MS Dhoni About Virat: "ವಿರಾಟ್ ಗೆಳತನ" ಇಲ್ಲಿದೆ ಮಾಹಿ ಮನದಾಳ...
ಸದ್ಯ ಭಾರತದಲ್ಲಿ ಐಪಿಎಲ್ ಹವಾ ಜೋರಾಗಿದೆ. ಈ ವೇಳೆ ಸೂಪರ್ ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಿ ಅಭಿಮಾನಿಗಳಿಗೆ ಮುದ ನೀಡಿದ್ದಾರೆ. ಶುಕ್ರವಾರ ಅಖಾಡದಲ್ಲಿ ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಹಾಗೂ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅಖಾಡ ಪ್ರವೇಶಿಸಲಿದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳು ಈ ಇಬ್ಬರು ಸೂಪರ್ ಸ್ಟಾರ್‌ಗಳ ಮೇಲೆ ನೆಟ್ಟಿರಲಿದೆ.
ಶುಕ್ರವಾರ ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಇರಾದೆಯನ್ನು ಎರಡೂ ತಂಡಗಳು ಹೊಂದಿವೆ. ಈ ಪಂದ್ಯಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ತಮ್ಮ ಹಾಗೂ ವಿರಾಟ್ ಕೊಹ್ಲಿ ನಡುವಿನ ಸಂಬಂದದ ಬಗ್ಗೆ ಮಾತನಾಡಿದ್ದಾರೆ.

ಜಿಯೋ ಹಾಟ್ ಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಮಾಹಿ ವಿರಾಟ್ ಅವರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಧೋನಿ 11 ವರ್ಷಗಳ ಕಾಲ ಒಟ್ಟಿಗೆ ಆಡಿದ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದೇ ವೇಳೆ ಇವರ ಸಂಬಂಧ ಗಟ್ಟಿಯಾಗಿತ್ತು. ಕ್ರಿಕೆಟ್‌ನಿಂದ ಧೋನಿ ದೂರ ಸರೆದ್ರೂ ಸಹ ವಿರಾಟ್ ಹಾಗೂ ಧೋನಿ ನಡುವಿನ ಸಂಬಂಧ ಹಾಗೇಯೆ ಇದೆ.
ವಿರಾಟ್ ಬಗ್ಗೆ ಮಾಹಿ ಹೇಳಿದ್ದೇನು?
"ವಿರಾಟ್ ಆರಂಭದಿಂದಲೂ ತಂಡಕ್ಕಾಗಿ ಕೊಡುಗೆ ನೀಡಲು ಬಯಸುವ ಆಟಗಾರ. ವಿರಾಟ್ ಎಂದಿಗೂ 40 ರಿಂದ 60 ರನ್‌ಗಳಿಗೆ ತೃಪ್ತಿ ಪಡುತ್ತಿರಲಿಲ್ಲ. ಶತಕ ಬಾರಿಸಿ ಕೊನೆಯವರೆಗೂ ಅಜೇಯರಾಗಿ ಉಳಿಯುವುದು ಅವರ ಕನಸಾಗಿತ್ತು. ವಿರಾಟ್‌ಗೆ ಆರಂಭದಿಂದಲೂ ರನ್ ಬಾರಿಸುವ ಹಸಿವು ಇತ್ತು. ದಿನ ಕಳೆದಂತೆ ಇವರು ತಮ್ಮ ಬ್ಯಾಟಿಂಗ್ ಶಕ್ತಿಯನ್ನು ಸುಧಾರಿಸಿಕೊಂಡು ಬೆಳೆದ ರೀತಿ ಅಮೋಘ. ಇವರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಿದ್ರು. ಮೈದಾನದಲ್ಲಿದ್ದಾಗ ತಮ್ಮ ಕೈಲಾದ ಕೊಡುಗೆ ನೀಡುವುದೇ ಅವರ ಗುರಿಯಾಗಿತ್ತು" ಎಂದು ಮಾಹಿ ಹೇಳಿದ್ದಾರೆ.

ನಾವಿಬ್ಬರು ತುಂಬ ದಿನಗಳ ಕಾಲ ಒಂದೇ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಳೆದಿದ್ದೇವೆ. ಹಲವು ಬಾರಿ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದೇವೆ. ನಮ್ಮಿಬ್ಬರ ನಡುವೆ ನಾಯಕ ಹಾಗೂ ಯುವ ಆಟಗಾರರ ನಡುವೆ ಹೇಗೆ ಸಂಬಂಧ ಇರಬೇಕಿತ್ತೋ ಹಾಗೆ ಇತ್ತು. ಆದರೆ ಕಾಲ ಕಳೆದಂತೆ ಇದು ಬದಲಾಯಿತು. ಆದರೆ ವಿರಾಟ್‌ಗೆ ನನ್ನ ಹಾಗೂ ಆತನ ನಡುವೆ ಇನ್ನು ಒಂದು ಗೆರೆ ಇದೆ ಎಂದು ಭಾವಿಸಿದ್ದಾನೆ. ಈಗ ನಮ್ಮಿಬ್ಬರ ನಡುವೆ ಸಾಕಷ್ಟು ಸಮಯವಿದೆ ಎಂದು ಮಹೇಂದ್ರ ಸಿಂಗ್ ಧೋನಿ ತಿಳಿಸಿದ್ದಾರೆ.
ನಾಯಕತ್ವವದಿಂದ ಹಿಂದೆ ಸರಿದಾಗ ವಿರಾಟ್ ಕೊಹ್ಲಿಗೆ ಮಹೇಂದ್ರ ಸಿಂಗ್ ಧೋನಿ ಸಂಪರ್ಕಿಸಿದ್ದನ್ನು ಅವರು ಪದೆ ಪದೇ ನೆನೆಯುತ್ತಾರೆ. ಮಾಹಿ ನೀಡಿದ ಸಂದೇಶ ಎಂದಿಗೂ ಸ್ಮರಣೀಯ ಎಂದು ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications