IPL 2025 CSK vs RCB: ಧೋನಿ ಸ್ಟನ್ನಿಂಗ್ ಸ್ಟಂಪಿಂಗ್: ಸಾಲ್ಟ್ ಬಿಗ್ ಇನಿಂಗ್ಸ್ ಆಸೆಗೆ ಮಾಹಿ ತಣ್ಣೀರು
ಟೀಮ್ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ತಮ್ಮ ಚಾಣಕ್ಯ ನಡೆಗಳಿಂದ ಭಾರೀ ಫೇಮಸ್. ಈಗಲೂ ಅದೇ ರೀತಿ ನಿರ್ಣಯಗಳನ್ನು ಧೋನಿ ಕೈಗೊಳ್ಳುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಕ್ರೀಸ್ ಔಟ್ ಮಾಡಿದಾಗ ಸ್ಟಂಪಿಂಗ್ ಮಾಡಿ ಗಮನ ಸೆಳೆದಿದ್ದ ಮಹೇಂದ್ರ ಸಿಂಗ್ ಧೋನಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ಇದೇ ರೀತಿ ಸ್ಟನ್ನಿಂಗ್ ಸ್ಟಂಪಿಂಗ್ ಮಾಡಿದ್ದಾರೆ.
ಆರ್‌ಸಿಬಿ ತಂಡದ ಸ್ಟಾರ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ತಂಡದ ಪರ ಅಬ್ಬರದ ಆರಂಭವನ್ನು ನೀಡಿದ್ದರು. ಇವರು ಅಬ್ಬರದ ಆರಂಭವನ್ನು ನೀಡಿದರು. ರವಿಚಂದ್ರನ್ ಅಶ್ವಿನ್ ಅವರ ಎಸೆದ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಫಿಲ್ ಸಾಲ್ಟ್ ಆರ್ಭಟ ನಡೆಸಿದರು. ಅಶ್ವಿನ್ ಅವರ ಒಂದು ಓವರ್‌ನಲ್ಲಿ ಸಾಲ್ಟ್ ಬರೋಬ್ಬರಿ 16 ರನ್ ಸಿಡಿಸಿ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿದರು. ಇವರ ಆಟವನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದರು.

ಆರ್‌ಸಿಬಿ ಇನಿಂಗ್ಸ್‌ನ 5ನೇ ಓವರ್‌ನ್ನು ಸ್ಪಿನ್ ಬೌಲರ್ ನೂರ್ ಅಹ್ಮದ್ ಅವರಿಗೆ ಬೌಲ್ ಮಾಡಲು ನೀಡಿದರು. ಫಿಲ್ ಸಾಲ್ಟ್ ಕೊಂಚ ಲೆಗ್ ಸ್ಪಿನ್ ಬೌಲರ್‌ಗಳ ವಿರುದ್ಧ ರನ್ ಕಲೆ ಹಾಕುವಲ್ಲಿ ಪರದಾಡುತ್ತಾರೆ ಎಂಬುದನ್ನು ಭಾವಿಸಿದ್ದ ಧೋನಿ, ನೂರ್‌ಗೆ ಬೌಲ್ ನೀಡಿದರು. ಈ ಓವರ್‌ನ ಕೊನೆಯ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಫಿಲ್ ಸಾಲ್ಟ್ ಮುಂದಾದರು. ಈ ವೇಳೆ ಧೋನಿ ಮತ್ತೆ ತಮ್ಮ ಚಮತ್ಕಾರ ತೋರಿಸಿದರು. ಕಳೆದ ಪಂದ್ಯದಲ್ಲಿ ಸೂರ್ಯಕುಮಾರ್ ಅವರಿಗೆ ಮಾಡಿದಂತೆ ಫಿಲ್ ಸಾಲ್ಟ್‌ಗೂ ವೇಗವಾಗಿ ಸ್ಟಂಪಿಂಗ್ ಮಾಡಿದರು.
ಸೂರ್ಯಕುಮಾರ್ ಯಾದವ್ ಅವರನ್ನು ಪೆವೆಲಿಯನ್‌ಗೆ ಕಳುಹಿಸಲು 0.12 ಸೆಕೆಂಡ್‌ಗಳಲ್ಲಿ ಸ್ಟಂಪಿಂಗ್ ಮಾಡಿದರೆ, ಶುಕ್ರವಾರ ನಡೆದ ಪಂದ್ಯದಲ್ಲಿ ಫಿಲ್ ಸಾಲ್ಟ್ ಅವರನ್ನು ಮನೆಗೆ ಕಳುಹಿಸಲು ಧೋನಿ ತೆಗೆದುಕೊಂಡಿದ್ದು ಜಸ್ಟ್ 0.14 ಸೆಕೆಂಡ್ ಮಾತ್ರ. ಇದನ್ನೆಲ್ಲಾ ನೋಡಿದ್ರೆ ಧೋನಿ ಅವರಿಗೆ ಏಜ್ ಜಸ್ಟ್ ನಂಬರ್ ಎಂಬುದು ಅರ್ಥವಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications