For Quick Alerts
ALLOW NOTIFICATIONS  
For Daily Alerts
 

ಹುಟ್ಟುಹಬ್ಬಕ್ಕಾಗಿ ಎಂಎಸ್ ಧೋನಿ ಕಟ್ಔಟ್; ಅತಿ ಎತ್ತರದ ಕಟ್ಔಟ್ ದಾಖಲೆ ಬರೆದ ಅಭಿಮಾನಿಗಳು

MS Dhonis 41 feet cutout placed in Andhra Pradesh ahead of his 41st birthday

ಕ್ಯಾಪ್ಟನ್ ಕೂಲ್, ಬಹುತೇಕ ಎಲ್ಲಾ ಐಸಿಸಿ ಟ್ರೋಫಿಯನ್ನು ಎತ್ತಿ ಹಿಡಿದ ಟೀಮ್ ಇಂಡಿಯಾದ ಅತೀ ಯಶಸ್ವಿ ನಾಯಕ ಎಂಬ ಖ್ಯಾತಿಯನ್ನು ಹೊಂದಿರುವಂತಹ ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭಿಮಾನಿಗಳು ಆಂಧ್ರಪ್ರದೇಶದ ವಿಜಯವಾಡದಲ್ಲಿ ಎಂ ಎಸ್ ಧೋನಿಯ ಬೃಹತ್ ಕಟೌಟ್ ನಿಲ್ಲಿಸಿದ್ದಾರೆ.

ಜುಲೈ 7ರಂದು ತಮ್ಮ ನೆಚ್ಚಿನ ಕ್ರಿಕೆಟಿಗರ ಹುಟ್ಟುಹಬ್ಬವನ್ನು ಆಚರಿಸಲು ಎಂಎಸ್ ಧೋನಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಎಂ ಎಸ್ ಧೋನಿಗೆ ಅಪಾರವಾದ ಅಭಿಮಾನಿ ಬಳಗವಿದೆ. ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ ದೂರ ಸರಿದು 3 ವರ್ಷಗಳು ಆಗುವ ಸನಿಹಕ್ಕೆ ಬಂದಿದ್ದರೂ ಸಹ ಎಂಎಸ್ ಧೋನಿ ಅಭಿಮಾನಿಗಳ ಸಂಖ್ಯೆಯಲ್ಲಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.

ಎಂಎಸ್ ಧೋನಿ ಅವರ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡುವ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸಲು ತಯಾರಾಗಿದ್ದರೆ, ಇನ್ನೂ ಕೆಲ ಅಭಿಮಾನಿಗಳು ಆಫ್ ಲೈನ್ ಸಂಭ್ರಮಾಚರಣೆ ಮಾಡಲು ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಹೌದು, ಸಿನಿಮಾ ನಟರಿಗೆ ಹೇಗೆ ಆನ್ ಲೈನ್ ಮತ್ತು ಆಫ್ ಲೈನ್ ಸೆಲೆಬ್ರೇಷನ್ ಮಾಡುತ್ತಾರೋ ಅದೇ ರೀತಿ ಎಂಎಸ್ ಧೋನಿ ಹುಟ್ಟುಹಬ್ಬಕ್ಕೂ ಸಹ ಈ ಹಿಂದೆ ಆನ್ ಲೈನ್ ಮತ್ತು ಆಫ್ ಲೈನ್ ಸೆಲೆಬ್ರೇಷನ್ ನಡೆಸಲಾಗಿತ್ತು. ಇನ್ನು ವಿಜಯವಾಡದಲ್ಲಿ ಈ ಬಾರಿ ಹುಟ್ಟುಹಬ್ಬದ ಆಚರಣೆಗಾಗಿ ನಿಲ್ಲಿಸಲಾಗಿರುವ ಧೋನಿಯ ಬೃಹತ್ ಕಟ್ ಔಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅತಿ ಎತ್ತರದ ಕಟೌಟ್ ನಿಲ್ಲಿಸಿದ ದಾಖಲೆ ಬರೆದ ಧೋನಿ ಅಭಿಮಾನಿಗಳು

ಅತಿ ಎತ್ತರದ ಕಟೌಟ್ ನಿಲ್ಲಿಸಿದ ದಾಖಲೆ ಬರೆದ ಧೋನಿ ಅಭಿಮಾನಿಗಳು

ವಿಜಯವಾಡದಲ್ಲಿ ಎಂಎಸ್ ಧೋನಿ ಅಭಿಮಾನಿಗಳು ನಿಲ್ಲಿಸಿರುವ ಎಂಎಸ್ ಧೋನಿಯ ಕಟ್ ಔಟ್ 41 ಅಡಿ ಎತ್ತರದ ಕಟ್ ಔಟ್ ಆಗಿದೆ. ಇದು ಭಾರತದಲ್ಲಿ ಕ್ರಿಕೆಟ್ ಆಟಗಾರನ ಅತಿ ಎತ್ತರದ ಕಟ್ ಔಟ್ ಎಂಬ ಕೀರ್ತಿಯನ್ನು ಪಡೆದುಕೊಂಡಿದೆ.

ಧೋನಿ ಹುಟ್ಟುಹಬ್ಬಕ್ಕಾಗಿ ನಿರ್ಮಿಸಲಾಗುತ್ತಿರುವ ಮೂರನೇ ಕಟ್ ಔಟ್ ಇದು

ಇನ್ನು ಎಂ ಎಸ್ ಧೋನಿ ಹುಟ್ಟುಹಬ್ಬಕ್ಕಾಗಿ ಕಟ್ ಔಟ್ ನಿಲ್ಲಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. 2018ರಲ್ಲಿ ಎಂಎಸ್ ಧೋನಿ ಹುಟ್ಟುಹಬ್ಬಕ್ಕಾಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಧೋನಿಯ ಕಟ್ ಔಟ್ ನಿಲ್ಲಿಸಲಾಗಿತ್ತು. ಕೇರಳದಲ್ಲಿ 35 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗಿತ್ತು ಹಾಗೂ ತಮಿಳುನಾಡಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿ ತೊಟ್ಟಿದ್ದ ಎಂಎಸ್ ಧೋನಿಯ 30 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗಿತ್ತು. ಈ ಬಾರಿ ಆ ಎರಡೂ ಕಟ್ ಔಟ್‌ಗಳಿಗಿಂತ ಎತ್ತರದ ( 41 ಅಡಿ ) ಕಟ್ ಔಟ್ ನಿಲ್ಲಿಸಲಾಗಿದೆ.

ಎಂಎಸ್ ಧೋನಿ ಅಂಕಿ ಅಂಶ

ಎಂಎಸ್ ಧೋನಿ ಅಂಕಿ ಅಂಶ

ಎಂಎಸ್ ಧೋನಿ 90 ಟೆಸ್ಟ್ ಪಂದ್ಯಗಳನ್ನಾಡಿ 6 ಶತಕ ಸಹಿತ 4876 ರನ್ ಕಲೆಹಾಕಿದ್ದಾರೆ, 350 ಏಕದಿನ ಪಂದ್ಯಗಳನ್ನಾಡಿ 10 ಶತಕ ಸಹಿತ 10773 ರನ್ ಬಾರಿಸಿದ್ದಾರೆ ಹಾಗೂ 98 ಅಂತರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿ 1917 ರನ್ ಕಲೆಹಾಕಿದ್ದಾರೆ. ಎಂಎಸ್ ಧೋನಿ ನಾಯಕನಾಗಿ ಟಿ ಟ್ವೆಂಟಿ ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.


ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಒಟ್ಟು 4 ಬಾರಿ ಟ್ರೋಫಿಯನ್ನು ಗೆಲ್ಲಿಸಿ ಯಶಸ್ವಿ ನಾಯಕನಾಗಿರುವ ಎಂಎಸ್ ಧೋನಿ 234 ಐಪಿಎಲ್ ಪಂದ್ಯಗಳನ್ನಾಡಿ 4978 ರನ್ ಕಲೆಹಾಕಿದ್ದಾರೆ.

Story first published: Wednesday, July 6, 2022, 16:44 [IST]
Other articles published on Jul 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+