ಎಂಎಸ್ ಧೋನಿ ಪತ್ನಿ ಸಾಕ್ಷಿ, ಗನ್ ಲೈಸನ್ಸ್ ಕೇಳಿದ್ದೇಕೆ?


ರಾಂಚಿ, ಜೂನ್ 20: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಅವರು ಗನ್ ಲೈಸನ್ಸ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಬಂದಿದೆ.
ಜೀ ಮಾಧ್ಯಮದ ವರದಿಯಂತೆ ಸಾಕ್ಷಿ ಅವರು .32 ರಿವಾಲ್ವರ್ ಅಥವಾ ಪಿಸ್ತೂಲ್ ಬಳಕೆ ಮಾಡಲು ಲೈಸನ್ಸ್ ಕೋರಿದ್ದಾರೆ. ಬಹುತೇಕವಾಗಿ ಮನೆಯಲ್ಲಿ ಏಕಾಂಗಿಯಾಗಿರುತ್ತೇನೆ. ಜತೆಗೆ ವೈಯಕ್ತಿಕ ಕೆಲಸದ ಕಾರಣ ಹೊರಗಡೆ ಓಡಾಡುವುದರಿಂದ ಜೀವ ರಕ್ಷಣೆಗಾಗಿ ಗನ್ ಬಳಕೆ ಅಗತ್ಯ ಎಂಬ ಕಾರಣ ನೀಡಿ, ಗನ್ ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
2010ರಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಗನ್ ಲೈಸನ್ಸ್ ಪಡೆದುಕೊಂಡಿದ್ದರು. ಇದಕ್ಕಾಗಿ 2008ರಲ್ಲಿ 9ಎಂಎಂ ಗನ್ ಗಾಗಿ ರಾಂಚಿ ಜಿಲ್ಲಾಡಳಿತಕ್ಕೆ ಅರ್ಜಿ ಹಾಕಿದ್ದರು. ಕೇಂದ್ರ ಗೃಹ ಸಚಿವಾಲಯಕ್ಕೆ ಈ ಅರ್ಜಿಯನ್ನು ಕಳಿಸುವುದಕ್ಕೂ ಮುನ್ನ ಧೋನಿ ಅವರು ತಮ್ಮ ಚಾರಿತ್ರ್ಯ ಪ್ರಮಾಣ ಪತ್ರವನ್ನು ನೀಡಬೇಕಾಯಿತು.
ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಧೋನಿ ಅವರು ಕೋಲ್ಕತ್ತಾ ಪೊಲೀಸ್ ಅಕಾಡೆಮಿಯಲ್ಲಿ ತಮ್ಮ ಶೂಟಿಂಗ್ ಕೌಶಲ್ಯ ಪ್ರದರ್ಶಿಸಿದ್ದರು. ಕೋಲ್ಕತ್ತಾ ಪೊಲೀಸರು ಈ ವಿಡಿಯೋವನ್ನು ಫೇಸ್ ಬುಕ್ ಗೆ ಹಾಕಿ, 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications