ಎಂಎಸ್ ಧೋನಿ ನಿವೃತ್ತಿ ಪಡೆಯುವುದು ಯಾವಾಗ? ಕನ್ನಡಿಗ ಉತ್ತಪ್ಪ ಹೇಳಿದ್ದೇನು?
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಐಪಿಎಲ್ ಆರಂಭವಾಗುವುದಕ್ಕೂ ಮುನ್ನ ಆ ಒಂದು ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕಾಡುತ್ತಿದೆ. ಈ ಬಾರಿಯ ಐಪಿಎಲ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕೊನೆಯ ಐಪಿಎಲ್ ಆಗುತ್ತಾ ಎಂದು. ಈ ಐಪಿಎಲ್‌ನಲ್ಲಿ ಧೋನಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಮತ್ತೊಮ್ಮೆ ಬ್ಯಾಟ್ ಮಾಡುವುದನ್ನು ನೋಡಬಹುದಾಗಿದೆ. ಮಾಹಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಐದು ವರ್ಷಗಳೇ ಕಳೆದಿವೆ, ಅವರು ಇನ್ನೂ ಐಪಿಎಲ್‌ನಲ್ಲಿ ಆಡಿ ಅಭಿಮಾನಿಗಳಿಗೆ ಮುದ ನೀಡುತ್ತಿದ್ದಾರೆ. ಈಗ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿಯ ಬಗ್ಗೆ ಅವರ ಸಹ ತುಟಿ ಬಿಚ್ಚಿದ್ದಾರೆ.
ಧೋನಿ ಐಪಿಎಲ್‌ನಿಂದ ಯಾವಾಗ ನಿವೃತ್ತರಾಗುತ್ತಾರೆ ಎಂಬುದನ್ನು ಇನ್ನೂ ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಇವರ ನಿವೃತ್ತಿಯ ಬಗ್ಗೆ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ರಾಬಿನ್ ಉತ್ತಪ್ಪ ಮಾತನಾಡಿದ್ದಾರೆ. ಈ ಐಪಿಎಲ್ ಋತುವಿನ ನಂತರ ಧೋನಿ ನಿವೃತ್ತರಾದರೂ ನನಗೆ ಆಶ್ಚರ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಅವರಲ್ಲಿ ಇನ್ನು ನಾಲ್ಕು ಐಪಿಎಲ್‌ಗಳನ್ನು ಆಡುವ ಕ್ಷಮತೆ ಇದೆ ಎಂದು ಹೇಳಿದ್ದಾರೆ. ಧೋನಿ ಯಾವಾಗ ನಿವೃತ್ತಿ ಪಡೆಯಬಹುದು ಎಂದು ಅವರಿಗೆ ಮಾತ್ರ ತಿಳಿದಿದೆ ಎಂದು ತಿಳಿಸಿದ್ದಾರೆ.

ಧೋನಿ ಯಾವ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬಹುದು?
ಇನ್ನು ರಾಬಿನ್ ಉತ್ತಪ್ಪ ಇದೇ ಸಂವಾದದಲ್ಲಿ ಮಹೇಂದ್ರ ಸಿಂಗ್ ಧೋನಿ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು ಎಂಬ ಬಗ್ಗೆಯೂ ತುಟಿ ಬಿಚ್ಚಿದ್ದಾರೆ. ಅಂದಹಾಗೆ ಅವರು ಏಳು ಅಥವಾ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲೂ ಇದೇ ರೀತಿ ಆಗಿತ್ತು. ಕ್ರಿಕೆಟ್ ಮೇಲೆ ಧೋನಿ ಅವರ ಉತ್ಸಾಹ ಶಾಶ್ವತ. ಅವರಿಗೆ ಕ್ರೀಡೆಯ ಮೇಲಿನ ಪ್ರೀತಿ ಎಂದಿಗೂ ಕಡಿಮೆ ಆಗಿಲ್ಲ. ಈಗಲೂ ಅವರು ಯುವಕರಿಗೆ ಪೈಪೋಟಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ರುತುರಾಜ್ ಗಾಯಕ್ವಾಡ್ ಅವರ ಮುಂದಾಳತ್ವದಲ್ಲಿ ಆಡಲಿದೆ. ಧೋನಿ ಈ ಬಾರಿ ಅಭ್ಯಾಸ ಸಮಯದಲ್ಲಿ ಮಾಡಿದ ಬ್ಯಾಟಿಂಗ್ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿವೆ. ಇದೇ ವೇಳೆ ಅವರು ಹೆಲಿಕ್ಯಾಪ್ಟರ್ ಶಾಟ್ ಪ್ರಯೋಗಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಾದಾಟ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications