ಕೊರೊನಾದಿಂದ ಚೇತರಿಸಿಕೊಂಡ ಧೋನಿ ಹೆತ್ತವರು, ಆಸ್ಪತ್ರೆಯಿಂದ ಡಿಶ್ಚಾರ್ಜ್

ಕೊರೊನಾ ವೈರಸ್‌ಗೆ ತುತ್ತಾಗಿದ್ದ ಚೆನ್ನೈ ಸೂಪರ್ ನಾಯಕ ಎಂಎಸ್ ಧೋನಿ ಹೆತ್ತವರು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಹೀಗಾಗಿ ರಾಂಚಿಯ ಆಸ್ಪತ್ರೆಗೆ ದಾಖಲಾಗಿದ್ದ ಅವರು ಡಿಶ್ಚಾರ್ಜ್ ಆಗಿದ್ದು ರಾಂಚಿಯ ತಮ್ಮ ಮನೆಗೆ ಮರಳಿದ್ದಾರೆ.
ಕೊರೊನಾ ವೈರಸ್‌ನ ವರದಿ ನೆಗೆಟಿವ್ ಬಂದ ಬಳಿಕ ಧೋನಿ ಹೆತ್ತವರ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಾರದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಧೋನಿ ತಂದೆ ಪಾನ್ ಸಿಂಗ್ ಗಾಲಿಕುರ್ಚಿಯಲ್ಲಿ ಹಾಗೂ ಅವರ ಪಕ್ಕದಲ್ಲಿ ತಾಯಿ ದೇವಕಿ ದೇವಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧೋನಿ ಹೆತ್ತವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಬಳಿಕ ರಾಂಚಿಯಲ್ಲಿರುವ ಪ್ಯೂಲ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಏಪ್ರಿಲ್ 20ರಂದು ದಾಖಲಾಗಿದ್ದರು. ಏಪ್ರಿಲ್ 21ರಂದು ಧೋನಿ ಹೆತ್ತವರ ಆಮ್ಲಜನಕದ ಮಟ್ಟ ಸ್ಥಿರತೆಗೆ ಬಂದಿತ್ತು ಎಂದು ಆಸ್ಪತ್ರೆ ಮಾಹಿತಿಯನ್ನು ನೀಡಿತ್ತು.
ಧೋನಿ ಹೆತ್ತವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಾಗ ಧೋನಿ ಐಪಿಎಲ್‌ನಲ್ಲಿ ಭಾಗಿಯಾಗಿದ್ದರು. ಬಳಿಕವೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆಯೇ ಮುಂದುವರಿದ್ದರು ಧೋನಿ, ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್‌ಮೆಂಟ್ ಧೋನಿ ಹೆತ್ತವರ ಆರೋಗ್ಯದ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳುತ್ತಿರುವುದಾಗಿ ಚೆನ್ನೈ ಕೋಚ್ ಸ್ಟೀಫನ್ ಫ್ಲೆಮಿಂಗ್ ವಿವರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications