ದಶಕದ ಟೆಸ್ಟ್ & ಏಕದಿನ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ
ಕ್ರಿಕೆಟ್ ಆಸ್ಟ್ರೇಲಿಯಾ ಈ ದಶಕದ ಟೆಸ್ಟ್ XI ತಂಡವನ್ನು ಹಾಗೂ ದಶಕದ ಟಿ20 XI ತಂಡವನ್ನು ಪ್ರಕಟಿಸಿದೆ. ಅಚ್ಚರಿಯೇನೆಂದರೆ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಿಬ್ಬರೂ ಭಾರತೀಯರಾಗಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಿದ್ರೆ, ಏಕದಿನ ತಂಡದ ನಾಯಕನಾಗಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಆಯ್ಕೆ ಮಾಡಿದೆ.
ದಶಕದಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಈ ತಂಡವನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಒಟ್ಟಾರೆಯಾಗಿ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮಾತ್ರ ಎರಡೂ ತಂಡಗಳಲ್ಲೂ ಆಯ್ಕೆಯಾಗಿರುವ ಆಟಗಾರರಾಗಿದ್ದಾರೆ.
ಟೆಸ್ಟ್ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಹೊರತು ಪಡಿಸಿ ಬೇರೆ ಯಾವ ಟೀಮ್ ಇಂಡಿಯಾ ಆಟಗಾರರು ಸ್ಥಾನವನ್ನು ಪಡೆದಿಲ್ಲ. ಅದರೆ ಏಕದಿನ ತಂಡದಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಧೋನಿ, ಕೊಹ್ಲಿ ಜೊತೆಗೆ ರೋಹಿತ್ ಶರ್ಮಾ ಏಕದಿನ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಧೋನಿ ನಾಯಕತ್ವದ ಏಕದಿನ ತಂಡ ;
ಏಕದಿನ ತಂಡವನ್ನು ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ತಂಡದ ನಾಯಕ ಧೋನಿ ಮುನ್ನಡೆಸಿದ್ದಾರೆ ಜೊತೆಗೆ ಕೀಪಿಂಗ್ ಜವಾಬ್ದಾರಿ ಕೂಡ ಪಾಲಿಗೇ ದೊರೆತಿದೆ. ಮತ್ತೊಂದು ವಿಚಿತ್ರ ಏನೆಂದರೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ಈ ಏಕದಿನ ತಂಡದಲ್ಲಿ ಆಸ್ಟ್ರೇಲಿಯಾ ವೇಗಿ ವಿಚೆಲ್ ಸ್ಟಾರ್ಕ್ ಹೊರತು ಪಡಿಸಿದರೆ ಬೇರೆ ಯಾವ ಆಟಗಾರ ಕೂಡ ಸ್ಥಾನವನ್ನು ಪಡೆದುಕೊಂಡಿಲ್ಲ.

ಕೋಹ್ಲಿ ನಾಯಕತ್ವದ ಟೆಸ್ಟ್ ತಂಡ;
ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿರುವ ಏಕದಿನ ತಂಡದಲ್ಲಿ ಬೇರೆ ಯಾವೊಬ್ಬ ಭಾರತೀಯ ಆಟಗಾರನೂ ಸ್ಥಾನವನ್ನು ಪಡೆದಿಲ್ಲ. ಈ ತಂಡದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ , ಸೌತ್ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡದ ಆಟಗಾರರು ಸ್ಥಾನವನ್ನು ಪಡೆದಿದ್ದಾರೆ. ಆದರೆ ಪಾಕಿಸ್ತಾನ , ಶ್ರೀಲಂಕಾ ,ಬಾಂಗ್ಲಾದೇಶ , ವೆಸ್ಟ್ ಇಂಡೀಸ್‌ನ ಯಾವೊಬ್ಬ ಆಟಗಾರನಿಗೂ ಕ್ರಿಕೆಟ್ ಆಸ್ಟ್ರೇಲಿಯಾ ಮಣೆ ಹಾಕಿಲ್ಲಾ.

ಟೆಸ್ಟ್ ತಂಡದಲ್ಲಿ ವಿವಿಧ ದೇಶಗಳ ನಾಲ್ವರು ನಾಯಕರು;
ಮತ್ತೊಂದು ವಿಶೇಷತೆಯೇನೆಂದರೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ಟೆಸ್ಟ್ ತಂಡದಲ್ಲಿ ವಿವಿಧ ದೇಶಗಳ ನಾಯಕತ್ವ ವಹಿಸಿಕೊಂಡ ನಾಲ್ವರು ಆಟಗಾರರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಆಲೆಸ್ಟರ್ ಕುಕ್, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್, ಆಸ್ಟ್ರೇಲಿಯಾ ನಾಯಕ ಸ್ವೀವ್ ಸ್ಮಿತ್ ಸ್ಥಾನವನ್ನು ಪಡೆದಿರುವ ಆಟಗಾರರು.

ಕ್ರಿಕೆಟ್ ಆಸ್ರೇಲಿಯಾ ಪ್ರಕಟಿಸಿದ ಏಕದಿನ ತಂಡ;
ಎಂ.ಎಸ್.ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ರೋಹಿತ್ ಶರ್ಮಾ, ಹಾಶಿಮ್ ಆಮ್ಲಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಶಕೀಬ್ ಅಲ್ ಹಸನ್, ಜೋಸ್ ಬಟ್ಲರ್, ರಶೀದ್ ಖಾನ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಲಸಿತ್ ಮಾಲಿಂಗ

ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ಟೆಸ್ಟ್ ತಂಡ
ವಿರಾಟ್ ಕೊಹ್ಲಿ (ನಾಯಕ), ಅಲೆಸ್ಟೇರ್ ಕುಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಡೇಲ್ ಸ್ಟೇನ್, ಸ್ಟುವರ್ಟ್ ಬ್ರಾಡ್, ನಾಥನ್ ಲಿಯಾನ್, ಜೇಮ್ಸ್ ಆಂಡರ್ಸನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications