾದ ಬೌಲಿಂಗ್ ಕೋಚ್?]

ಭಾರತ ಕ್ರಿಕೆಟ್ಗೆ ಧೋನಿ ನೀಡಿರುವ ಕೊಡುಗೆ ಅಪಾರ. ಆದರೆ, ಇದೀಗ ಭವಿಷ್ಯದ ತಂಡ ನಿರ್ಮಿಸಬೇಕಾಗಿದೆ. ಧೋನಿ ಸ್ಥಾನವನ್ನು ತುಂಬಬಲ್ಲ ಮತ್ತೊಬ್ಬ ಆಟಗಾರರಿಗೆ ಅವಕಾಶ ನೀಡಬೇಕು. [ಟೀಂ ಇಂಡಿಯಾದಿಂದ ಜಿಂಬಾಬ್ವೆ ಪ್ರವಾಸ]
ಸದ್ಯದ ಪರಿಸ್ಥಿತಿಯಲ್ಲಿ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದು, ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ.
Story first published: Wednesday, January 3, 2018, 10:03 [IST]
Other articles published on Jan 3, 2018
Read in English: 'Dhoni must continue playing for India'
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications