'ಧೋನಿಯ ಬೆಸ್ಟ್ ಪ್ರದರ್ಶನ ಐಪಿಎಲ್ ದ್ವಿತೀಯಾರ್ಧದಲ್ಲಿ ಬರಲಿದೆ'

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಯ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯಾರ್ಧದಲ್ಲಿ ಬರಲಿದೆ ಎಂದು ಸಿಎಸ್‌ಕೆ ವೇಗಿ ದೀಪಕ್ ಚಾಹರ್ ಹೇಳಿದ್ದಾರೆ. ಫಾರ್ಮ್ ಕಳೆದುಕೊಂಡಿರುವ ಧೋನಿ ದ್ವಿತೀಯಾರ್ಧದಲ್ಲಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ಚಾಹರ್ ಹೇಳಿದ್ದಾರೆ.
ಐಸಿಸಿ ವಿಶ್ವಕಪ್ 2019ರಿಂದಲೂ ಭಾರತದ ಮಾಜಿ ನಾಯಕ ಎಂಎಸ್ ಧೋನಿಯ ಬ್ಯಾಟಿಂಗ್ ಕಳೆಗುಂದಿದೆ. ಅಂತಾರಾಷ್ಟ್ರೀಯ ನಿವೃತ್ತಿಯೂ ನೀಡಿರುವ ಧೋನಿಗೆ ಹೆಚ್ಚಿನ ಅಭ್ಯಾಸವೂ ಸಿಗುತ್ತಿಲ್ಲವಾದ್ದರಿಂದ ಧೋನಿಯ ಬ್ಯಾಟಿಂಗ್ ಮನರಂಜನೆ ಈಚೆಗೇಕೋ ಕಾಣಸಿಗುತ್ತಿಲ್ಲ. 2021ರ ಐಪಿಎಲ್‌ನಲ್ಲಿ ಆಡಿರುವ 7 ಇನ್ನಿಂಗ್ಸ್‌ಗಳಲ್ಲಿ 37 ರನ್ ಗಳಿಸಿರುವುದೇ ಇದಕ್ಕೆ ಸಾಕ್ಷಿ.
ಕೋವಿಡ್-19 ಕಾರಣದಿಂದ ಮುಂದೂಡಲ್ಪಟ್ಟಿರುವ ಐಪಿಎಲ್ 2021ರ ಆವೃತ್ತಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿದೆ. ಸಿಎಸ್‌ಕೆ ಟೂರ್ನಿಯಲ್ಲಿ ಮತ್ತೆ ಬಲಿಷ್ಠ ತಂಡವಾಗಿ ಕಾಣಿಸಿದ್ದು, ಅಂಕಪಟ್ಟಿಯಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದೆ.
'15-20 ವರ್ಷಗಳ ಕಾಲ ಒಬ್ಬ ಬ್ಯಾಟ್ಸ್‌ಮನ್ ಒಂದೇ ರೀತಿ ಬ್ಯಾಟಿಂಗ್ ಮಾಡಲಾರ. ಸಾಮಾನ್ಯ ಕ್ರಿಕೆಟ್ ಆಡದ ಒಬ್ಬ ಆಟಗಾರ ಐಪಿಎಲ್‌ನಂತ ಟೂರ್ನಿಯಲ್ಲಿ ಬಂದು ಆಡೋದು ಖಂಡಿತಾ ಸುಲಭವಲ್ಲ. ಆದರೆ ಧೋನಿಯ ಬ್ಯಾಟಿಂಗ್ ಪ್ರದರ್ಶನ ಮತ್ತೆ ಬರಲಿದೆ. ಐಪಿಎಲ್ ದ್ವಿತೀಯಾರ್ಧದಲ್ಲಿ ನೀವಿದನ್ನು ನಿರೀಕ್ಷಿಸಬಹುದು,' ಎಂದು ಚಾಹರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications