ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಗೆ ಆ ಆಟಗಾರನ ಸೇರ್ಪಡೆ ಮಾಸ್ಟರ್ ಸ್ಟ್ರೋಕ್: ಶ್ರೀಕಾಂತ್

Ms Dhonis Inclusion Into the Indian Team Was a Masterstroke-Kris Srikkanth

ಟೀಮ್ ಇಂಡಿಯಾದಲ್ಲಿ ನೂರಾರು ಆಟಗಾರರು ಆಡಿದ್ದಾರೆ. ಕೆಲವು ಲೆಜೆಂಡ್‌ಗಳನ್ನು ಭಾರತ ವಿಶ್ವ ಕ್ರಿಕೆಟ್‌ಗೆ ನೀಡಿದೆ. ಆದರೆ ಟೀಮ್ ಇಂಡಿಯಾದ ದಿಕ್ಕು ಬದಲಾಗಲು ಒಬ್ಬ ಆಟಗಾರನ ಸೇರ್ಪಡೆ ಬಹಳ ಮುಖ್ಯವಾಯಿತು ಎಂದು ಮಾಜಿ ಕ್ರಿಕೆಟಿಗ ಮತ್ತು ಮಾಜಿ ಆಯ್ಕೆಗಾರರಾದ ಕೆ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಶ್ರೀಕಾಂತ್ ಹೇಳಿದ ಆ ಆಟಗಾರ ಬೇರೆ ಯಾರೂ ಅಲ್ಲ, ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ. ಧೋನಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ ಬಳಿಕ ಟೀಮ್ ಇಂಡಿಯಾದ ಗತಿಯೇ ಬದಲಾಗಿ ಹೋಯಿತು, 2004ರಲ್ಲಿ ಟೀಮ್ ಇಂಡಿಯಾಗೆ ಧೋನಿಯನ್ನು ಸೇರ್ಪಡೆಗೊಳಿಸಬೇಕು ಎಂದು ತೆಗೆದುಕೊಂಡ ನಿರ್ಧಾರ ಬಹಳ ಪ್ರಮುಖ ನಿರ್ಧಾರ ಎಂದು ಶ್ರೀಕಾಂತ್ ಹೇಳಿದ್ದಾರೆ.

ಧೋನಿ ಅಲ್ಲ, ವಿರಾಟ್ ಅಲ್ವೇ ಅಲ್ಲ, ಗಂಭೀರ್ ಹೆಸರಿಸಿದ ಐಪಿಎಲ್ ಬೆಸ್ಟ್ ಕ್ಯಾಪ್ಟನ್!ಧೋನಿ ಅಲ್ಲ, ವಿರಾಟ್ ಅಲ್ವೇ ಅಲ್ಲ, ಗಂಭೀರ್ ಹೆಸರಿಸಿದ ಐಪಿಎಲ್ ಬೆಸ್ಟ್ ಕ್ಯಾಪ್ಟನ್!

ಧೋನಿ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆಯುವವರೆಗೆ ದೊಡ್ಡ ದೊಡ್ಡ ನಗರಗಳ ಆಟಗಾರರು ಮಾತ್ರವೇ ಭಾರತ ತಂಡವನ್ನು ಪ್ರವೇಶಿಸಲು ಸಾಧ್ಯ ಎಂಬ ಪರಿಸ್ಥಿತಿಯಿತ್ತು. ಅದಕ್ಕೆ ಪೂರಕವಾಗಿ ಮುಂಬೈ, ಡೆಲ್ಲಿ ಚೆನ್ನೈನಂತಾ ಬೃಹತ್ ನಗರಗಳಿಂದ ಬಂದ ಆಟಗಾರರೇ ಪ್ರಾಭಲ್ಯವನ್ನು ಮೆರೆಯುತ್ತಿದ್ದರು. ಆದರೆ ರಾಂಚಿಯಂತಾ ಪ್ರದೇಶದಿದ ಬಂದ ಧೋನಿ ಬಳಿಕ ದೇಶದ ಯಾವ ಮೂಲೆಯಲ್ಲಿದ್ದರೂ ಭಾರತ ತಂಡವನ್ನು ಪ್ರವೇಶ ಗಿಟ್ಟಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟರು ಎಂದು ಶ್ರೀಕಾಂತ್ ಹೇಳಿದ್ದಾರೆ.

ಧೋನಿ ಟೀಮ್ ಇಂಡಿಯಾಗೆ ಪ್ರವೇಶವನ್ನು ಪಡೆದ ಬಳಿಕ ದೇಶದ ಮೂಲೆಮೂಲೆಯಲ್ಲಿರುವ ಪ್ರತಿಭಾನ್ವಿತ ಆಟಗಾರರಿಗೆ ಹೊಸ ಭರವಸೆ ಸಿಕ್ಕಂತಾಯಿತು. ಅವರೂ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆಯಲು ಸಾಧ್ಯವಿದೆ ಎಂದು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದರು. ಹೀಗಾಗಿ ಭಾರತದಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಈಗ ಬೆಳಕಿಗೆ ಬರುತ್ತಿವೆ ಎಂದು ಶ್ರೀಕಾಂತ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಖಾನ್ or ಎಂಎಸ್ ಧೋನಿ: ಕೇದಾರ್ ಜಾಧವ್ ಫೇವರಿಟ್ ಯಾರು?ಸಲ್ಮಾನ್ ಖಾನ್ or ಎಂಎಸ್ ಧೋನಿ: ಕೇದಾರ್ ಜಾಧವ್ ಫೇವರಿಟ್ ಯಾರು?

2004ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಮೊದಲು ಧೋನಿ ಆಯ್ಕೆಯಾದರು. ಆರಂಭದ ಕೆಲ ಮ್ಯಾಚ್‌ಗಳಲ್ಲಿ ಧೋನಿ ತಮ್ಮ ಪ್ರಭಾವ ತೋರದಿದ್ದರೂ ಬಳಿಕ ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ ತನ್ನ ಸಾಮರ್ಥ್ಯವೇನು ಅನ್ನೋದನ್ನು ಜಗತ್ತಿಗೆ ಸಾರಿದರು ಧೋನಿ. ಟೀಮ್ ಇಂಡಿಯಾಗೆ ಧೋನಿಯ ಆಗಮನದ ಬಳಿಕ ಭಾರತೀಯ ಕ್ರಿಕೆಟ್ ತಂಡ ಪವರ್ ಹೌಸ್‌ ಆಗಿ ಬದಲಾಯಿತು ಎಂದು ಕೆ ಶ್ರೀಕಾಂತ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

Story first published: Sunday, April 19, 2020, 19:07 [IST]
Other articles published on Apr 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X