For Quick Alerts
ALLOW NOTIFICATIONS  
For Daily Alerts
 

ಓವರ್‌ಗೆ 20 ರನ್ ಬೇಕು, ಎಂಎಸ್‌ಡಿ-ಎಬಿಡಿಯಲ್ಲಿ ನಿಮ್ಮ ಬೆಂಬಲ ಯಾರಿಗೆ?: ಡು ಪ್ಲೆಸಿಸ್ ಕೊಟ್ಟ ಉತ್ತರವಿದು!

MS Dhoni or AB de Villiers – Whom Will You support to Get 20 Runs Off Last Over? Faf du Plessis Answers

ನವದೆಹಲಿ: ಹಳೆಯ ಎಂಎಸ್ ಧೋನಿಯಾಗಿದ್ದರೆ, ಕೊನೇ ಓವರ್‌ಗೆ 20 ರನ್ ಬೇಕಿದ್ದಾಗ ಎಂಎಸ್ ಧೋನಿ ಮತ್ತು ಎಬಿ ಡಿ ವಿಲಿಯರ್ಸ್ ಇವರಲ್ಲಿ ಯಾರನ್ನು ಬೆಂಬಲಿಸುತ್ತೀರಿ ಎಂಬ ಪ್ರಶ್ನೆ ನಿಮ್ಮಲ್ಲಿ ಕೇಳಿದ ಕೂಡಲೇ ನೀವು ಥಟ್ಟನೆ ಧೋನಿ ಎಂದುಬಿಡುತ್ತಿದ್ದಿರಿ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಧೋನಿ ಈಗ ಅಂಥ ಫಾರ್ಮ್‌ನಲ್ಲಿ ಇಲ್ಲ.

ಆದರೆ ಇದೇ ಪ್ರಶ್ನೆಯನ್ನು ದಕ್ಷಿಣ ಆಫ್ರಿಕಾದ ಮಾಜಿ ನಾಯಕ, ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಫಾಫ್ ಡು ಪ್ಲೆಸಿಸ್ ಅವರಲ್ಲಿ ಕೇಳಲಾಯ್ತು. ಕೊನೇ ಓವರ್‌ಗೆ 20 ರನ್ ಬೇಕಿದ್ದಾಗ ಎಂಎಸ್‌ಡಿ ಮತ್ತು ಎಬಿಡಿ ಇವರಲ್ಲಿ ನೀವು ಯಾರನ್ನು ಬೆಂಬಲಿಸುತ್ತೀರಿ ಎಂದಾಗ ಡು ಪ್ಲೆಸಿಸ್ ಕೊಟ್ಟ ಉತ್ತರವೇನು ಗೊತ್ತ? ಎಂಎಸ್ ಧೋನಿ!

ದಿಲ್‌ ಯಾ ದಿಮಾಗ್ ಹೆಸರಿನಲ್ಲಿ ಹೆಸರಿನಲ್ಲಿ ಒಂದು ಲೈವ್ ಕಾರ್ಯಕ್ರಮ ನಡೆಯುತ್ತಿದ್ದಾಗ ಭಾರತದ ಆಟಗಾರ್ತಿ ಜೆಮಿಮಾ ರೋಡ್ರಿಗಸ್, ಡು ಪ್ಲೆಸಿಸ್ ಅವರಲ್ಲಿ ಈ ಪ್ರಶ್ನೆ ಕೇಳಿದರು. ಆಗ ಡು ಪ್ಲೆಸಿಸ್ ಎಂಎಸ್ ಧೋನಿ ಎಂದು ಉತ್ತರಿಸಿದ್ದಾರೆ. ಐಪಿಎಲ್‌ನಲ್ಲಿ ಡು ಪ್ಲೆಸಿಸ್ ಆಡುವ ಸಿಎಸ್‌ಕೆ ತಂಡಕ್ಕೆ ಧೋನಿ ನಾಯಕರಾಗಿದ್ದಾರೆ.

ಈ ಐಪಿಎಲ್ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಫೈನಲ್‌ಗೆ ಪ್ರವೇಶಿಸಿವೆ. ಸಿಎಸ್‌ಕೆ ಫೈನಲ್‌ಗೆ ಪ್ರವೇಶಿಸುವುದಕ್ಕೂ ಮುನ್ನ ಕ್ವಾಲಿಫೈಯರ್ 1ರಲ್ಲಿ ಡೆಲ್ಲಿ ವಿರುದ್ಧ ಧೋನಿ ಸಿಕ್ಸ್ ಬಾರಿಸಿ ಪಂದ್ಯ ಗೆಲ್ಲಿಸಿದ್ದರು. ಇತ್ತ ಕೆಕೆಆರ್ 2014ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ. ಅಕ್ಟೋಬರ್ 15ಕ್ಕೆ ಐಪಿಎಲ್ ಫೈನಲ್‌ ಪಂದ್ಯ ನಡೆಯಲಿದೆ.

Story first published: Thursday, October 14, 2021, 21:23 [IST]
Other articles published on Oct 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+