IPL 2025 MS Dhoni: ಕ್ಯಾಪ್ಟನ್ ಕೂಲ್‌ಗೆ ಕೊನೆಯ ಐಪಿಎಲ್; ಬಿಸಿಸಿಐ ಹೇಳಿದ್ದೇನು?
ಇಂಡಿಯನ್ ಪ್ರೀಮಿಯರ್ ಲೀಗ್ 2025ರ (ಐಪಿಎಲ್) ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಬಾರಿ 13 ಮೈದಾನಗಳಲ್ಲಿ ರೋಚಕ ಪಂದ್ಯಗಳು ನಡೆಯಲಿದೆ. ಇದರಲ್ಲಿ ಗುವಾಹಟಿ, ವಿಶಾಖಪಟ್ಟಣಂ ಮತ್ತು ಧರ್ಮಶಾಲಾ ಕೂಡ ಸೇರಿವೆ. ಉಳಿದ 10 ಮೈದಾನಗಳು ಸಾಂಪ್ರದಾಯಿಕ ಮೈದಾನಗಳಾಗಿವೆ. ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾದ ನಂತರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಒಂದು ಪೋಸ್ಟ್ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.
ಕಳೆದ ಕೆಲವು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾಜಿ ನಾಯಕ ಎಂಎಸ್ ಧೋನಿಯ ಕೊನೆಯ ಐಪಿಎಲ್ ಆವೃತ್ತಿ ಬಗ್ಗೆ ಊಹಾಪೋಹಗಳು ನಡೆಯುತ್ತಿವೆ. ಇಷ್ಟೆಲ್ಲಾ ಇದ್ದರೂ, ಅವರು 43ನೇ ವಯಸ್ಸಿನಲ್ಲಿ ಮತ್ತೆ ಐಪಿಎಲ್ 2025 ಅನ್ನು ಆಡಲು ಸಿದ್ಧರಾಗಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಬಿಸಿಸಿಐನ ಪೋಸ್ಟ್ ಧೋನಿ ನಿವೃತ್ತಿ ಬಗ್ಗೆ ಸುಳಿವು ಕೊಟ್ಟಿತ್ತಾ? ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಚಿಂತೆಗೀಡುಮಾಡಿದೆ.

ಬಿಸಿಸಿಐ ಹೇಳಿದ್ದೇನು?
'ಥಲಾ ಚೆಪಾಕ್‌ಗೆ ಮರಳಿದ್ದಾರೆ. ಎಂಎಸ್ ಧೋನಿಯ ಐಪಿಎಲ್ ಸೀಸನ್ ಮಾರ್ಚ್ 23 ರಂದು ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಐಪಿಎಲ್ 2025 ರಲ್ಲಿ ಮರೆಯಲಾಗದ ಅಧ್ಯಾಯ ಆರಂಭವಾಗಲಿದೆ, ನೀವು ಸಿದ್ಧರಿದ್ದೀರಾ?' ಎಂದು ಬಿಸಿಸಿಐ ಟ್ವೀಟ್ ಮಾಡಿದೆ. ಈ ಟ್ವೀಟ್ ನಂತರ ಎಂಎಸ್ ಧೋನಿ ಅಭಿಮಾನಿಗಳಿಗೆ ಹಲವು ಪ್ರಶ್ನೆಗಳು ಎದುರಾಗಿವೆ.
ಧೋನಿ 2020 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು ಕೊನೆಯ ಬಾರಿಗೆ ಭಾರತ ಪರ 2019 ರಲ್ಲಿ ಆಡಿದರು. ಇದಾದ ನಂತರವೂ ಅವರು ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರೆಸಿದರು. ಒಮ್ಮೆ ಸಿಎಸ್‌ಕೆ ತಂಡವನ್ನು ಚಾಂಪಿಯನ್ ಮಾಡಿದರು. ಆದರೂ ಕಳೆದ ಕೆಲವು ವರ್ಷಗಳಿಂದ ಧೋನಿಯ ನಿವೃತ್ತಿ ಬಗ್ಗೆ ಹಲವು ಆವೃತ್ತಿಗಳಿಂದ ಚರ್ಚೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಬಿಸಿಸಿಐ ಪೋಸ್ಟ್ ಧೋನಿ ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿದೆ.
ಈ ಬಾರಿ ಧೋನಿಯನ್ನು ಸಿಎಸ್‌ಕೆ ಫ್ರಾಂಚೈಸಿ 4 ಕೋಟಿ ರೂ.ಗೆ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಉಳಿಸಿಕೊಂಡಿದೆ. ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ನಿಯಮಗಳನ್ನು ಬದಲಾಯಿಸಿತ್ತು. ಇದರ ಪ್ರಕಾರ, 5 ವರ್ಷಗಳ ಕಾಲ ಭಾರತ ಪರ ಅಂತಾರಾಷ್ಟ್ರೀಯ ಪಂದ್ಯವನ್ನು ಆಡದ ಆಟಗಾರನನ್ನು ಅನ್‌ಕ್ಯಾಪ್ಡ್ ಎಂದು ಪರಿಗಣಿಸಲಾಗುತ್ತದೆ. ಇದರ ಲಾಭ ಪಡೆದ ಸಿಎಸ್‌ಕೆ ಧೋನಿಯನ್ನು ಕಡಿಮೆ ಮೊತ್ತಕ್ಕೆ ಉಳಿಸಿಕೊಂಡಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮಾರ್ಚ್ 23 ರ ಸಂಜೆ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ದಿನದಂದು ಐಪಿಎಲ್ 2025ರ ಮೊದಲ ಡಬಲ್ ಹೆಡರ್ ನಡೆಯಲಿದೆ. ಚೆನ್ನೈ ಮತ್ತು ಮುಂಬೈ ಪಂದ್ಯಕ್ಕೂ ಮುನ್ನ ಸನ್‌ರೈಸರ್ಸ್ ಮತ್ತು ರಾಜಸ್ಥಾನ ನಡುವೆ ಪಂದ್ಯ ನಡೆಯಲಿದೆ. ಸಿಎಸ್‌ಕೆ ತಂಡವು ಗ್ರೂಪ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳನ್ನು ಎರಡು ಬಾರಿ ಎದುರಿಸಲಿದೆ. ಎಂಐ ವಿರುದ್ಧದ ಎರಡನೇ ಪಂದ್ಯ ಏಪ್ರಿಲ್ 20 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸಿಎಸ್‌ಕೆ ತಂಡವು ಆರ್‌ಸಿಬಿಯನ್ನು ಎರಡು ಬಾರಿ ಎದುರಿಸಲಿದೆ. ವಿರಾಟ್ ಕೊಹ್ಲಿ ಮತ್ತು ಧೋನಿಯ ಮೊದಲ ಮುಖಾಮುಖಿ ಮಾರ್ಚ್ 28 ರಂದು ಚೆಪಾಕ್‌ನಲ್ಲಿ ನಡೆಯಲಿದೆ. ಇದಾದ ನಂತರ, ಸಿಎಸ್‌ಕೆ ತಂಡವು ಮೇ 3 ರಂದು ಆರ್‌ಸಿಬಿಯ ತವರಿ ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿಯಲ್ಲಿ ಆಡಲಿದೆ. ಏಪ್ರಿಲ್ 5 ರಂದು ಸಿಎಸ್‌ಕೆ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವನ್ನು ಒಮ್ಮೆ ಮಾತ್ರ ಎದುರಿಸಲಿರುವುದರಿಂದ ಡಿಸಿ ಅಭಿಮಾನಿಗಳಿಗೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಎಂಎಸ್ ಧೋನಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ಈ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications