For Quick Alerts
ALLOW NOTIFICATIONS  
For Daily Alerts
 

MS Dhoni: ಧೋನಿಗೆ ಇದು ಕೊನೆಯ ಐಪಿಎಲ್‌? ಡೆಲ್ಲಿ ವಿರುದ್ದ ಪಂದ್ಯದಲ್ಲಿ ಕಾಣಿಸಿಕೊಂಡ ಮಾಹಿ ತಂದೆ, ತಾಯಿ

ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಸದ್ಯ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇವರಿಗೆ 43 ವರ್ಷ. ಮಾಹಿ ಐಪಿಎಲ್‌ ಆಡಲು ಮೈದಾನಕ್ಕೆ ಇಳಿದಾಗಲೆಲ್ಲಾ ಈ ಬಾರಿ ಐಪಿಎಲ್‌ನಿಂದ ನಿವೃತ್ತರಾಗುತ್ತಾರೆ ಎಂಬ ಪ್ರಶ್ನೆ ಎದ್ದಿರುತ್ತದೆ. ಆದರೆ ಈ ಪ್ರಶ್ನೆಯನ್ನು ಮಾಹಿ ನಯವಾಗಿ ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಆದರೆ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ತಂದೆ ತಾಯಿ ಪಂದ್ಯ ನೋಡಲು ಚೆನ್ನೈಗೆ ಬಂದಿದ್ದರು. ಇವರು ಮೈದಾನಕ್ಕೆ ಬಂದಿದ್ದರಿಂದ ಹಲವು ಪ್ರಶ್ನೆಗಳು ಎದಿವೆ.

18ನೇ ಆವೃತ್ತಿಯ ಐಪಿಎಲ್‌ನ 17ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್‌ ಫೀಲ್ಡಿಂಗ್ ಮಾಡುವಾಗ ಆಗಾಗ ಕ್ಯಾಮೆರಾ ಚೇರ್‌ ಮೇಲೆ ಕುಳಿತಿದ್ದ ವೃದ್ಧ ದಂಪತಿಗಳತ್ತ ಪೋಕಸ್‌ ಮಾಡುತ್ತಲೇ ಇತ್ತು. ಆಗಲೇ ಅಭಿಮಾನಿಗಳಿಗೆ ತಿಳಿದಿದ್ದು, ಮಾಹಿ ಅವರ ತಂದೆ ಹಾಗೂ ತಾಯಿ ಪಂದ್ಯವನ್ನು ನೋಡಲು ಮೈದಾನಕ್ಕೆ ಬಂದಿದ್ದರು.

MS Dhoni s Parents Attend IPL 2025 Match Against Delhi Capitals Sparking Fresh Retirement Speculation

ಮಹೇಂದ್ರ ಸಿಂಗ್ ಧೋನಿ ಅದೆಷ್ಟೋ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ವೇಳೆ ಯಾವ ಪಂದ್ಯವನ್ನು ನೋಡಲು ಅವರ ಪಾಲಕರು ಮೈದಾನಕ್ಕೆ ಬಂದಿದ್ದು ಕಂಡಿರಲಿಲ್ಲ. ಆದರೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬಂದು ಪಂದ್ಯವನ್ನು ನೋಡಿದರು. ಈ ದೃಶ್ಯ ಸಾಮಾಜಿಕ ತಾಣದಲ್ಲಿ ಚರ್ಚೆಗೆ ಕಾರಣವಾಯಿತು.

ಐಪಿಎಲ್‌ನಿಂದ ಧೋನಿ ನಿವೃತ್ತಿ?

ಮಹೇಂದ್ರ ಸಿಂಗ್ ಧೋನಿ ಅವರ ತಂದೆ ತಾಯಿ ಮೈದಾನಕ್ಕೆ ಬಂದು ಪಂದ್ಯವನ್ನು ವೀಕ್ಷಿಸಿದ್ದನ್ನು ಅಭಿಮಾನಿಗಳು ಭಿನ್ನವಾಗಿ ಕಮೆಂಟ್ ಮಾಡಿದ್ದಾರೆ. ಧೋನಿ ಐಪಿಎಲ್‌ನಿಂದಲೂ ನಿವೃತ್ತಿ ಪಡೆಯಲಿದ್ದಾರೆ ಎಂದು ಹಲವು ಜನ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ 50 ರನ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯ ಸಾಧಿಸುತ್ತಿದ್ದಂತೆ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅಲ್ಲದೆ ಅಭಿಮಾನಿಗಳು ಇನ್ನು ಎಷ್ಟು ದಿನ ಮಾಹಿ ಐಪಿಎಲ್‌ನಲ್ಲಿ ಆಡುತ್ತಾರೆ ಎಂಬುದಾಗಿ ಕೇಳಿದ್ದರು. ಚೆನ್ನೈ ಸೂಪರ್‌ ಕಿಂಗ್ಸ್‌ ಕೋಚ್‌ ಇದಕ್ಕೆ ಉತ್ತರ ನೀಡಿದ್ದರು. ಅವರ ದೇಹ 10 ಓವರ್ ಬೌಲ್‌ ಮಾಡಲು ಸಹಕರಿಸುತ್ತಿಲ್ಲ ಎಂದು ಸ್ಪಷ್ಟನೇ ನೀಡಿದ್ದರು.

ಧೋನಿ ಸಾಧನೆ

ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು. ಇವರ ನಾಯಕತ್ವದಲ್ಲಿ ಟೀಮ್ ಇಂಡಿಯಾ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್‌, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆಯನ್ನು ಮಾಡಿದೆ. ಇನ್ನು ಇವರ ಮುಂದಾಳತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಐಪಿಎಲ್‌ನಲ್ಲಿ ಐದು ಬಾರಿ ಟ್ರೋಫಿ ಗೆದ್ದ ದಾಖಲೆಯನ್ನು ಮಾಡಿದ್ದಾರೆ. ಧೋನಿ ಐಪಿಎಲ್‌ನಲ್ಲಿ 268 ಪಂದ್ಯಗಳನ್ನು ಆಡಿದ್ದು, 5289 ರನ್‌ ಸಿಡಿಸಿದ್ದಾರೆ. ಈ ವೇಳೆ 24 ಅರ್ಧಶತಕ ಬಾರಿಸಿದ್ದಾರೆ.

Story first published: Saturday, April 5, 2025, 17:03 [IST]
Other articles published on Apr 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+