Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾಗೆ ಧೋನಿ ಕಮ್‌ ಬ್ಯಾಕ್‌ಗೆ 'ಕನ್ನಡಿಗ' ಅಡ್ಡಿ ಎಂದ ಸೆಹ್ವಾಗ್

Ms Dhonis Return To Indian Team Looks Difficult: Virender Sehwag

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡ್ತಾರಾ ಇಲ್ವಾ ಅನ್ನೋದು ಬಹುದೊಡ್ಡ ಪ್ರಶ್ನೆಯಾಗಿದೆ. ಧೋನಿ ಕಮ್‌ಬ್ಯಾಕ್‌ಗೆ ವೇದಿಕೆಯಾಗಬಹುದೆಂದು ಅಂದಿಕೊಂಡಿದ್ದ ಐಪಿಎಲ್ ಮುಂದೂಡಿಕೆಯಾಗಿ ತೂಗುಯ್ಯಾಲೆಯಲ್ಲಿದೆ.

ಈ ಮಧ್ಯೆ ಧೋನಿ ಕಮ್‌ಬ್ಯಾಕ್ ಬಗ್ಗೆ ವೀರೇಂದ್ರ ಸೆಹ್ವಾಗ್ ಹೇಳಿಕೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾಗೆ ಧೋನಿ ವಾಪಾಸ್ಸಾಗುವುದಾದರೆ ತಂಡದಲ್ಲಿ ಆಗುವ ಬದಲಾವಣೆ ಏನು ಎಂದು ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿಕೆಯನ್ನು ನೋಡಿದ್ದಾರೆ.

ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಧೋನಿ ಕಮ್‌ಬ್ಯಾಕ್ ಬಗ್ಗೆ ಏನು ಹೇಳಿದ್ದಾರೆ ಮುಂದೆ ಓದಿ

ಸೆಹ್ವಾಗ್ ಹೇಳಿದ್ದೇನು

ಸೆಹ್ವಾಗ್ ಹೇಳಿದ್ದೇನು

ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಮರಳುವುದು ತುಂಬಾ ಕಠಿಣ ವಿಚಾರ ದಾದರೆ ಟೀಮ್ ಇಂಡಿಯಾದಲ್ಲಿ ಯಾವ ಸ್ಥಾನದಲ್ಲಿ ಆಡುತ್ತಾರೆ ಎಂಬುದು ಪ್ರಶ್ನೆಯಾಗಿದೆ ಎಂದಿದ್ದಾರೆ ಸೆಹ್ವಾಗ್. ಟೀಮ್ ಇಂಡಿಯಾದಲ್ಲಿ ಕೆ.ಎಲ್‌ ರಾಹುಲ್ ಮತ್ತು ರಿಷಬ್ ಪಂತ್ ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂದಿದ್ದಾರೆ.

'ರಾಹುಲ್, ಪಂತ್ ಕೈ ಬಿಡಲು ಸಾಧ್ಯವಿಲ್ಲ

'ರಾಹುಲ್, ಪಂತ್ ಕೈ ಬಿಡಲು ಸಾಧ್ಯವಿಲ್ಲ"

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಮರಳ ಬೇಕಾದರೆ ಕೆ.ಎಲ್ ರಾಹುಲ್ ಸ್ಥಾನವನ್ನು ಕೈಬಿಡಬೇಕಾಗುತ್ತದೆ. ಆದರೆ ಕೆ.ಎಲ್ ರಾಹುಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಪಂತ್‌ಅವರನ್ನು ಕೂಡ ತಂಡದಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.

ಆಕಾಶ್ ಚೋಪ್ರಾ ಕೂಡ ಪ್ರತಿಕ್ರಿಯಿಸಿದ್ದರು

ಆಕಾಶ್ ಚೋಪ್ರಾ ಕೂಡ ಪ್ರತಿಕ್ರಿಯಿಸಿದ್ದರು

ಧೋನಿ ಕಮ್‌ಬ್ಯಾಕ್ ವಿಚಾರವಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ಕಾಮೆಂಟೇಟರ್ ಆಕಾಶ್ ಚೋಪ್ರಾ ಕೂಡ ಪ್ರತಿಕ್ರಿಯಿಸಿದ್ದರು. ಮಹೇಂದ್ರ ಸಿಂಗ್ ಧೋನಿ ಟೀಮ್‌ಗೆ ವಾಪಸ್ಸಾಗಲು ಸ್ವತಃ ಧೋನಿ ಬಯಸಿದರೆ ಮರಳುವುದು ದೊಡ್ಡ ವಿಚಾರವಲ್ಲ ಎಂದಿದ್ದರು.

ಐಪಿಎಲ್ ಮುಂದೂಡಿಕೆ ನಂತರ ಧೋನಿ ಭವಿಷ್ಯದ ಪ್ರಶ್ನೆ

ಐಪಿಎಲ್ ಮುಂದೂಡಿಕೆ ನಂತರ ಧೋನಿ ಭವಿಷ್ಯದ ಪ್ರಶ್ನೆ

ಐಪಿಎಲ್‌ನಲ್ಲಿನ ಪ್ರದರ್ಶನದ ಆಧಾರದಲ್ಲಿ ಟೀಮ್ ಇಂಡಿಯಾಗೆ ಧೋನಿ ಮರಳಬಹುದು ಎಂದು ಧೋನಿ ಅಭಿಮಾನಿಗಳ ಊಹೆಯಾಗಿತ್ತು. ಆದರೆ ಸದ್ಯ ಐಪಿಎಲ್ 2020 ಯ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ. ಹೀಗಾಗಿ ಧೋನಿ ಕಮ್‌ಬ್ಯಾಕ್ ಮತ್ತೆ ಚರ್ಚೆಯ ವಸ್ತುವಾಗಿದೆ.

ಕಠಿಣ ಅಭ್ಯಾಸದಲ್ಲಿ ತೊಡಗಿದ್ದ ಧೋನಿ

ಕಠಿಣ ಅಭ್ಯಾಸದಲ್ಲಿ ತೊಡಗಿದ್ದ ಧೋನಿ

ಐಪಿಎಲ್ ಆರಂಭದ ಹಿನ್ನೆಲೆಯಲ್ಲಿ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಆಗಮಿಸಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು. ಧೋನಿಗೆ ಚೆನ್ನೈ ತಂಡದ ಇತರ ಸದಸ್ಯರೂ ಸಾಥ್ ನೀಡುತ್ತಿದ್ದರು. ಧೋನಿ ಅಭ್ಯಾಸವನ್ನು ವೀಕ್ಷಿಸಲು ಚೆನ್ನೈ ಕ್ರೀಡಾಂಗಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದರು.

ರಾಂಚಿಗೆ ಮರಳಿದ ಧೋನಿ

ರಾಂಚಿಗೆ ಮರಳಿದ ಧೋನಿ

ಐಪಿಎಲ್ ಮುಂದೂಡಿಕೆಯ ನಂತರ ಚೆನ್ನೈ ತನ್ನ ಅಭ್ಯಾಸ ಶಿಬಿರವನ್ನು ಕೂಡ ಮುಂದೂಡುವ ನಿರ್ಧಾರವನ್ನು ಪ್ರಕಟಿಸಿತು. ಹೀಗಾಗಿ ಅಭ್ಯಾಸದಲ್ಲಿ ನಿರತರಾಗಿದ್ದ ಮಹೇಂದ್ರ ಸಿಂಗ್ ಧೋನಿ ಚೆನ್ನೈನಿಂದ ತಮ್ಮ ತವರು ರಾಂಚಿಗೆ ವಾಪಾಸಾಗಿದ್ದಾರೆ.

ಕಮ್‌ಬ್ಯಾಕ್ ಬಗ್ಗೆ ತುಟಿ ಬಿಚ್ಚದ ಧೋನಿ

ಕಮ್‌ಬ್ಯಾಕ್ ಬಗ್ಗೆ ತುಟಿ ಬಿಚ್ಚದ ಧೋನಿ

ಧೋನಿ ಕಮ್‌ಬ್ಯಾಕ್ ಬಗ್ಗೆ ನಿರಂತರವಾಗಿ ಸಾಕಷ್ಟು ರೀತಿಯಲ್ಲಿ ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಇದಕ್ಕೆ ಮಹೇಂದ್ರ ಸಿಂಗ್ ಧೋನಿ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆಯನ್ನು ನೀಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ಧೋನಿಯ ಮನಸಿನಲ್ಲಿ ಏನಿದೆ ಎನ್ನುವುದು ಎಲ್ಲರ ಕುತೂಹಲವಾಗಿದೆ.

Story first published: Saturday, March 21, 2020, 9:00 [IST]
Other articles published on Mar 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+