Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೈಕ್ ರೈಡ್ ಮಾಡ್ತ ಅಭಿಮಾನಿಗಳತ್ತ ಕೈ ಬೀಸಿದ ಎಂಎಸ್ ಧೋನಿ, ವೀಡಿಯೊ

MS Dhoni rides a bike at his residence, waves back at fans

ರಾಂಚಿ, ಜುಲೈ 9: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂಎಸ್ ಧೋನಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಟೀಮ್ ಇಂಡಿಯಾ ಮೂರು ವಿಶ್ವ ಪ್ರಶಸ್ತಿಗಳನ್ನು ಗೆದ್ದಾಗ ತಂಡದ ನಾಯಕತ್ವ ವಹಿಸಿದ್ದ ಧೋನಿ ಅಭಿಮಾನಿಗಳನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಇದೇ ಕಾರಣಕ್ಕೆ ಧೋನಿಗೆ ಅಪಾರ ಅಭಿಮಾನಿಗಳಿದ್ದಾರೆ.

ಜುಲೈ 7ರಂದು ತನ್ನ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಧೋನಿ, ಕ್ರಿಕೆಟ್ ಪಂದ್ಯವನ್ನಾಡದೆ ಇವತ್ತಿಗೆ (ಜುಲೈ 9) ಸರಿಯಾಗಿ ಒಂದು ವರ್ಷ ತುಂಬುತ್ತಿದೆ. ಕಳೆದ ವರ್ಷ ಐಸಿಸಿ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಆಡಿದ್ದೇ ಕೊನೆ. ಆ ಪಂದ್ಯದಲ್ಲಿ ಸೋತ ಬಳಿಕ ಧೋನಿ ಮತ್ತೆ ಕ್ರಿಕೆಟ್‌ ಪಂದ್ಯವನ್ನೇ ಆಡಿಲ್ಲ.

ಹುಟ್ಟುಹಬ್ಬದ ದಿನ ರಾಂಚಿಯಲ್ಲಿದ್ದು ಸಂಭ್ರಮಾಚರಿಸಿದ ಧೋನಿ ಆವತ್ತು ಅಭಿಮಾನಿಗಳ ಕಣ್ಣಿಗೂ ಕಾಣಿಸಿಕೊಂಡಿದ್ದರು. ಅಭಿಮಾನಿಗಳ ಜೊತೆ ಧೋನಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲವಾದರೂ, ತನ್ನ ನಿವಾಸದ ಬಳಿ ಕೌಂಪೌಂಡಿನೊಳಗಿನಿಂದ ಬೈಕ್ ರೈಡ್ ಹೊರಡುವುದಕ್ಕೂ ಮುನ್ನ ಅಭಿಮಾನಿಗಳತ್ತ ಧೋನಿ ಕೈ ಬೀಸಿದ್ದರು.

ಪತ್ನಿ ಸಾಕ್ಷಿ ಧೋನಿ ಮತ್ತು ಪುತ್ರಿ ಝೀವಾಳ ಜೊತೆ ರಾಂಚಿಯ ತನ್ನ ಮನೆಯಲ್ಲಿ ಸೆಲ್ಫ್ ಐಸೋಲೇಶನ್‌ನಲ್ಲಿರುವ ಧೋನಿ, ಕೌಂಪೌಂಡಿನೊಳಗೆ ಬೈಕ್ ರೈಡ್ ಮಾಡುತ್ತಿರುವ ವೀಡಿಯೊವನ್ನು ಧೋನಿಯ ಅಭಿಮಾನಿ ಸೆರೆಹಿಡಿದ್ದಾರೆ. ಈ ವೀಡಿಯೋವನ್ನು ಎಂಎಸ್ ಧೋನಿ ಫ್ಯಾನ್ಸ್ ಟ್ವಿಟರ್ ಪೇಜ್‌ನಲ್ಲಿ ಹಾಕಿಕೊಳ್ಳಲಾಗಿದೆ.

Story first published: Thursday, July 9, 2020, 22:14 [IST]
Other articles published on Jul 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+