For Quick Alerts
ALLOW NOTIFICATIONS  
For Daily Alerts
 

ಪಿಚ್ ರೋಲರ್ ಚಲಾಯಿಸಿದ ಮಾಜಿ ನಾಯಕ ಧೋನಿ: ವಿಡಿಯೋ

MS Dhonis Video Of Driving Pitch Roller Goes Viral

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಕ್ರಿಕೆಟ್‌ಗಿಂತ ಕ್ರಿಕೆಟೇತರ ಚಟುವಟಿಕೆಯಲ್ಲೇ ಸದ್ದು ಮಾಡಿತ್ತಿದ್ದಾರೆ. ವಿಶ್ವಕಪ್‌ಬಳಿಕ ಯಾವುದೇ ಪಂದ್ಯಗಳಲ್ಲೂ ಕಾಣಿಸಿಕೊಳ್ಳದ ಧೋನಿಯನ್ನು ಕ್ರಿಕೆಟ್‌ ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಡೆಗೂ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಆದರೆ ಈ ಬಾರಿಯೂ ಕ್ರಿಕೆಟ್ ಆಟದ ಕಾರಣಕ್ಕೆ ಸುದ್ದಿಯಾಗಿಲ್ಲ. ಬದಲಾಗಿ ಕ್ರಿಕೆಟ್ ಪಿಚ್ ಸಿದ್ದಪಡಿಸುವ ರೋಲರ್‌ಅನ್ನು ಧೋನಿ ಚಲಾಯಿಸಿ ಸದ್ದು ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಟೀಮ್ ಇಂಡಿಯಾ ಮಾಜಿ ನಾಯಕ ಧೋನಿಗೆ ವಾಹನಗಳ ಕ್ರೇಜ್ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ಕ್ರೇಜ್ ಈಗ ರೋಲರ್‌ಅನ್ನು ಓಡಿಸುವಂತೆ ಮಾಡಿದೆ. ರಾಂಚಿಯ ಜೆಎಸ್‌ಸಿಎ ಕ್ರಿಕೆಟ್ ಅಂಗಳದಲ್ಲಿ ಪಿಚ್ ರೋಲರ್ ಅನ್ನು ಮಹೇಂದ್ರ ಸಿಂಗ್ ಧೋನಿ ಓಡಿಸಿದ್ದಾರೆ. ಇದರ ವಿಡಿಯೋವನ್ನು ಎಂ.ಎಸ್ ಧೋನಿ ಫ್ಯಾನ್ಸ್ ಅಫೀಶಿಯಲ್ ಪೇಜ್ ಹಂಚಿಕೊಂಡಿದ್ದು ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ.

ವಿಶ್ವಕಪ್‌ ಬಳಿಕ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಯಾವುದೇ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ವಿಶ್ವಕಪ್‌ ಬಳಿಕ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಧೋನಿ ಕಾಣಿಸಿಕೊಳ್ಳಲಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಮಾರ್ಚ್ 29 ರಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ಮರ್ಚ್ ಮೂರವೇ ತಾರೀಕಿನಿಂದ ಸುರೇಶ್ ರೈನಾ ಜೊತೆಗೆ ಅಭ್ಯಾಸಕ್ಕೆ ಇಳಿಯಲಿದ್ದಾರೆ. ಎಂ.ಎ ಚಿದಂಬರಂ ಸ್ಟೇಡಿಯಮ್‌ನಲ್ಲಿ ಧೋನಿ ಇತರ ಆಟಗಾರರ ಜೊತೆಗೆ ಅಭ್ಯಾಸವನ್ನು ಆರಂಭಿಸಲಿದ್ದಾರೆ.

Story first published: Friday, February 28, 2020, 14:34 [IST]
Other articles published on Feb 28, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+