ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇರುವ ತಂಡಕ್ಕೆ ಎಂಎಸ್ ಧೋನಿ ನಾಯಕ!

ಬೆಂಗಳೂರು, ಜನವರಿ 30: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 29ರಂದು ಆರಂಭಗೊಂಡು ಮೇ 24ಕ್ಕೆ ಕೊನೆಗೊಳ್ಳುವ ಈ ಅದ್ದೂರಿ ಕ್ರಿಕೆಟ್ ಟೂರ್ನಿ ಭಾರತವಷ್ಟೇ ಅಲ್ಲದೆ ವಿಶ್ವದಗಲದ ಕ್ರಿಕೆಟ್ ಪ್ರಿಯರನ್ನು ರಂಜಿಸಲಿದೆ.
ಇತ್ತೀಚೆಗೆ ಸಭೆ ನಡೆಸಿ ಐಪಿಎಲ್ 2020 ಆರಂಭ ಮತ್ತು ಅಂತ್ಯದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿರುವ ಐಪಿಎಲ್ ಗವರ್ನಿಂದ ಸಮಿತಿ, 13ನೇ ಐಪಿಎಲ್ ಆವೃತ್ತಿ ಆರಂಭಕ್ಕೂ ಮುನ್ನ ಆಲ್ ಸ್ಟಾರ್ಸ್ ಗೇಮ್ ಪಂದ್ಯಗಳು ನಡೆಯಲಿವೆ ಎಂಬ ವಿಚಾರವನ್ನೂ ತಿಳಿಸಿತ್ತು.
ಐಪಿಎಲ್ ಆರಂಭಕ್ಕೂ ಮುನ್ನ ಆಲ್ ಸ್ಟಾರ್ಸ್ ಗೇಮ್ ಪಂದ್ಯಗಳು ಆರಂಭವಾಗಲಿವೆಂದಾದರೆ ಈ ಆಲ್ ಸ್ಟಾರ್ಸ್ ಗೇಮ್ ಎಂದರೇನು? ಅವುಗಳ ಬಗ್ಗೆ ಇಲ್ಲೊಂದಿಷ್ಟು ವಿವರಣೆಯಿದೆ.

ಐಪಿಎಲ್ ಆರಂಭಕ್ಕೂ ಮುನ್ನ ಆರಂಭ
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಮೂರು ದಿನ ಮುಂಚಿತವಾಗಿ ಆಲ್ ಸ್ಟಾರ್ಸ್ ಗೇಮ್ ಪಂದ್ಯಗಳು ನಡೆಯಲಿವೆ. ಆಲ್ ಸ್ಟಾರ್ಸ್ ಗೇಮ್ ಎಂದರೆ ಇದು ಬೇರೆ ಬೇರೆ ತಂಡಗಳ ಪ್ರಮುಖ ಆಟಗಾರರು ಒಂದೇ ತಂಡದಲ್ಲಿ ಕಾಣಿಸಿಕೊಳ್ಳುವ ಪರಿಕಲ್ಪನೆಯ ಪಂದ್ಯ.

ಪರಿಕಲ್ಪನೆ ಹುಟ್ಟಿದ್ದು ಎಲ್ಲಿಂದ
ಐಪಿಎಲ್‌ನಲ್ಲಿ ಈ ಬಾರಿ ನಡೆಸಲುದ್ದೇಶಿಸಿರುವ ಈ ಆಲ್ ಸ್ಟಾರ್ಸ್ ಗೇಮ್ ಪರಿಕಲ್ಪನೆ ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ (ಎನ್‌ಬಿಎ) ಪಂದ್ಯದಿಂದ ಬಂದಿದ್ದು. ಇನ್ನೂ ಬಿಡಿಸಿ ಹೇಳೋದಾದ್ರೆ ಕ್ರಿಕೆಟ್‌ನಲ್ಲೇ ವರ್ಲ್ಡ್ XI vs ಏಷ್ಯಾ XI ಪಂದ್ಯ ನಡೆಯುತ್ತಲ್ವಾ? ಅಂಥ ಪಂದ್ಯವಿದು.

ತಂಡಗಳು, ಆಟಗಾರರು
ತಂಡಗಳು ಹೀಗೇ ಇರಲಿದೆ ಎಂದು ಈಗಲೇ ಹೇಳುವಂತಿಲ್ಲ. ಆದರೆ ಬಹುತೇಕ ಇದೇ ಚಿತ್ರಣದಲ್ಲಿ ತಂಡಗಳು ಇರಲಿವೆ. ಸೌತ್-ವೆಸ್ಟ್ ತಂಡದಲ್ಲಿ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಎಬಿ ಡಿವಿಲಿಯರ್ಸ್, ಕೇನ್ ವಿಲಿಯಮ್ಸನ್, ರಶೀದ್ ಖಾನ್ ಇಂಥವರು ಇದ್ದರೆ, ನಾರ್ತ್-ಈಸ್ಟ್ ತಂಡದಲ್ಲಿ ಆ್ಯಂಡ್ರೆ ರಸೆಲ್, ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್, ಜೋಫ್ರಾ ಆರ್ಚರ್, ಆರ್ ಅಶ್ವಿನ್, ಕೆಎಲ್ ರಾಹುಲ್, ಶ್ರೇಯಸ್ ಐಯ್ಯರ್, ರಿಷಬ್ ಪಂತ್ ಇತ್ಯಾದಿ ಆಟಗಾರರು ಇರುವುದನ್ನು ನಿರೀಕ್ಷಿಸಲಾಗಿದೆ.

ಎಂಎಸ್ ದೋನಿ ನಾಯಕ
ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಟ್ರೋಫಿಗೆದ್ದ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾದ ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಇಬ್ಬರೂ ಸೌತ್-ವೆಸ್ಟ್ ತಂಡದಲ್ಲಿರಲಿದ್ದಾರೆ. ಟೀಮ್ ಇಂಡಿಯಾದ ಈಗಿನ ನಾಯಕ ವಿರಾಟ್ ಕೊಹ್ಲಿ ಕೂಡ ಅದೇ ತಂಡದಲ್ಲಿದ್ದು, ಕೂಲ್ ಕ್ಯಾಪ್ಟನ್ ಧೋನಿ ಸೌತ್-ವೆಸ್ಟ್ ತಂಡ ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications