For Quick Alerts
ALLOW NOTIFICATIONS  
For Daily Alerts
 

ಧೋನಿ ಸಿಎಸ್‌ಕೆ ನಾಯಕತ್ವ ಡು ಪ್ಲೆಸಿಸ್‌ಗೆ ನೀಡಬಹುದು: ಬಂಗಾರ್

MS Dhoni may give CSK captaincy to Faf du Plessis in IPL 2021: Sanjay Bangar

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಆವೃತ್ತಿಯಲ್ಲಿ ಎಂಎಸ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಫಾಫ್ ಡು ಪ್ಲೆಸಿಸ್‌ಗೆ ನೀಡಬಹುದು ಎಂದು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.

2020ರ ಸೀಸನ್‌ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಕೆಟ್ಟ ಪ್ರದರ್ಶನ ನೀಡಿತ್ತು. ಆಡಿದ 14 ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ 6 ಪಂದ್ಯಗಳನ್ನು ಮಾತ್ರ. ಐಪಿಎಲ್ ಇತಿಹಾಸದಲ್ಲೇ ಸಿಎಸ್‌ಕೆ ಪ್ಲೇ ಆಫ್‌ಗೆ ಪ್ರವೇಶಿಸದೆ ಹೊರ ಬಿದ್ದಿದ್ದು ಈ ಬಾರಿಯೇ.

ಇತ್ತೀಚೆಗೆ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದ ಧೋನಿ ಐಪಿಎಲ್ ವೇಳೆ ಫಾರ್ಮ್‌ನಲ್ಲೂ ಇರಲಿಲ್ಲ. ಹೀಗಾಗಿ ಮುಂದಿನ ಐಪಿಎಲ್‌ ವೇಳೆ ಧೋನಿ ಅವರು ತಾನಾಗಿಯೇ ನಾಯಕತ್ವವನ್ನು ಡು ಪ್ಲೆಸಿಸ್‌ಗೆ ಬಿಟ್ಟುಕೊಡಬಹುದು ಎಂದು ಬಂಗಾರ್ ಅಭಿಪ್ರಾಯಿಸಿದ್ದಾರೆ.

'ಭಾರತದ ನಾಯಕತ್ವದ ವಿಚಾರದಲ್ಲೂ ಕಷ್ಟ ಅನ್ನಿಸಿದಾಗ ಎಂಎಸ್ ಧೋನಿ, ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿದ್ದರು. ಹೀಗಾಗಿ ಮುಂದಿನ ವರ್ಷ ಧೋನಿ ನಾಯಕರಾಗಿ ಆಡದೆ ಸಾಮಾನ್ಯ ಆಟಗಾರನಾಗಿ ಆಡಲಿದ್ದಾರೆ. ನಾಯಕತ್ವವನ್ನು ಡು ಪ್ಲೆಸಿಸ್‌ಗೆ ಬಿಡುಕೊಡಲಿದ್ದಾರೆ ಅನ್ನಿಸುತ್ತದೆ,' ಎಂದು ಸ್ಟಾರ್‌ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಬಂಗಾರ್ ಹೇಳಿದ್ದಾರೆ.

Story first published: Saturday, November 14, 2020, 13:19 [IST]
Other articles published on Nov 14, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+