Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೇನಾ ಸೇವೆ ಮುಗಿಸಿ ಕುಟುಂಬ ಸೇರಿದ ಮಾಜಿ ನಾಯಕ ಎಂಎಸ್ ಧೋನಿ

ಕರ್ತವ್ಯ ಮುಗಿಸಿ ಧೋನಿ ದೆಹಲಿಗೆ ಹೋಗಿದ್ದೇಕೆ..! | MS Dhoni | Oneindia Kannada
MS Dhoni returns from army duty, reunites with daughter Ziva

ನವದೆಹಲಿ, ಆಗಸ್ಟ್ 19: ಭಾರತೀಯ ಸೇನೆಯಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿರುವ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮರಳಿ ತನ್ನ ಕುಟುಂಬ ಸೇರಿಕೊಂಡಿದ್ದಾರೆ. 2019ರ ಐಸಿಸಿ ವಿಶ್ವಕಪ್ ಬಳಿಕ ಧೋನಿ, ಕ್ರಿಕೆಟ್‌ನಿಂದ ಕೊಂಚ ಬಿಡುವು ಪಡೆದು ಆರ್ಮಿ ಸೇವೆಯಲ್ಲಿ ತೊಡಗಿಕೊಂಡಿದ್ದರು.

ಭಾರತೀಯ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ, ವಿಶ್ವಕಪ್ ಬಳಿಕ ಭಾರತದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಿಂದ ಸ್ವತಃ ಹೊರಗುಳಿದು ಜಮ್ಮುವಿನಲ್ಲಿ 106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್ (ಪ್ಯಾರಾ) ಸೇರಿಕೊಂಡು ಜುಲೈ 31ರಿಂದ ಆಗಸ್ಟ್ 15ರ ವರೆಗೆ ಸೇವೆ ಸಲ್ಲಿಸಿದ್ದರು.

ಕಾಶ್ಮೀರ ಕಣಿವೆಯಲ್ಲಿ ವಿಕ್ಟರ್ ಫೋರ್ಸ್‌ನ ಭಾಗವಾಗಿ ಗಸ್ತು ತಿರುಗುವ, ಕಾವಲು ಕಾಯುವ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಎಂಎಸ್‌ಡಿ, 73ರ ಸ್ವಾತಂತ್ರ್ಯೂತ್ಸವ ದಿನ ಸಂಜೆ ಲಡಾಖ್‌ನಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದರು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿತ್ತು.

ಆರ್ಮಿ ಸೇವೆ ಮುಗಿಸಿ ವಾಪಸ್ಸಾಗಿರುವ ಧೋನಿ, ದೆಹಲಿಯಲ್ಲಿ ಪುತ್ರಿ ಜೊತೆಗಿರುವ ಫೋಟೋವನ್ನು 'ಎಂಎಸ್ ಧೋನಿ ಫ್ಯಾನ್ಸ್' ಟ್ವಿಟರ್ ಖಾತೆ ಹಾಕಿಕೊಂಡಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಧೋನಿ, ಲಡಾಖ್‌ನಲ್ಲಿ ಕ್ರಿಕೆಟ್ ಆಡುತ್ತಿರುವ ಫೋಟೋ ಶೇರ್ ಮಾಡಿತ್ತು.

Story first published: Monday, August 19, 2019, 17:31 [IST]
Other articles published on Aug 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+