MS Dhoni Anniversary: ಸರಳವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಎಂಎಸ್ ಧೋನಿ-ಸಾಕ್ಷಿ; ವಿಡಿಯೋ ವೈರಲ್
ಜುಲೈ 4 ಗುರುವಾರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಜೀವನದ ಬಗ್ಗೆ ಎಲ್ಲರಿಗೂ ತಿಳಿದಿದೆ. ಕ್ಯಾಪ್ಟನ್ ಕೂಲ್ ಕುರಿತಾದ 'ಎಂಎಸ್ ಧೋನಿ ದಿ ಅನ್‌ಟೋಲ್ಡ್ ಸ್ಟೋರಿ' ಸಿನಿಮಾದಲ್ಲಿ ಎಲ್ಲರೂ ಮಾಹಿಯ ಜೀವನವನ್ನು ನೋಡಿದ್ದಾರೆ.
ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ದಿ.ಸುಶಾಂತ್ ಸಿಂಗ್ ರಜಪೂತ್ ಧೋನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಮೈದಾನದ ಹೊರಗೆ ಮತ್ತು ಒಳಗೆ ಇದ್ದ ಧೋನಿಯನ್ನು ಸುಶಾಂತ್ ಸಿಂಗ್ ಪರದೆ ಅದ್ಭುತವಾಗಿ ತಂದಿದ್ದರು. ಈ ಸಿನಿಮಾ ಬಿಡುಗಡೆಗೂ ಮುನ್ನ ಎಲ್ಲೆಡೆ ಭಾರೀ ಪ್ರಶಂಸೆ ಗಳಿಸಿತ್ತು.

ಟೀಮ್ ಇಂಡಿಯಾಗೆ ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲುವ ಮೊದಲು ಧೋನಿ ಜೀವನ ಹೇಗಿತ್ತು ಎಂಬುದನ್ನು ಬಿಚ್ಚಿಡಲಾಗಿತ್ತು. ತನ್ನ ಮೊದಲ ಪ್ರೀತಿಯನ್ನು ಕಳೆದುಕೊಂಡ ನಂತರ ಧೋನಿ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು. ಆದರೆ ಕುಗ್ಗಿದ ಧೋನಿ ಬಾಳಿಗೆ ಆಸೆಯಾಗಿದ್ದು ಮಾತ್ರ ಸಾಕ್ಷಿ.
ಹೌದು ಸುಮಾರು 15 ವರ್ಷಗಳ ಹಿಂದೆ ಎಂಎಸ್ ಧೋನಿ ರಹಸ್ಯವಾಗಿ ಮದುವೆಯಾಗಿದ್ದರು. ಇದೀಗ 15ನೇ ವಿವಾಹ ವಾರ್ಷಿಕೋತ್ಸವದಲ್ಲೂ ಇಬ್ಬರ ನಡುವೆ ಅದೇ ಪ್ರೀತಿ ಕಾಣುತ್ತಿದೆ.
ಇಂದು ದಿಗ್ಗಜ ಕ್ರಿಕೆಟಿಗ ಎಂಎಸ್ ಧೋನಿ ತಮ್ಮ ವಿವಾಹ ವಾರ್ಷಿಕೋತ್ಸವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.
15ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಧೋನಿ ತಮ್ಮ ಪತ್ನಿ ಸಾಕ್ಷಿ ಜೊತೆ ಕೇಕ್ ಕಟ್ ಮಾಡಿದ್ದಾರೆ. ಈ ಸಾಮಾಜಿಕ ಜಾಲತಾಣದಲ್ಲಿ ಸಖತ್ ವಿಡಿಯೋ ವೈರಲ್ ಆಗಿದೆ.
ಧೋನಿ ಲವ್‌ಸ್ಟೋರಿ
ಧೋನಿ ಚಿತ್ರದ ಪ್ರಕಾರ, ಮಹಿ ಮತ್ತು ಸಾಕ್ಷಿ 2007 ರಲ್ಲಿ ಕೋಲ್ಕತ್ತಾದ ತಾಜ್ ಹೋಟೆಲ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿರುತ್ತಾರೆ. ಈ ಸಮಯದಲ್ಲಿ ಸಾಕ್ಷಿ ಆ ಹೋಟೆಲ್‌ನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುತ್ತಾರೆ. ಅಲ್ಲಿಂದ ಧೋನಿ ಮತ್ತು ಸಾಕ್ಷಿ ಇಬ್ಬರೂ 2 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ 2010ರಲ್ಲಿ ವಿವಾಹವಾಗುತ್ತಾರೆ.
2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಎಂಎಸ್ ಧೋನಿ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಸಾಕ್ಷಿ ಮತ್ತು ಮಗಳು ಝಿವಾ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಧೋನಿಯ ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಬಹುದಾಗಿದೆ.
ಈಗ 15ನೇ ವಿವಾಹ ವಾರ್ಷಿಕೋತ್ಸವದಂದು ಧೋನಿಯ ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಮಹಿ ತಮ್ಮ ಪತ್ನಿಯೊಂದಿಗೆ ಕೇಕ್ ಕತ್ತರಿಸುತ್ತಿರುವುದು ಕಾಣಬಹುದು.
ಸಾಮಾಜಿಕ ಜಾಲತಾಣದಿಂದ ಧೋನಿ ದೂರ
ಟೀಂ ಇಂಡಿಯಾದ ಮಾಜಿ ನಾಯಕ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇನೂ ಸಕ್ರಿಯವಾಗಿಲ್ಲ. ಆದರೆ ಮಹಿ ಪೋಸ್ಟ್ ಹಾಕಿದಾಗಲೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಲೆ ಎಬ್ಬಿಸುತ್ತದೆ. ಜೂನ್ 29 ರಂದು ಟೀಮ್ ಇಂಡಿಯಾದ ವಿಶ್ವಕಪ್ದ್ ಗೆದ್ದಾಗ ಧೋನಿ ಹೃದಯ ಸ್ಪರ್ಶಿಸುವ ಪೋಸ್ಟ್ ಮಾಡಿದಾಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಚೊಚ್ಚಲ ಟಿ20 ವಿಶ್ವಕಪ್ 2007ರಲ್ಲಿ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆದ್ದಿತ್ತು. ಇದೀಗ ರೋಹಿತ್ ಶರ್ಮಾ 17 ವರ್ಷಗಳ ಈ ಬರವನ್ನು ನೀಗಿಸಿದ್ದಾರೆ. ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಇಡೀ ತಂಡವನ್ನು ಅಭಿನಂದಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications