ಮುಂಬೈ, ಡಿ. 5 : ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಹೆರ್ ಸ್ಟೈಲ್ ಸಂಪೂರ್ಣ ಬದಲಾಯಿಸಿಕೊಂಡ ಧೋನಿ ಮಾಧ್ಯಮಗಳ ಕಣ್ಣಿಗೆ ಬಿದ್ದರು.
ಗಾಯದ ಸಮಸ್ಯೆಯಿಂದ ಭಾರತದಲ್ಲೇ ಉಳಿದಿದ್ದ ಕ್ಯಾಪ್ಟನ್ ಕೂಲ್ ಸಹ ಆಟಗಾರರನ್ನು ಸೇರಿಕೊಳ್ಳಲು ಆಸ್ಟ್ರೇಲಿಯಾಕ್ಕೆ ಶುಕ್ರವಾರ ಪ್ರಯಾಣ ಬೆಳೆಸಿದರು. ಡಿಸೆಂಬರ್ 9 ರಿಂದ ಅಡಿಲೇಡ್ ನಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯದ ನೇತೃತ್ವ ವಹಿಸಿಕೊಳ್ಳಲು ಧೊನಿ ತೆರಳಿದರು.[ಮಹೇಂದ್ರ ಸಿಂಗ್ ಧೋನಿ ತಂದೆಯಾಗಲಿದ್ದಾರೆ]

ಮಹೇಂದ್ರ ಸಿಂಗ್ ಯಮ್ಮ ಹೆರ್ ಸ್ಟೈಲ್ ಬದಲಾಯಿಸುತ್ತಿರುವುದು ಇದು ಮೊದಲೇನಲ್ಲ. ಹಿಂದಿನ ಬಾರಿಯ ಐಪಿಎಲ್ ವೇಳೆ ಧೋನಿ 'ಮೊಹಾವ್ಕ್' ಹೆರ್ ಸ್ಟೈಲ್ ಕಾಣಸಿಕೊಂಡು ರೋಮನ್ನರಂತೆ ಮಿಂಚಿದ್ದರು. ಈ ಬಾರಿ ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ.
ಮೊದಲಿಗೆ ತಮ್ಮ ವಿಶಿಷ್ಟ ಕೂದಲಿನ ವಿನ್ಯಾಸದಿಂದಲೇ ಅಭಿಮಾನಿಗಳಿಗೆ ಇಷ್ಟವಾಗಿದ್ದ ಧೋನಿ 2008ರ ಪಾಕಿಸ್ತಾನ ಪ್ರವಾಸದಲ್ಲಿ ಪರ್ವೆಜ್ ಮುಷರಫ್ ಮೆಚ್ಚುಗೆಯನ್ನು ಪಡೆದಿದ್ದರು.[ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್ ಡಿ. 9 ರಿಂದ]
2015ರ ವಿಶ್ವಕಪ್ ಆರಂಭದ ವೇಳೆಗೂ ಧೋನಿ ಇದೇ ವಿನ್ಯಾಸ ಇಟ್ಟುಕೊಳ್ಳುತ್ತಾರೋ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ಏನೇ ಮಾಡಿದರೂ ಸುದ್ದಿಯಾಗುತ್ತಿರುತ್ತದೆ.